Uncategorized
ಮಹಾರಾಷ್ಟ್ರದಲ್ಲಿ ವರ್ಷಧಾರೆ..! ಬಾಗಲಕೋಟೆಯಲ್ಲಿ ಪ್ರವಾಹ ಭೀತಿ..!
ರೈಸಿಂಗ್ ಕನ್ನಡ ವೆಬ್:
ಬಾಗಲಕೋಟೆ:
ಕೊರೊನಾ ಮಹಾಮಾರಿಯ ನಡುವೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ. ಮಹಾರಾಷ್ಟ್ರದ ಕೃಷ್ಣ ನದಿ ತಟದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ, ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಜಲಾಶಯಕ್ಕೆ 55ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
ಹಿಪ್ಪರಗಿ ಜಲಾಶಯ 3.14ಟಿ.ಎಂ.ಸಿ ಸಾಮರ್ಥ್ಯವಿದ್ದು, ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಬ್ಯಾರೇಜ್ ಮೂಲಕ ಆಲಮಟ್ಟಿ ಜಲಾಶಯಕ್ಕೆ ನೀರು ಹರಿ ಬಿಡಲಾಗುತ್ತಿದೆ. 2.50ಲಕ್ಷದಿಂದ 4ಲಕ್ಷ ಕ್ಯೂಸೆಕ್ ನೀರು ಹರಿದು ಬಂದ್ರೂ ನಿರ್ವಹಣೆ ಮಾಡಬಹುದು. ಆದ್ರೆ, ಇದನ್ನ ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಸದ್ಯ 519.60ಮೀ ಎತ್ತರದ ಆಲಮಟ್ಟಿ ಜಲಾಶಯದಲ್ಲಿ 36,345ಟಿಎಂಸಿ ನೀರು, 511.23 ಮೀ ಎತ್ತರದಲ್ಲಿ ಸಂಗ್ರಹಗೊಂಡಿದೆ. ಮತ್ತೆ ಮಹಾರಾಷ್ಟ್ರದ ಕೃಷ್ಣಾ ತಟದಲ್ಲಿ ಮಳೆ ಜೋರಾದ್ರೆ ಜಿಲ್ಲೆಯ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಲಿದೆ.
You may like
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!
ಕಾಂಗ್ರೆಸ್ ಟಿಕೆಟ್ ಹಂಚಿಕೆ ಅಂತಿಮ ಹಂತದಲ್ಲಿದೆ : ಸತೀಶ್ ಜಾರಕಿಹೊಳಿ
ಭೀಕರ ರಸ್ತೆ ಅಪಘಾತದಲ್ಲಿ ಶಾಸಕಿ ದುರ್ಮರಣ
ಮೂರು ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ದೂರು ದಾಖಲು: ಡಾ: ಕುಮಾರ