International News
ಯುಎಇ ಜೈಲುಗಳಲ್ಲಿದ್ದ ಕೈದಿಗಳಿಗೆ ನೆರವಾದ ಭಾರತೀಯ ಉದ್ಯಮಿ

ಚಿನ್ನಾಭರಣ ವ್ಯಾಪಾರದ ಭಾರಿ ಹೆಸರು ಗಳಿಸಿರುವ ಉದ್ಯಮಿ ಫಿರೋಜ್ ಮರ್ಚೆಂಟ್ ಯುಎಇ ಜೈಲುಗಳಲ್ಲಿ ದಂಡ ಪಾವತಿಸಲಾಗದೇ ಸೆರೆವಾಸ ಅನುಭವಿಸುತ್ತಿದ್ದ ಕೈದಿಗಳಿಗೆ ನೆರವಾಗಿದ್ದಾರೆ. ಇದಕ್ಕಾಗಿ ಅವರು ಸುಮಾರು ಎರಡೂವರೆ ಕೋಟಿ ರೂಪಾಯಿ ನೆರವು ನೀಡಿದ್ದಾರೆ. ಅಲ್ಲದೇ ಜೈಲಿನಿಂದ ಬಿಡುಗಡೆಯಾದವರು ಭಾರತಕ್ಕೆ ಮರಳಲು ಬೇಕಾದ ಎಲ್ಲ ಏರ್ಪಾಡುಗಳನ್ನು ಸಹ ಮಾಡಿದ್ದಾರೆ. 2024ರ ಆರಂಭದಿಂದ ಇಲ್ಲಿಯವರೆಗೆ ಸುಮಾರು 900 ಭಾರತೀಯರು ಸ್ವದೇಶಕ್ಕೆ ಮರಳಲು ಫಿರೋಜ್ ಮರ್ಚೆಂಟ್ ನೆರವಾಗಿದ್ದಾರೆ.
ದುಬೈನಲ್ಲಿ ಪ್ಯೂರ್ ಗೋಲ್ಡ್ ಜ್ಯುವೆಲ್ಲರ್ಸ್ ಉದ್ಯಮಿ ನಡೆಸುತ್ತಿರುವ ಫಿರೋಜ್ ಮರ್ಚೆಂಟ್ ‘ದ ಫರ್ಗಟನ್ ಸೊಸೈಟಿ’ ಎಂಬ ಎನ್ ಜಿಒ ಮೂಲಕ ಹಲವಾರು ಕೈದಿಗಳಿಗೆ ನೆರವಾಗಿದ್ದಾರೆ. ಸಣ್ಣಪುಟ್ಟ ದಂಡ ಪಾವತಿಸಲು ಸಾಧ್ಯವಾಗದೆ ಜೈಲು ವಾಸ ಅನುಭವಿಸುತ್ತಿದ್ದವರಿಗೆ ಫಿರೋಜ್ ಮರ್ಚೆಂಟ್ ಹೊಸ ಆಶಾಕಿರಣವಾಗಿ ಪರಿಣಮಿಸಿದ್ದಾರೆ.
ಕೈದಿಗಳ ದಂಡ ಮಾತ್ರವೇ ಅಲ್ಲದೇ ಅವರು ಮಾಡಿದ್ದ ಸಾಲ, ಭಾರತಕ್ಕೆ ಮರಳಲು ಸೂಕ್ತ ವಿಮಾನಯಾನ ವ್ಯವಸ್ಥೆ ಮಾಡುವ ಮೂಲಕ ಅವರ ಕುಟುಂಬಗಳ ಜೊತೆ ಸೇರಿಕೊಳ್ಳಲು ಫಿರೋಜ್ ಮರ್ಚೆಂಟ್ ಸಹಾಯ ಮಾಡಿದ್ದಾರೆ. ಫಿರೋಜ್ ಮರ್ಚೆಂಟ್ ಕಾರ್ಯಕ್ಕೆ ಯುಎಇ ಅಧಿಕಾರಿಗಳು, ಸೆರೆವಾಸದಿಂದ ಬಿಡುಗಡೆಯಾದ ಕೈದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?