ರಾಜಕೀಯ
ಸುತ್ತೂರು ಜಾತ್ರೆ ಕೃಷಿ ಮೇಳದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು:
![](https://risingkannada.com/wp-content/uploads/2024/02/dkshivakumar-scaled.jpg)
Mysore : ಕಪಿಲ ನದಿಯ ತೀರದ ಈ ಪುಣ್ಯಭೂಮಿಯಲ್ಲಿ ಈ ಜಾತ್ರೆ ಹಾಗೂ ಧರ್ಮ ಸಭೆಯಲ್ಲಿ ನಾವೆಲ್ಲ ಸೇರಿರುವುದು ನಮ್ಮ ಭಾಗ್ಯ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿವೊಂದೇ, ಕರ್ಮ ಹಲವಾದರೂ ನಿಷ್ಠೆವೊಂದೇ, ದೇವನೊಬ್ಬ ನಾಮ ಹಲವು. ಮಠದಲ್ಲಿ ಯಾವುದೇ ಜಾತಿ ಧರ್ಮ ಲೆಕ್ಕ ಹಾಕುವುದಿಲ್ಲ. ಎಲ್ಲಾ ಭಕ್ತಾಧಿಗಳನ್ನು ಸರಿಸಮನಾಗಿ ನೋಡುವ ಸಂಸ್ಕೃತಿ ಇದೆ. ದೇಶದ ಆಸ್ತಿಯೇ ನಮ್ಮ ಸಂಸ್ಕೃತಿ.
ನಾನು ಹಾಗೂ ಸುತ್ತೂರು ಶ್ರೀಗಳು ಇತ್ತೀಚೆಗೆ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಹೋಗಿದ್ದವು. ನನ್ನ ಜೀವನದಲ್ಲೇ ಅಷ್ಟು ದೊಡ್ಡ ಜಾತ್ರೆ ನೋಡಿರಲಿಲ್ಲ. ಅಲ್ಲಿನ ಶ್ರೀಗಳು ಒಂದು ಮಾತು ಹೇಳಿದರು. ಮೈಸೂರು ಮಹಾರಾಜರು ಅರಮನೆ ಕಟ್ಟಿಸಿದರೆ, ಸುತ್ತೂರು ಶ್ರೀಗಳು ಅರಿವಿನ ಮನೆ ಕಟ್ಟಿಸಿದ್ದಾರೆ ಎಂದು. ಶ್ರೀಗಳು ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ಸಾಮಾಜಿಕ, ಧಾರ್ಮಿಕ, ಆರೋಗ್ಯ ಸೇರಿದಂತೆ ಎಲ್ಲಾ ವಿಚಾರವಾಗಿ ಮಕ್ಕಳಲ್ಲಿ ಅರಿವು ಮೂಡಿಸುತ್ತಾ ಬಂದಿದ್ದಾರೆ.
ಸರ್ಕಾರದಿಂದ ಮಾಡಲಾಗದ ಕೆಲಸಗಳನ್ನು ಅಷ್ಟೇ ಸರಿಸಮನಾಗಿ ನಮ್ಮ ರಾಜ್ಯದ ಮಠಮಾನ್ಯಗಳು ಮಾಡಿಕೊಂಡು ಬಂದಿವೆ. ಆಮೂಲಕ ರಾಜ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿವೆ. ನಾವು ಇಂತಹ ಮಠಗಳನ್ನು ಕಾಪಾಡಿಕೊಳ್ಳಬೇಕು. ವಿದ್ಯೆ ಇಲ್ಲದಿದ್ದರೆ ನಾವು ಮನುಷ್ಯರಾಗಲು ಸಾಧ್ಯವಿಲ್ಲ.
ವಿದ್ಯಾ ದದಾತಿ ವಿನಯಂ, ವಿನಯಾತ್ ಯಾತಿ ಪಾತ್ರತಾಂ, ಪಾತ್ರತ್ವಾತ್ ಧನಂ ಆಪ್ಪೋತಿ, ಧನಾತ್ ಧರ್ಮ ತಥಃ ಸುಖಂ. ಅಂದರೆ, ಮನುಷ್ಯನಿಗೆ ವಿದ್ಯೆಯಿಂದ ವಿನಯ ಬರುತ್ತದೆ. ವಿನಯದಿಂದ ಯೋಗ್ಯತೆ ಬರುತ್ತದೆ, ಯೋಗ್ಯತೆಯಿಂದ ಹಣ ಬರುತ್ತದೆ. ಹಣದಿಂದ ಧರ್ಮ ಬರುತ್ತದೆ. ಧರ್ಮದಿಂದ ಸುಖಃ ಬರುತ್ತದೆ. ನಾವು ಏನೇ ಆದರೂ ಧರ್ಮ ಉಳಿಸಿಕೊಳ್ಳಬೇಕು. ಅದಕ್ಕೆ ವಿದ್ಯೆ ಬಹಳ ಮುಖ್ಯ.
ಕಲ್ಲಿನಲ್ಲಿ ಗೋಡೆ ಕಟ್ಟಬಹುದು. ಸೇತುವೆಯನ್ನು ಕಟ್ಟಬಹುದು. ಅದರಂತೆ ಶ್ರೀಗಳು ಜನರ ಮನಸ್ಸಿನಲ್ಲಿ ಸೇತುವೆ ಕಟ್ಟಿ ಮಾನವೀಯ ಶಕ್ತಿಯನ್ನು ತುಂಬಿದ್ದಾರೆ. ಇದು ಭಕ್ತಿ ಕೇಂದ್ರ. ಭಕ್ತಿ ಇದ್ದರೆ ಕಾಯಕ, ಭಕ್ತಿ ಇದ್ದರೆ ಜ್ಞಾನ, ಭಕ್ತಿ ಇದ್ದರೆ ಸಾಧನೆ, ಭಕ್ತಿ ಇದ್ದರೆ ಶಕ್ತಿ, ಭಕ್ತಿ ಇದ್ದರೆ ಧರ್ಮ. ಎಲ್ಲದಕ್ಕೂ ಭಕ್ತಿಯೇ ಮೂಲ.
ನಮ್ಮ ಧರ್ಮ ಸಂಸ್ಕೃತಿಯನ್ನು ನಾವು ಮುಂದಿನ ಪೀಳಿಗೆಗೆ ರವಾನಿಸಬೇಕು. ನಮ್ಮ ತಂದೆ ತಾಯಿ ನಮಗೆ ಕೊಟ್ಟ ಜೀವನದಲ್ಲಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು. ಒಳ್ಳೆಯ ನಡತೆ, ನೀತಿ, ಸಂಸ್ಕಾರವನ್ನು ಕಲಿತು ದೇಶ ಕಟ್ಟಬೇಕು. ನಮಗೆ ಎಷ್ಟೇ ನೋವಿದ್ದರೂ ನಗುತ್ತಾ ಬದುಕಬೇಕು. ನೀವು ಸಂತೋಷದಿಂದ ಬದುಕಿ ಧರ್ಮವನ್ನು ಕಾಪಾಡಿ ಎಂದು ಪ್ರಾರ್ಥಿಸುತ್ತೇನೆ.
ಅಲೆಕ್ಸಾಂಡರ್ ಪ್ರಪಂಚವನ್ನು ವಶಪಡಿಸಿಕೊಳ್ಳಲು ಮುಂದಾಗಿ ಭಾರತದತ್ತ ಬರುವಾಗ ಅವರ ಗುರು ಒಂದು ಮಾತು ಹೇಳಿದರಂತೆ. ಭಾರತದಿಂದ ಬರುವಾಗ ಐದು ವಸ್ತುಗಳನ್ನು ತೆಗೆದುಕೊಂಡು ಬಾ ಎಂದರಂತೆ. ಆ ಆದು ವಸ್ತುಗಳೆಂದರೆ, ಮಹಾಭಾರತ, ರಾಮಾಯಣ ಗ್ರಂಥ, ಕೃಷ್ಣನ ಕೊಳಲು, ಗಂಗಾಜಲ ಹಾಗೂ ಅಲ್ಲಿನ ತತ್ವಜ್ಞಾನಿಗಳನ್ನು ಕರೆದುಕೊಂಡು ಬಾ. ಈ ಐದು ವಸ್ತುಗಳನ್ನು ಗೆದ್ದರೆ ಭಾರತವನ್ನು ಗೆದ್ದಂತೆ ಎಂದು ಹೇಳಿದರಂತೆ.
ನಾನು ಮೇಕೆದಾಟು ಯೋಜನೆ ಆಗ್ರಹಿಸಿ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ಮಾಡುವಾಗ ಶಅರೀಗಳ ಆಶಈರ್ವಾದ ಪಡೆಯಲು ಬಂದಿದ್ದೆ. ಆಗ ಅವರು ನನಗೆ ಆಶೀರ್ವಾದ ಮಾಡಿದರು. ಆಗ ನನಗೆ ಈ ಯಾತ್ರೆ ಯಶಸ್ಸು ಕಾಣಲಿದೆ ಎಂಬ ಆತ್ಮವಿಶ್ವಾಸ ಹೆಚ್ಚಿತು. ಶ್ರೀಗಳು ಸಾವಿರಾರು ಮಕ್ಕಳ ಜೊತೆ ನೀಡಿದ ಆಶೀರ್ವಾದಕ್ಕೆ ಸರ್ಕಾರ ಹಾಗೂ ನನ್ನ ವೈಯಕ್ತಿಕವಾಗಿ ನಮಸ್ಕಾರ ಸಲ್ಲಿಸುತ್ತೇನೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?