Featured
ಅಂಗಾಕಾರಕ ದೋಷ ಪರಿಹಾರ ಮಾಡುವುದು ಹೇಗೆ..?
ಕುಜ: ಗ್ರಹಗಳಲ್ಲಿ ಮೂರನೆಯವನು. ಪುರುಷ ಗ್ರಹ, ಕ್ರೂರ ಗ್ರಹ, ತಮೋಗುಣ ಪ್ರಧಾನವುಳ್ಳ ಗ್ರಹ, ಭೌಮ, ಭೂಮಿಪುತ್ರ, ಅವನೇಯ, ಅಂಗಾರಕ, ಮಂಗಳ ಇತ್ಯಾದಿ ಹೆಸರುಗಳು ಇವನಿಗೆ, ಮೇಷ, ವೃಶ್ಚಿಕ ರಾಶಿಗಳ ಆಧಿಪತ್ಯ ಕುಜನದು. ಅಂದರೆ ಇವು ಇವನ ಸ್ವಕ್ಷೇತ್ರಗಳು, ಮಕರರಾಶಿ ಕುಜನಿಗೆ ಉಚ್ಚಸ್ಥಾನ, ಕರ್ಕಾಟಕ ರಾಶಿ ನೀಚ ಸ್ಥಾನ.
ಕುಜನ ಆಕಾರ: ಸಾಧಾರಣವಾದ ಎತ್ತರ, ಗಟ್ಟಿಮುಟ್ಟಾದ ಶರೀರ, ಹಳದಿ ಕಣ್ಣು, ಬಿಳಿ ಮಿಶ್ರಿತ ಕೆಂಪು ಶರೀರದ ಬಣ್ಣವುಳ್ಳವನು, ಕಾಂತಿಯುತವಾದ ಶರೀರ. ದೃಢವಾದ ಅಂಗಸೌಷ್ಟ್ರ, ಯೌವನಶಾಲಿ, ತಮೋಗುಣ ಪ್ರಧಾನವಾಗುಳ್ಳವನು, ಅಗ್ನಿ ಬಲವಿರುವವನು, ಪಿತ್ತಪ್ರಕೃತಿಯುಳ್ಳವನು.
ಕುಜನ ಆಕಾರ: ಕೋಪ, ದರ್ಪ, ಹಿಂಸೆ, ಕ್ರೌರ್ಯ, ದಾರ್ಡ್ಯತೆ, ಸಾಹಸ, ಧೈರ್ಯ, ಕಲಹ, ಉಗ್ರತೆ, ಅಗ್ನಿತತ್ವ, ಪಿತ್ತರಸಾಭಿಮಾನಿ.
ಕಾರಕತ್ವ: ಭೂಮಿ, ಭ್ರಾತೃವರ್ಗ, ಸಾಮವೇದ, ದಕ್ಷಿಣದಿಗ್ಧಶ, ಶಸ್ತ್ರಾಸ್ತ್ರ, ಕಳ್ಳತನ, ಅಗ್ನಿತತ್ವ ವಸ್ತುಗಳು, ಅಪಘಾತಗಳು, ಸುಟ್ಟಸ್ಥಳ, ಯುದ್ಧ ಕಲಹ, ಜಗಳ, ರಕ್ತಸ್ರಾವ, ಯಂತ್ರಗಳು (ಮೆಷಿನರಿ) ಸರ್ಪ, ಹುಳಿಪ್ರಧಾನ ವಸ್ತುಗಳು, ಶತ್ರುಗಳ ಮೇಲೆ ವಿಜಯ, ಮಾಂಸ, ಸೇನಾಧಿಪತ್ಯ, ರಕ್ಷಣಾದಳ, ಆರಕ್ಷಣ ಇಲಾಖೆ, ಯುದ್ಧೋಪಕರಣಗಳು, ಹಿಂಸಾ ಚಟುವಟಿಕೆ, ಬಂಗಾರ, ಭೂಗರ್ಭ ಸಂಪತ್ತು, ಮಾಂಸ ಮಜ್ಜ, ರಕ್ತ, ಉದಾರ ಸ್ವಭಾವ, ಹಠವಾದಿತನ, ಮಾಂಗಲ್ಯ ಇತ್ಯಾದಿಗಳ ಕಾರಕನು.
ಕುಜನ ಮಿತ್ರರು ರವಿ, ಚಂದ್ರ, ಗುರುಗಳು; ಶತ್ರುಗ್ರಹ-ಬುಧ ಸಮಗ್ರಹ ಶನಿ, ಶುಕ್ರರು, ಕುಜನಿಗೆ ಸಂಬಂಧಿಸಿದ್ದು ನವರತ್ನಗಳಲ್ಲೊಂದಾದ ಕೆಂಪು ಹವಳ, ತೊಗರಿ ಧಾನ್ಯ, ಖದಿರಾ ವೃಕ್ಷ, ಕೆಂಪು ವರ್ಣದ ವಸ್ತ್ರಗಳು, ತೊಗರಿಕಾಳು.
ಕುಜನು ಬಲಯುತನಾಗಿ ಅಂದರೆ ಸ್ವಕ್ಷೇತ್ರ, ಉಚ್ಚಸ್ಥಾನ, ಮಿತ್ರ ಕ್ಷೇತ್ರ, ಶುಭಗ್ರಹ ಸಂಬಂಧವುಳ್ಳವನಾಗಿ ಲಗ್ನಕ್ಕೆ ಯೋಗಕಾರಕನಾಗಿ ಶುಭ ಸ್ಥಾನಗಳಲ್ಲಿದ್ದರೆ ಭೂಸಂಪತ್ತು, ಭ್ರಾತೃಸೌಖ್ಯ, ಸೇವಕರಿಂದ ಸೇವೆ, ವಾಹನ, ಯಂತ್ರಾದಿಗಳಿಂದ ಲಾಭ, ಅಗ್ನಿ ವಸ್ತುಗಳಿಂದ ಪ್ರಯೋಜನ, ಶತ್ರುಗಳ ಮೇಲೆ ವಿಜಯ, ಸಮಾಜದಲ್ಲಿ ಮಾನ್ಯತೆ, ರಾಜ್ಯಾಧಿಕಾರ ಇತ್ಯಾದಿ ಮಹತ್ತರ ಶುಭ ಫಲಗಳುಂಟಾಗುವುವು. ಕುಜನು
ಜಾತಕನಿಗೆ ಹತ್ತನೇ ಸ್ಥಾನದಲ್ಲಿರುವ ವ್ಯಕ್ತಿಗೆ ಉದ್ಯೋಗ ಸಮಸ್ಯೆ ಇರುವುದಿಲ್ಲ. ಕುಜ+ಗುರು ಸಂಬಂಧ, ಕುಜ ಚಂದ್ರ ಸಂಬಂಧದಿಂದ ಗುರು-ಮಂಗಳ ಹಾಗೂ ಚಂದ್ರ-ಮಂಗಳ ಯೋಗಗಳೆಂಬ ಧನಯೋಗಗಳು ಲಭಿಸುತ್ತವೆ. ಕೇವಲ ಕುಜನೊಬ್ಬನೆ ತನ್ನ ಉಚ್ಚ ಇಲ್ಲವೆ ಸ್ವಕ್ಷೇತ್ರದಲ್ಲಿದ್ದು ಅದು ಲಗ್ನದಿಂದ ಕೇಂದ್ರಸ್ಥಾನವಾಗಿದ್ದರೆ ರೂಚಕವೆಂಬ ಮಹಾಪುರುಷ ಯೋಗವುಂಟಾಗುವುದು, ಈ ಯೋಗವುಳ್ಳವನು ಸಮಾಜದಲ್ಲಿ ಪ್ರತಿಷ್ಠಿತರು, ಉನ್ನತ ಸ್ಥಾನ ಹೊಂದುವವರು, ಅಧಿಕಾರಯುಕ್ತರು, ನಾನಾ ಸೇವಕರನ್ನು ಹೊಂದಿರುವವರಾಗುವರೆಂದು ಗ್ರಂಥಗಳಲ್ಲಿ ವಿವರಿಸಲಾಗಿದೆ.
ವಿವಾಹದಲ್ಲಿ ಅಂಗಾರಕ (ಕುಜ) ದೋಷದ ಅವಾಂತರ ಹೇಗೆ?
ಕುಜ ಅಥವಾ ಅಂಗಾರಕನು 1, 2, 4, 5, 7, 8 ಮತ್ತು 12ನೇ ಸ್ಥಾನಗಳಲ್ಲಿ ವಧೂ-ವರರ ಜಾತಕಗಳಲ್ಲಿದ್ದರೆ ದೋಷವುಂಟೆಂದು ಹೇಳುವರು. ಲಗ್ನದಿಂದ 2 ಕುಟುಂಬಸ್ಥಾನ, 4 ಸುಖಸ್ಥಾನ, 5 ಸಂತಾನಸ್ಥಾನ, 7 ಕಳತ್ರ (ಪತಿ ಅಥವಾ ಪತ್ನಿ) ಸ್ಥಾನ. 8 ಮಾಂಗಲ್ಯಸ್ಥಾನ ಆಯುಷ್ಯಸ್ಥಾನ, 12 ಶಯನ ಸುಖ ಹಾಗೂ ಮೋಕ್ಷಸ್ಥಾನ, ಈ ಸ್ಥಾನಗಳಲ್ಲಿ ಮಂಗಳ ಮೇಲ್ಕಂಡ ವಿಚಾರಗಳ ಬಗ್ಗೆ ದೋಷವುಂಟು ಮಾಡುವನೆಂದು ನಿರ್ಧರಿಸಿದ್ದಾರೆ.
ಕೇವಲ ಲಗ್ನದಿಂದಲೇ ಅಲ್ಲದೆ ಶುಕ್ರನ ಸ್ಥಾನದಿಂದಲೂ ಚಂದ್ರನ ಸ್ಥಾನದಿಂದಲೂ 1, 2, 4, 5, 7, 8 ಮತ್ತು 12ನೇ ಸ್ಥಾನಗಳಲ್ಲಿ ಕುಜನಿದ್ದರೆ ದೋಷಕಾರಕ ಎಂದಿರುವರು.
ಲಗ್ನಾತ್ ಕುಜ ದೋಷವು ಶುಕ್ರಾತ್ ಹಾಗೂ ಚಂದ್ರಾತ್ ಕುಜ ದೋಷಕ್ಕಿಂತಲೂ ಎರಡರಷ್ಟು ಬಲವುಳ್ಳದ್ದು, ಲಗ್ನಾತ್ ಚಂದ್ರಾತ್ ಮತ್ತು ಶುಕ್ರಾತ್ ಮೂರು ಸ್ಥಾನಗಳಿಂದಲೂ ಕುಜದೋಷವಿದ್ದರೆ ಪೂರ್ಣ ಕುಜದೋಷವೆಂದು ಹೇಳಲಾಗಿದೆ. ಲಗ್ನಾತ್ ಮತ್ತು ಶುಕ್ರಾತ್ ಅಥವಾ ಲಗ್ನಾತ್ ಮತ್ತು ಚಂದ್ರಾತ್ ಇದ್ದರೆ % ಭಾಗ ಕುಜದೋಷ, ಕೇವಲ ಲಗ್ನಾತ್ ಇದ್ದರೆ ¾ ಭಾಗ; ಚಂದ್ರಾಶ್ ಅಥವಾ ಶುಕ್ರಾತ್ ಇದ್ದರೆ % ಭಾಗ ಹೀಗೆ ನಿರ್ಣಯ ಮಾಡಬಹುದಾಗಿದೆ. ಕುಜದೋಷ ವಧೂ-ವರರ ಜಾತಕಗಳಲ್ಲಿ ಸಮವಾಗಿದ್ದರೆ ಶುಭ, ವಧುವಿನ ಜಾತಕದಲ್ಲಿ ವರನ ಜಾತಕದಲ್ಲಿರುವುದಕ್ಕಿಂತಲೂ ಹೆಚ್ಚಾಗಿರಬಾರದು. ವರನ ಜಾತಕದಲ್ಲಿ ಭಾಗ ಹೆಚ್ಚಿದ್ದರೂ ದೋಷಕಾರಿಯಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?