ಟಾಪ್ ನ್ಯೂಸ್
ಕೆ.ಆರ್ ಪುರ ಸಂಚಾರಿ ಠಾಣೆ ಉದ್ಘಾಟಿಸಿದ ಸಚಿವರು
ರೈಸಿಂಗ್ ಕನ್ನಡ ವೆಬ್ :
ಬೆಂಗಳೂರು :
ನಗರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಿರುವ ಪೊಲೀಸ್ ಕ್ವಾಟ್ರಸ್ ಹಾಗೂ ಪೊಲೀಸ್ ಠಾಣೆಗಳನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಗೃಹ ಕಚೇರಿ ಕೃಷ್ಣಾದಲ್ಲಿ ಸ್ವಿಚ್ ಆನ್ ಮಾಡುವ ಮೂಲಕ ಉದ್ಘಾಟಿಸಿದರು. ಸಿಎಂ ಉದ್ಘಾಟನೆ ಬಳಿಕ ಕೆಆರ್ ಪುರ ಸಂಚಾರಿ ಪೊಲೀಸ್ ಠಾಣೆಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಸಚಿವರು, ಕಟ್ಟಡ ನಿರ್ಮಾಣಗೊಂಡು ಎರಡು ವರ್ಷ ಕಳೆದಿದ್ದರೂ ಉದ್ಘಾಟನೆ ಭಾಗ್ಯ ಸಿಕ್ಕಿರಲಿಲ್ಲ. ಸಂಚಾರಿ ಠಾಣೆಯನ್ನು ಅದ್ಧೂರಿಯಾಗಿ ಉದ್ಘಾಟಿಸಲು ಅಂದುಕೊಂಡಿದ್ದೆ, ಆದ್ರೆ, ಕೊರೊನಾ ಎಲ್ಲಕ್ಕೂ ತಣ್ಣೀರೆಚಿತು ಎಂದರು.
ಕೆ.ಆರ್ ಪುರ ಭಾಗದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಯ ಅವಶ್ಯಕತೆ ಹೆಚ್ಚಾಗಿತ್ತು. ಇದೀಗ ಠಾಣೆ ಉದ್ಘಾಟಿಸುವ ಮೂಲಕ ಪೊಲೀಸ್ ಇಲಾಖೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ ಎಂದರು. ಅಲ್ಲದೇ ಮುಂದಿನ ದಿನಗಳಲ್ಲಿ, ಪೊಲೀಸ್ ವಸತಿ ಗೃಹ ಹಾಗೂ ಸ್ಕೈವಾಕ್ ಉದ್ಘಾಟಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ರು.
You may like
ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ
ಟಾಸ್ ಗೆದ್ದ ಬೆಂಗಳೂರು ಟೀಂ, ಆರ್ಸಿಬಿ ಪ್ಲೇಯಿಂಗ್ 11ನಿಂದ ಸಿರಾಜ್-ಮ್ಯಾಕ್ಸಿ ಔಟ್!
ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ
ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಪೊಲೀಸರ ವಶಕ್ಕೆ!
ಹಾರ್ದಿಕ್ ಪಾಂಡ್ಯಗೆ ಬ್ಯಾಟ್ ಹಿಡಿಯಲು ಪಾಠ ಹೇಳಿದ ಅನಿಲ್ ಕುಂಬ್ಳೆ!
ಬಾಲಕಿ ದತ್ತು ವಿಚಾರ : ಸೋನು ಶ್ರೀನಿವಾಸಗೌಡ ಅರೆಸ್ಟ್