Featured
ಬೆಂಗಳೂರು ಬಿಡಬೇಡಿ… ನಿಮ್ಮ ಆರೋಗ್ಯ ನಮ್ಮ ಹೊಣೆ – ಸರಕಾರದ ಜೊತೆ ಕೈ ಜೋಡಿಸಿ- ಸಿಎಂ ಮನವಿ

ರೈಸಿಂಗ್ ಕನ್ನಡ:
ಬೆಂಗಳೂರು:
ಕೊರೊನಾ ಮಹಾಮಾರಿ ವಿಶ್ವದೆಲ್ಲೆಡೆ ರಣಕೇಕೆ ಹಾಕ್ತಿದೆ. ಭಾರತದಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕರ್ನಾಟಕ ಸರಕಾರವೂ ಕೊರೊನಾ ವೈರಸ್ ಹರಡಂತೆ ಸಾಕಷ್ಟಯ ಕ್ರಮ ಕೈಗೊಂಡ್ರೂ ಅಂದುಕೊಂಡ ಹಾಗೇ ಯಾವುದೂ ನಡೆಯುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲಂತೂ ಕೋವಿಡ್19 ಪಾಸಿಟಿವ್ ಪ್ರಕರಣಗಳು ಎಲ್ಲರನ್ನೂ ಬೆಚ್ಚಿ ಬೀಳಿಸ್ತಿದೆ. ನಮ್ಮ ಬೆಂಗಳೂರು ಎತ್ತ ಸಾಗ್ತಿದೆ ಅನ್ನೋದನ್ನ ಊಹೆ ಮಾಡಲು ಕೂಡ ಕಷ್ಟವಾಗ್ತಿದೆ.
ನಗರದ ಮೂಲೆ ಮೂಲೆಗೂ ಡೆಡ್ಲಿ ವೈರಸ್ ವ್ಯಾಪಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆ 1514ಕ್ಕೆ ಏರಿಕೆಯಾಗಿದೆ. ಈ ಪೈಕಿ 1423 ಕಂಟೈನ್ಮೆಂಟ್ ಝೋನ್ನಲ್ಲಿ ಕರೋನಾ ಆ್ಯಕ್ಟೀವ್ ಕೇಸ್ಗಳಿವೆ. ಪಶ್ಚಿಮ ವಿಭಾಗ ಒಂದರಲ್ಲೇ 791 ಆ್ಯಕ್ಟೀವ್ ಕಂಟೈನ್ಮೆಂಟ್ ಝೋನ್ಗಳಿವೆ. ಬೆಂಗಳೂರು ಪೂರ್ವ ವಲಯದಲ್ಲಿ 242 ಆ್ಯಕ್ಟೀವ್ ಕಂಟೈನ್ಮೆಂಟ್ ಝೋನ್ಗಳನ್ನು ಬಿಬಿಎಂಪಿ ಗುರುತಿಸಿದೆ. ಬೆಂಗಳೂರಿನ ದಕ್ಷಿಣ ವಲಯದಲ್ಲಿ 118 ಆ್ಯಕ್ಟೀವ್ ಕಂಟೈನ್ಮೆಂಟ್ ಝೋನ್ಗಳಿವೆ. ನಗರದಲ್ಲಿ ಕಳೆದ 10 ದಿನದಲ್ಲಿ ಪಾಸಿಟಿವಿಟಿ ರೇಟ್ 15.89 %ಕ್ಕೆ ಜಿಗಿತ ಕಂಡಿದ್ದು ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.

ಬೆಂಗಳೂರು ನಗರದಲ್ಲಿ ಇದುವರೆಗೆ ಕೇವಲ 1 ಲಕ್ಷದ 24 ಸಾವಿರದ 431 ಕೊರೊನಾ ಟೆಸ್ಟ್ಗಳು ನಡೆದಿದೆ. ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿಗೂ ಅಧಿಕ ಇದೆ. ಹೀಗಾಗಿ ಸರಕಾರದ ವಿರುದ್ಧ ವಿರೋಧ ಪಕ್ಷಗಳು ಹರಿಹಾಯುತ್ತಿವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಸರಕಾರ ವಿಫಲವಾಗಿದೆ ಅನ್ನೋ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿದೆ.
ಈ ಮಧ್ಯೆ ಸಿಎಂ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರುವಿಧಾನಸೌಧದಲ್ಲಿ ಕುಳಿತು ಎಲ್ಲ ಕಡತಗಳನ್ನ ಪರಿಶೀಲನೆ ಮಾಡಲಿ. ತಪ್ಪು ಕಂಡು ಬಂದರೆ, ಯಾವುದೇ ಅಧಿಕಾರಿ ತಪ್ಪು ಮಾಡಿದ್ದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ತೇವೆ ಎಂದು ಹೇಳಿದ್ದಾರೆ.
ಕೊರೊನಾಕ್ಕೆ ಹೆದರಿ ಬೆಂಗಳೂರು ಬಿಟ್ಟು ಹೊರಟಿರುವ ಜನರಿಗೂ ಸಿಎಂ ಅಭಯ ನೀಡಿದ್ದಾರೆ. ಕೊರೊನಾಗಾಗಿಯೇ 450ಕ್ಕೂ ಹೆಚ್ಚು ವಿಶೇಷ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ಬದುಕು ಬಹಳ ಮುಖ್ಯವಾಗಿದ್ದು, ಯಾವುದಕ್ಕೂ ಜನತೆ ಗಾಬರಿಯಾಗುವುದು ಬೇಡ. ಈ ಮಹಾಮಾರಿಯ ನ ಜೊತೆ ನಾವು ಬದುಕಬೇಕಿದೆ ಎಂದು ಹೇಳಿದ್ದಾರೆ. ಸರಕಾರ ಈಗಾಗಲೇ 10ಸಾವಿರಕ್ಕು ಅಧಿಕ ಹೆಚ್ಚುವರಿ ಬೆಡ್ಗಳಿಗೆ ವ್ಯವಸ್ಥೆ ಮಾಡಿದೆ. ಬೆಂಗಳೂರಿನಲ್ಲಿರುವ ಜನರ ಆರೋಗ್ಯ ಕಾಪಾಡುವ ಬಗ್ಗೆಯೂ ಕಾಳಜಿವಹಿಸಿದ್ದೇನೆ ಎಂದು ಹೇಳಿದರು.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?