Featured
ವರಮಹಾಲಕ್ಷ್ಮಿಗಿಲ್ಲ ಕೊರೊನಾ ಭಯ – ಮಾರುಕಟ್ಟೆಗಳಲ್ಲಿ ಜನವೋ ಜನ..!
ರೈಸಿಂಗ್ ಕನ್ನಡ :
ಬೆಂಗಳೂರು :
ಕೊರೊನಾಕ್ಕೆ ಜನರು ಹೆದರಿದ್ದಾರೋ. ಇಲ್ಲ ಜನರಿಗೆ ಕೊರೊನಾ ಹೆದರಿದ್ಯೋ ಗೊತ್ತಿಲ್ಲ. ಯಾಕಂದ್ರೆ ರಾಜ್ಯದ ಜಿಲ್ಲಾ ಕೇಂದ್ರಗಳ ಸ್ಥಿತಿ ಹೀಗೆ ಆಗಿ ಹೋಗಿದೆ. ಅದ್ರಲ್ಲೂ ಬೆಂಗಳೂರಿನಲ್ಲಂತೂ ಜನ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ವರಮಹಾಲಕ್ಷ್ಮೀ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಹಬ್ಬದ ಹಿನ್ನಲೆಯಲ್ಲಿ ಎಲ್ಲಾ ಮಾರುಕಟ್ಟೆಗಳಲ್ಲೂ ಜನಜಂಗುಳಿ ಇದೆ. ಮಲ್ಲೇಶ್ವರದಲ್ಲೂ ವ್ಯಾಪರ ವಹಿವಾಟ ಜೋರಾಗಿ ಸಾಗಿದೆ.
ಇಷ್ಟು ದಿನ ವ್ಯಾಪಾರವಿಲ್ಲದೇ ಚಿಂತಿಸುತ್ತಿದ್ದ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ
ಮೂಡಿದೆ. ಒಂದು ಮಾರು ಹೂವಿನ ಬೆಲೆ 200 ರೂಪಾಯಿ ಆಗಿ ಹೋಗಿದೆ. ಹೂವು , ಹಣ್ಣು, ಮಾವಿನ ಎಲೆ. ಬಾಳೇ ಕಂಬದ ಬೆಲೆಗಳಲ್ಲಿ ಏರಿಕೆಯಾಗಿದೆ.
ಲಕ್ಷ್ಮೀ ಅಲಂಕಾರಕ್ಕೆ ಬೇಕಾದ ವಸ್ತುಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಬುಧವಾರದಿಂದಲೇ ಗ್ರಾಹಕರು ಮಾರುಕಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗುರುವಾರ ಸಂಜೆ ವೇಳೆಗೆ ವಸ್ತುಗಳ ಬೆಲೆಯಲ್ಲಿ ಇನ್ನೂ ಏರಿಕೆಯಾಗೋ ಸಾಧ್ಯತೆ ಇದೆ.
ಕೆಲವು ಕಡೆಯಂತೂ ಕೊರೊನಾ ಭೀತಿಯಿಂದಾಗಿ, ಕಡಿಮೆ ವಸ್ತುಗಳನ್ನ ಮಾರಾಟಕ್ಕೆ ತಂದಿದ್ದ ಜನರು, ಬೇಗ ಬೇಗ ವ್ಯಾಪರ ಮುಗಿಸಿ ತಮ್ಮ ತಮ್ಮ ಊರುಗಳಿಗೆ ಹೊರಟಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?