Featured
Anushka Sharma : ಹೊಟ್ಟೆಯ ಒಳಗಿನ ಸಂಕಟ..! ನಟಿಯರಿಗೆ ಹೊಟ್ಟೆ ಪ್ರಚಾರ, ಬಡವರಿಗೆ ಹೊಟ್ಟೆ ಭಾರ.!
![](https://risingkannada.com/wp-content/uploads/2020/12/WhatsApp-Image-2020-12-30-at-11.07.35-PM.jpeg)
ವಿನಾಯಕ ವಶಿಷ್ಠ FB ವಾಲ್ನಿಂದ..
ನಮ್ಮ ಸಮಾಜ ಹೀಗ್ಯಾಕೆ ಸಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಒಂದು ಕಡೆ ಪ್ರಕೃತಿಯ ಸಹಜ ಕ್ರಿಯೆ ಪ್ರಚಾರವಾಗುತ್ತಿದೆ. ಇನ್ನೊಂದು ಕಡೆ ಅದೇ ಸಹಜ ಕ್ರಿಯೆ ಕೆಲವರ ಸಾವಿನ ಬಾಗಿಲು ತೆರೆಯುತ್ತಿದೆ.
ಹೌದು ಸೌಂದರ್ಯ ಇದ್ದವರು, ಹಣ ಇದ್ದವರು ಏನು ತೋರಿಸಿದರು ಸುದ್ದಿ… ಹಾಕುವ ಚಪ್ಪಲಿ ಇಂದ ಹಿಡಿದು ತಲೆ ಕೂದಲವರೆಗೆ ಏನು ಮಾಡಿದರು ಸುದ್ದಿ ಆದರೆ, ಬಡವರ ಬದುಕು ಹಾಗಲ್ಲ…. ಹೋರಾಡಬೇಕು… ಹೋರಾಡುತ್ತ ಬದುಕು ಸಾಗಿಸಬೇಕು. ಇವೆರಡ ಮಧ್ಯೆ ಇಂತಹ ಚಿತ್ರಗಳು ನಮ್ಮನ್ನು ನೋಯಿಸುತ್ತವೆ…!
ನಾನು ಮೊದಲನೆಯ ಚಿತ್ರದ ವಿರೋಧಿಯಲ್ಲ ಆದರೆ ಇಂತಹ ಚಿತ್ರಗಳ ಅವಶ್ಯಕತೆ ಸಧ್ಯ ನಮ್ಮ ದೇಶಕ್ಕಿಲ್ಲ…..ಇದಕ್ಕೆ ಕಾರಣ ಹೇಳುವೆ ಕೇಳಿ.
![](https://risingkannada.com/wp-content/uploads/2020/12/WhatsApp-Image-2020-12-30-at-11.07.35-PM-1-1024x1024.jpeg)
ಮೊದಲನೆಯ ಚಿತ್ರ ಹಾಕುವ ಮುಂಚೆ ನನ್ನ ದೇಶದ ಗರ್ಭಿಣಿಯರ ಅಕಾಲಿಕ ಸಾವಿನ ಸಂಖ್ಯೆ ಕಡಿಮೆಯಾಗಬೇಕು.
ಮೊದಲನೆಯ ಚಿತ್ರ ಹಾಕುವ ಮುಂಚೆ ನನ್ನ ದೇಶದಲ್ಲಿ ಅಪೌಷ್ಟಿಕತೆಯಿಂದ ಸಾಯುವ ಮಕ್ಕಳ ಸಂಖ್ಯೆ ಕಡಿಮೆಯಾಗಬೇಕು..
ಮೊದಲನೆಯ ಚಿತ್ರ ಹಾಕುವ ಮುಂಚೆ ನನ್ನ ದೇಶದಲ್ಲಿ ಬಡ ಗರ್ಭಿಣಿ ಮಹಿಳೆಯರಿಗೆ ಸರಿಯಾದ ಗುಣಮಟ್ಟದ ಚಿಕಿತ್ಸೆ ಸಿಗಬೇಕು.
ಮೊದಲನೆಯ ಚಿತ್ರ ಹಾಕುವ ಮುಂಚೆ ನನ್ನ ದೇಶದ ಬಡ ಹೆಣ್ಣು ಮಕ್ಕಳ ಬಡತನ ನಿವಾರಣೆ ಆಗಬೇಕು.
ಇಂತಹ ಜ್ವಲಂತ ಸಮಸ್ಯೆಗಳ ಆಗರ ಇರುವಾಗ ಇಂತಹ ಪೋಟೋಗಳ ಅವಶ್ಯಕತೆ ನಮಗೆ ಇದೆಯೇ ಎಂಬ ಪ್ರಶ್ನೆ ನಾವು ಮಾಡಿಕೊಳ್ಳಬೇಕು..!
ಹೌದು ಅದೆಷ್ಟೋ ಮಹಿಳೆಯರು ಗರ್ಭಧಾರಣೆಯ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನರಳಾಡಿ ಹೆರಿಗೆ ಮಾಡಿಸಿಕೊಳ್ಳುವ ಅನಿವಾರ್ಯತೆ ಇದೆ. ಇಂತಹ ಸಂಕಷ್ಟಕ್ಕೆ ಪರಿಹಾರ ಹುಡುಕದ ಈ ನಟಿಯರು ಹಾಕುವ ಪೋಟೋ ಎಷ್ಟು ಸಮಂಜಸ….?
ಇವರು ಹಾಕುವ ಚೆಂದ ಚೆಂದದ ಪೋಟೋಗಳಿಂದ ಆ ಬಡ ಹೆಣ್ಣುಮಕ್ಕಳ ಸಂಕಟ ಎಷ್ಟಿರಬೇಡ….ಅದಕ್ಕೆ ಹೇಳಿದ್ದು. ಇವರಿಗೆ ಹೊಟ್ಟೆ ಪ್ರಚಾರ ಆದರೆ ಬಡವರಿಗೆ ಹೊಟ್ಟೆ ಭಾರ..!
ವಿನಾಯಕ ವಶಿಷ್ಠ.
You may like
IPL-2024; ಫೋರ್.. ಸಿಕ್ಸರ್-ಇಂದಿನಿಂದ ಐಪಿಎಲ್ ಹಬ್ಬ
ಆರ್ ಸಿಬಿ UNBOX…ಹೊಸ ಜೆರ್ಸಿ…ಹೊಸ ಹುಮ್ಮಸ್ಸು..ಹೊಸ ಅಧ್ಯಾಯ..!
ನಾಳೆಯಿಂದ ಐಪಿಎಲ್ ಫೀವರ್ ಶುರು – ಮೊದಲ ಪಂದ್ಯದಲ್ಲಿ ಬದ್ಧವೈರಿಗಳ ಮುಖಾಮುಖಿ..!
ರಣಜಿ ಹಾಗೂ ದೇಶಿ ಪಂದ್ಯಾವಳಿ ನಿರ್ಲಕ್ಷಿಸಿದ್ದ ಐಯ್ಯರ್, ಕಿಶನ್ ಗೆ ಶಾಕ್..!
ಭಾರತ ಸರಣಿ ಗೆದ್ದ ಸಂತಸ ಹಂಚಿಕೊಂಡ ವಿರಾಟ್ ಕೊಹ್ಲಿ
RCB ಕ್ಯಾಪ್ಟನ್ಶಿಪ್ಗೆ ವಿರಾಟ್ ಕೊಹ್ಲಿ ಗುಡ್ ಬೈ : ಯಾರು ಏನಂದ್ರು.?