Featured
ದೆವ್ವದ ಪ್ರಾಂಕ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಗಳಾದ ವಿದ್ಯಾರ್ಥಿಗಳು..!

ಬೆಂಗಳೂರು : ಆಧುನಿಕ ಜಗತ್ತಿನಲ್ಲಿ ಡಿಜಿಟಲ್ ಮೀಡಿಯಾ ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ. ಯೂಟ್ಯೂಬ್, ಫೇಸ್ಬುಕ್, ಹಲೋ, ಟಿಕ್ಟಾಕ್ ಸೇರಿದಂತೆ ಹಲವು ರೀತಿಯ ಡಿಜಿಟಲ್ ಫ್ಲಾಟ್ಫಾರ್ಮ್ ಇತ್ತೀಚೆಗೆ ಜೋರಾಗಿಯೇ ಸದ್ದು ಮಾಡ್ತಿದೆ. ಹೀಗೆ, ಡಿಜಿಟಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲು ದೆವ್ವದ ಪ್ರಾಂಕ್ ವಿಡಿಯೋ ಮಾಡಲು ಹೋಗಿ, ಬೆಂಗಳೂರಿನ ವಿದ್ಯಾರ್ಥಿಗಳು ಈಗ ಪೇಚಿಗೆ ಸಿಲುಕಿ, ಪೊಲೀಸರ ಅತಿಥಿಗಳಾಗಿದ್ದಾರೆ.
ಭಾನುವಾರ ತಡರಾತ್ರಿ ಸುಮಾರು 2 ಗಂಟೆಯಲ್ಲಿ ದೆವ್ವದ ಮುಖವಾಡ ಧರಿಸಿ ಪ್ರಾಂಕ್ ಮಾಡಿದ್ದಾರೆ. ಈ ರೀತಿ ದೆವ್ವದ ರೀತಿ ನಟಿಸಿ, ಸಾರ್ವಜನಿಕರನ್ನು ಹೆದರಿಸುವ ರೀತಿ ಪ್ರಾಂಕ್ ಮಾಡಿದ್ದಾರೆ. ಯುವಕರ ಹುಚ್ಚಾಟದಿಂದ ಸಿಟ್ಟಿಗೆದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ದೂರಿನಿಂದ ಎಚ್ಚೆತ್ತ ಪೊಲೀಸರು, ಹೀಗೆ ಪ್ರಾಂಕ್ ಮಾಡ್ತಿದ್ದ ಏಳು ಯುವಕರನ್ನ ಯಶವಂತಪುರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯುವಕರ ಜೊತೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮೆರಾ, ಸಾಮಗ್ರಿಗಳನ್ನ ವಶಕ್ಕೆ ಪಡೆಯಲಾಗಿದೆ. ಏಳು ವಿದ್ಯಾರ್ಥಿಗಳು, ಇಂಜಿನಿಯರಿಂಗ್ ಹಾಗೂ ಬಿಬಿಎಂ ಓದ್ತಿದ್ರು. ಶಾನ್ ಮಲಿಕ್, ನವೀದ್, ಸಾಜಿಲ್ ಮಹಮದ್, ಮಹಮದ್ ಅಕ್ಯೂಬ್, ಸಾಕೀಬ್, ಸೈಯದ್ ನಬೀಲ್ ಹಾಗೂ ಯೂಸುಫ್ ಅಹಮದ್ ಎಂಬ ಏಳು ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















