ರಾಜಕೀಯ
ಪರೋಕ್ಷವಾಗಿ ಧಾರವಾಡ ಕ್ಷೇತ್ರ ಬೇಕು ಅಂದ್ರಾ ಶೆಟ್ಟರ್..?
ಹುಬ್ಬಳ್ಳಿ: ನಾನು ಘರವಾಪ್ಸಿಯಾದ ಬಳಿಕ ಯಾವ ಕ್ಷೇತ್ರವನ್ನೂ ಕೇಳಿಲ್ಲ. ಪಕ್ಷದ ತೀರ್ಮಾನ ಅಂತಿಮ.ಹಾವೇರಿ , ಬೆಳಗಾವಿಯಿಂದ ನನ್ನ ಕರೀತೀದಾರೆ.. ಆದ್ರೆ ಧಾರವಾಡಕ್ಕೆ ಬಹಳ ಜನ ಕರೀತೀದಾರೆ, ಲೋಕಸಭಾ ಚುನಾವಣೆಯ ಸ್ಪರ್ಧೆ ವರಿಷ್ಠರ ತೆಗೆದುಕೊಳ್ಳೋ ನಿರ್ಧಾರ ಮೇಲಿದೆ, ಹೈಕಮಾಂಡ ನಿರ್ಧಾರಕ್ಕೆ ನಾನು ಬದ್ಧ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ನನಗೆ ಲೋಕಸಭೆಗೆ ಅವಕಾಶ ಸಿಕ್ಕರೂ ಹೋಗಿರಲಿಲ್ಲ.ಮೂರು ಸಲ ಅವಕಾಶ ಬಂದಿತ್ತು, ಆದ್ರೆ ನನಗೆ ಇಂಟ್ರಸ್ಟ್ ಇರಲಿಲ್ಲ. ಆದ್ರೆ ಇದೀಗ ಜನರ ಒತ್ತಡವಿದೆ. ಪಕ್ಷದ ನಾಯಕರು ಹೇಳಿದ್ರೆ ನಾನು ಸ್ಪರ್ಧೆಗೆ ಸಿದ್ದನಿದ್ದೇನೆ. ಹುಬ್ಬಳ್ಳಿ -ಧಾರವಾಡಕ್ಕೆ ಬಹಳ ಜನ ಬೆಂಬಲ ತೋರಸ್ತೀದ್ದಾರೆ. ನಾನು ಯಾವ ಅಭ್ಯರ್ಥಿಪರವಾಗಿ ಮಾತಾಡಲ್ಲ ಎಂದರು.
ಜೋಶಿ ಹಾಗೂ ಶೆಟ್ಟರ ಮುನಿಸಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಎಲ್ಲಿ ಏನು ಹೇಳಬೇಕು. ಅದನ್ನು ಹೇಳಿದ್ದೇನೆ. ಡಿಕೆ ಶಿವಕುಮಾರ್ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಆಪಾದನೆ ನಿಲ್ಲಿಸಿ. ಶಾಮನೂರ ಶಿವಶಂಕ್ರಪ್ಪ ಅವರೆ ಆರೋಪ ತಳ್ಳಿ ಹಾಕಿದ್ದಾರೆ ಎಂದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?