Featured
ಹಿಂದಿ ಹೇರುವಂತೆ ನಾನು ಯಾವತ್ತೂ ಹೇಳಿಲ್ಲ, ಹೇಳುವುದೂ ಇಲ್ಲ : ಉಲ್ಟಾ ಹೊಡೆದ ಅಮಿತ್ ಶಾ..!

ನವದೆಹಲಿ : ಒಂದು ದೇಶ, ಒಂದು ಭಾಷೆ ವಿಚಾರವಾಗಿ ಮಾತ್ನಾಡಿ ವಿವಾದ ಸೃಷ್ಟಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗ ಸಡನ್ನಾಗಿ ಉಲ್ಟಾ ಹೊಡೆದಿದ್ದಾರೆ. ದೆಹಲಿಯಲ್ಲಿ ಸುದ್ದಿ ಸಂಸ್ಥೆ ಜೊತೆ ಮಾತ್ನಾಡಿರೋ ಅಮಿತ್ ಶಾ, ನಾನು ಯಾವತ್ತು ಕೂಡ ಹಿಂದೆ ಹೇರಿಕೆ ಮಾಡುವಂತೆ ಹೇಳಿಲ್ಲ. ಹಿಂದಿಯನ್ನು ಬಲವಂತವಾಗಿ ಹೇರುವುದೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಕೂಡ ಹಿಂದಿಯೇತರ ರಾಜ್ಯ ಗುಜರಾತ್ನಿಂದ ಬಂದವನು. ನಾನು ಹೇಳಿದ್ದು ಇಷ್ಟೆ, ಹಿಂದಿಯನ್ನ ಎರಡನೇ ಭಾಷೆಯಾಗಿ ಕಲಿಯಿರಿ. ಮೊದಲ ಭಾಷೆ ಮಾತೃಭಾಷೆಯೇ ಆಗಿರಲಿ ಎಂದಷ್ಟೇ ನಾನು ಹೇಳಿದ್ದೇ ಎಂದು ಅಮಿತ್ ಶಾ ಹೇಳಿದ್ದಾರೆ. ಆದ್ರೆ, ಕೆಲವು ಮಂದಿ ಇದನ್ನ ರಾಜಕೀಯ ಮಾಡ್ತಾರೆ ಅಂದ್ರೆ, ಅದು ಅವರ ಇಚ್ಛೇ ಮಾಡಲಿ ಎಂದು ತಿರುಗೇಟು ಕೂಡ ನೀಡಿದ್ದಾರೆ.
ಶನಿವಾರವಷ್ಟೇ ಹಿಂದಿ ದಿವಸ್ ಆಚರಣೆ ವೇಳೆ ಒಂದು ದೇಶ, ಒಂದು ಭಾಷೆ ವಿಚಾರವಾಗಿ ಮಾತ್ನಾಡಿದ್ದರು. ಇದಕ್ಕೆ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದವು. ಇವತ್ತು ಸೂಪರ್ಸ್ಟಾರ್ ರಜನಿಕಾಂತ್ ಕೂಡ ಅಮಿತ್ ಶಾ ಹೇಳಿಕೆಗೆ ವಿರುದ್ಧ ಮಾತ್ನಾಡಿದ್ದರು. ಇಡೀ ದೇಶಾದ್ಯಂತ ಹಿಂದಿ ಹೇರಿಕೆ ವಿರುದ್ಧ ಹೋರಾಟದ ಕಿಚ್ಚು ಕಂಡು ಬಂತು. ಇದನ್ನ ಅರಿತ ಅಮಿತ್ ಶಾ ಈಗ ಉಲ್ಟಾ ಹೊಡೆದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?