Featured
ಬರೋಬ್ಬರಿ 129 ವರ್ಷಗಳ ಬಳಿಕ ದರ್ಶನ ಕೊಟ್ಟ ಅಪರೂಪದ ಕೀಲ್ ಬ್ಯಾಕ್ ಹಾವು
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಪ್ರಕೃತಿಯಲ್ಲಿ ನಡೆಯುವ ಅಚ್ಚರಿ ಅದು ವಿಸ್ಮಯಕಾರಿ. ಈ ವಿಸ್ಮಯಗಳೆಲ್ಲಾ ಮನುಷ್ಯನಿಗೆ ಯಕ್ಷ ಪ್ರಶ್ನೆಯಾಗಿಯೇ ಉಳಿಯತ್ತೆ. ದೂರದ ಅಸ್ಸಾಂ ಇಂಥ ಘಟನೆಗೆ ಸಾಕ್ಷಿಯಾಗಿದೆ. ಅಸ್ಸಾಂನಲ್ಲಿ ಅಪರೂಪದ ಹಾವೊಂದು ದರ್ಶನ ನೀಡಿದೆ. ಅದು ಬರೋಬ್ಬರಿ 129 ವರ್ಷಗಳ ಬಳಿಕ ಅನ್ನೋದೇ ಎಲ್ಲರ ಅಚ್ಚರಿಗೆ ಕಾರಣವಾಗಿರುವ ವಿಚಾರ. ಬ್ರೀಟಿಷರ ಕಾಲದಲ್ಲಿ ಕಾಣಿಸಿಕೊಂಡಿದ್ದ ಈ ಹಾವು ಇದೀಗ ದಿಢೀರಾಗಿ ಕಾಣಿಸಿಕೊಂಡು ಎಲ್ಲರನ್ನೂ ನಿಬ್ಬೆರೆಗಾಗಿಸಿದೆ.
ಅಷ್ಟಕ್ಕೂ ಈ ಹಾವಿನ ಹೆಸರು ಹರ್ಪೆಟೊರಿಯಸ್ ಪೀಲಿ ಅಸ್ಸಾಂ ಮತ್ತು ಅರುಣಾಚಲದಲ್ಲಿ ಇದರ ವಾಸಸ್ಥಾನ. ಈ ಹಾವನ್ನ ಈ ಪ್ರದೇಶದಲ್ಲಿ ಕಡೆಯ ಬಾರಿಗೆ ನೋಡಿದ್ದು ಬ್ರೀಟೀಶ್ ವ್ಯಕ್ತಿ ಸ್ಯಾಮ್ಯುಯೆಲ್ ಎಡ್ವರ್ಡ್. 1891ರಲ್ಲಿ ಈತ ಇಲ್ಲಿ ಟೀ ತೋಟದ ಮಾಲೀಕನಾಗಿದ್ದಾಗ ಈ ಅಪರೂಪದ ಶಿವಸಾಗರ್ ಜಿಲ್ಲೆಯಲ್ಲಿ ಒಂದೇ ಪ್ರಬೇಧದ ಎರಡು ಹಾವುಗಳನ್ನ ಕೊನೆಯ ಬಾರಿಗೆ ನೋಡಿದ್ದರು.ಇದರಲ್ಲಿ ಒಂದು ಹಾವನ್ನ ಕೋಲ್ಕತ್ತಾದ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ ಇರಿಸಲಾಗಿದೆ. ಇನ್ನೊಂದು ಹಾವನ್ನ ಲಂಡನ್ನ ನ್ಯಾಚುರೆಲ್ ಹಿಸ್ಟರಿ ಮ್ಯೂಸಿಯಂಗೆ ತೆಗೆದುಕೊಂಡು ಹೋಗಲಾಗಿತ್ತು. ಈ ಹಾವುಗಳು ಮತ್ತೆ ಕಾಣಿಸದೇ ಇದ್ದಿದ್ದರಿಂದ ಅಳಿದು ಹೋದ ಸಂತತಿ ಎಂದು ಪರಿಗಣಿಸಲಾಗಿತ್ತು.
ಎರಡು ವರ್ಷಗಳ ಹಿಂದೆ ವೈಲ್ಡ್ಲೈಫ್ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಡಬ್ಲ್ಯುಐಐ) ವಿಜ್ಱಆನಿ ತಂಡ ಇದೇ ಪ್ರಬೇಧದ ಹಾವುಗಳು ಇರುವುದನ್ನು ಪತ್ತೆ ಮಾಡಿ ಅಧ್ಯಯನ ನಡೆಸಿತ್ತು.
ಇಷ್ಟು ವರ್ಷಗಳವರೆಗೆ ಕಾಣಿಸದ ಈ ಹಾವುಗಳ ಬಗ್ಗೆ ಅಂತಾರಾಷ್ಟ್ರೀಯ ನಿಯತಕಾಲಿಕ ವರ್ಟೆಬ್ರೇಟ್ ಜಿಯಾಲೊಜಿ ಪ್ರಕಟಿಸಲಾಯಿತು.
129 ವರ್ಷಗಳಿಂದ ಈ ಪ್ರಬೇಧಗಳು ಕಾಣಿಸಿಕೊಂಡಿರಲಿಲ್ಲ. ಈ ಹಾವು ಅಳಿದು ಹೋಗಿದೆ ಎಂದು ಜನ ಭಾವಿಸಿದ್ದರು ಎಂದು ಡಬ್ಲ್ಯುಐಐ ವಿಜ್ಷಾನಿ ಅಭಿಜಿತ ದಾಸ್ ಬರೆದಿದ್ದರು.
ಈ ಹಾವಿನ ಗುರುತನ್ನು ದೃಢೀಕರಿಸಲು ಲಂಡನ್ನ ನ್ಯಾಷನಲ್ ಹಿಸ್ಟರಿ ಮ್ಯೂಸಿಯಂ ಅನ್ನ ಸಂಪರ್ಕಿಸಲಾಗಿತ್ತು. ಅಲ್ಲಿ ಹೋಗಿ ಅಧ್ಯಯನ ನಡೆಸಿದ ನಂತರ ಅಸ್ಸಾಂನ ಕೀಲ್ಬ್ಯಾಕ್ ಎಂದು ನಿರ್ಧಾರಕ್ಕೆ ಬರಲಾಗಿದೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್