Featured
‘ಮಂಕಿಗೇಟ್’ ಪ್ರಕರಣದ ಬಳಿಕವೂ ಭಾರತ ಆಸ್ಟ್ರೇಲಿಯಾದಲ್ಲೇ ಉಳಿದಿದ್ದೇಕೆ? – 12 ವರ್ಷಗಳ ಬಳಿಕ ಬಾಯ್ಬಿಟ್ಟ ಅನಿಲ್ ಕುಂಬ್ಳೆ..!
![](https://risingkannada.com/wp-content/uploads/2020/08/Anil-Kumble-2.jpg)
ರೈಸಿಂಗ್ ಕನ್ನಡ :
ಸ್ಪೋರ್ಟ್ಸ್ ಡೆಸ್ಕ್ :
ಮಂಕಿಗೇಟ್ ಪ್ರಕರಣದ ಹೊರತಾಗಿಯೂ ಭಾರತ ತಂಡ 2007-08ರಲ್ಲಿ ಆಸ್ಟ್ರೇಲಿಯಾದಿಂದ ಅರ್ಧಕ್ಕೆ ಯಾಕೆ ವಾಪಸ್ ಬರಲಿಲ್ಲ ಅನ್ನೋದನ್ನ ಅನಿಲ್ ಕುಂಬ್ಳೆ ಬಹಿರಂಗಪಡಿಸಿದ್ದಾರೆ. ಕ್ರೀಡಾಸ್ಫೂರ್ತಿಗಾಗಿ ನಾವು ಕ್ರಿಕೆಟ್ ಆಡಿದವರು. ದ್ವೇಷ, ಅಸೂಯೆ ಮಾತೆ ಇರಲಿಲ್ಲ, ಅರ್ಧಕ್ಕೆ ವಾಪಸ್ ಬಂದಿದ್ದರೇ ತಂಡದ ಮೇಲೆ ಉತ್ತಮ ಭಾವನೆಯೂ ಬರುತ್ತಿರಲಿಲ್ಲ. ಹೀಗಾಗಿ ಆರಂಭಿಕ ಎರಡು ಟೆಸ್ಟ್‌ಗಳ ಸೋಲಿನ ಹೊರತಾಗಿಯೂ ನಾವು ಆಸ್ಟ್ರೇಲಿಯಾದಲ್ಲೇ ಉಳಿದೆವು ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ಜೊತೆಗಿನ ಸೋಷಿಯಲ್ ಮೀಡಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, 2008ರ ಜನವರಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆ್ಯಂಡ್ರ್ಯೂ ಸೈಮಂಡ್ಸ್ ಅವರುನ್ನು ಮಂಕಿ ಎಂದು ಕರೆದು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪದ ಮೇಲೆ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್‌ಗೆ ಮೂರು ಪಂದ್ಯಗಳ ನಿಷೇಧ ಹೇರಲಾಗಿತ್ತು. ಪ್ರಕರಣ ವಿವಾದವನ್ನೂ ಸೃಷ್ಠಿಸಿತ್ತು. ಆದರೂ ಸರಣಿಯನ್ನೂ ಮುಂದುವರಿಸಲು ನಿರ್ಧರಿಸಿದ ಭಾರತ ಒತ್ತಡದ ನಡುವೆಯೂ ಮುಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ಪ್ರಕರಣದ ನಂತರ ಹರ್ಭಜನ್ ಗೆ ನಿಷೇಧ ಹೇರಿದ್ದು ಮಾತ್ರವಲ್ಲ, ಪಂದ್ಯ ಶುಲ್ಕದ ಅರ್ಧ ಮೊತ್ತವಲನ್ನ ತಡೆಹಿಡಿಯಲಾಗಿತ್ತು. ಐಸಿಸಿ ತೀರ್ಪಿನ ವಿರುದ್ಧ ಭಾರತ ಮೇಲ್ಮನವಿ ಸಲ್ಲಿಸಿತ್ತು. ಹೀಗಾಗಿ ಸರಣಿಯನ್ನೂ ಅಲ್ಲಿಗೇ ಮುಕ್ತಾಯಗೊಳಿಸುವ ಕುರಿತ ಮಾತುಕತೆಗಳು ನಡೆದಿದ್ದವು ಅನಿಲ್ ಕುಂಬ್ಳೆ ತಿಳಿಸಿದ್ದಾರೆ. ಸಿಡ್ನಿ ಟೆಸ್ಟ್‌ನಲ್ಲಿ ಅಂಪೈರ್‌ಗಳ ತೀರ್ಪಿನಲ್ಲೂ ಕೆಲವು ಲೋಪಗಳು ಆಗಿದ್ದವು ಎಂದು ಆ ಟೆಸ್ಟ್‌ನ ಅಂಪೈರ್‌ಗಳಲ್ಲಿ ಒಬ್ಬರಾಗಿದ್ದ ಸ್ಟೀವ್ ಬಕ್ನರ್ ಇತ್ತೀಚೆಗಷ್ಟೆ ತಿಳಿಸಿದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?