Featured
ಕರ್ನಾಟಕದ ಮುಕುಟಕ್ಕೆ ತಟ್ಟಿದ ಡೆಂಗ್ಯೂ ಭೀತಿ- ಕೊರೊನಾ ಜೊತೆ ಮತ್ತೊಂದು ಮಹಾಮಾರಿಯ ಭಯ..!
![](https://risingkannada.com/wp-content/uploads/2020/07/SSS.jpg)
ರೈಸಿಂಗ್ ಕನ್ನಡ:
ವಿಶ್ವಕುಮಾರ್, ಬೀದರ್:
ಬೀದರ್ನಲ್ಲಿ ದಿನ ಕಳೆದಂತೆ ಮಹಾಮಾರಿ ಕೊರೊನಾ ಬೀತಿ ಹೆಚ್ಚುತ್ತಿದೆ. ಈ ನಡುವೆ ಸಾಂಕ್ರಾಮಿಕ ರೋಗ ಡೆಂಗ್ಯೂ ಭೀತಿ ಶುರುವಾಗಿದೆ. ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನದಿಂದ ವರುಣ ಕಣ್ಣಾಮುಚ್ಚಾಲೆಯಾಡುತ್ತಿದ್ದು, ನಗರದ ಬಡಾವಣೆಯ ಚರಂಡಿಗಳಲ್ಲಿ ಮಳೆ ನೀರು ಹರಿಯದೆ ರಸ್ತೆಯಲ್ಲೆಲ್ಲಾ ತುಂಬಿಕೊಂಡಿದೆ. ಇದರ ಜತೆಯಲ್ಲಿ ಮನೆಗಳಿಗೂ ಚರಂಡಿಯಲ್ಲಿನ ಹೊಲಸು ಮನೆಗೆ ನುಗ್ಗುವ ಭೀತಿ ಶುರುವಾಗಿದೆ.
ನಗರದ ಹಳೆಯ ಆದರ್ಶ ಕಾಲೋನಿಯಲ್ಲಿ ಚರಂಡಿಗೆ ಮಳೆ ನೀರು ಹರಿಯುತ್ತಿದ್ದು ಕೊಳಚೆ ನೀರು ಮನೆ ಬಾಗಿಲು ತಲುಪಿವೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಚರಂಡಿಯನ್ನ ಸ್ವಚ್ಚಗೊಳಿಸಿ, ಒಳ್ಳೆ ರಸ್ತೆ ನಿರ್ಮಿಸಿ ಕೊಡಿ ಅಂತಾ ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾರು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಬಡಾವಣೆ ಜನ ಅಳಲು ತೋಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ಇತ್ತ ಸಾವಿನ ಸಂಖ್ಯೆಯಲ್ಲೂ ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಮನೆ ಬಿಟ್ಟು ಹೊರಬಾರದ ಪರಿಸ್ಥಿತಿಯಲ್ಲೂ ಜನ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಈಗ ವರುಣನ ಆರ್ಭಟಕ್ಕೂ ಜನ ತತ್ತರಿಸಿದ್ದು, ಡೆಂಗ್ಯೂ ಜ್ವರದ ಭೀತಿ ಜಿಲ್ಲೆಯ ಜನತೆಗೆ ಕಾಡುತ್ತಿದೆ. ಇನ್ನು ಮೇಲಾದ್ರೂ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಾರಾ ಎಂದು ಕಾದು ನೋಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?