Featured
53 ವರ್ಷ ಸಂಸಾರ ನಡೆಸಿ, ಜೊತೆಯಾಗಿ ಜೀವಬಿಟ್ಟ ದಂಪತಿ…! – ಇವರ ಮೇಲೂ ಕಣ್ಣಿಟ್ಟಿದ್ದು ಮಾತ್ರ ಕೊರೊನಾ..!
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಅವರದ್ದು 53 ವರ್ಷಗಳ ಸುಖ ದಾಂಪತ್ಯ. ಆದ್ರೀಗ ಸಾವಿನಲ್ಲೂ ಒಂದಾಗಿದ್ದಾರೆ. ಈಗ ಜಗತ್ತಿನಾದ್ಯಂತ ಹೆಮ್ಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ವೃದ್ಧರನ್ನ ಕಿಲ್ಲರ್ ವೈರಸ್ ಟಾರ್ಗೆಟ್ ಮಾಡುತ್ತಿದೆ. ಇಂಥ ಅನೇಕ ಸಂದರ್ಭಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕ್ಷಿಯಾಗಿವೆ. ಕೆಲವು ತಿಂಗಳ ಹಿಂದೆ ಚೀನಾದ ಆಸ್ಪತ್ರೆವೊಂದರಲ್ಲಿ ವೃದ್ದ ದಂಪತಿ ಪರಸ್ಪರ ವಿದಾಯ ಹೇಳುವ ವಿಡಿಯೊ ಎಲ್ಲರ ಕಣ್ಣನ್ನ ಒದ್ದೆ ಮಾಡಿತ್ತು. ಅದೇ ತಿಂಗಳು ಬೆಡ್ನಲ್ಲಿ ವೃದ್ದ ದಂಪತಿ ಪರಸ್ಪರ ಸಂತೈಸಿದ್ದು ಕೂಡ ವೈರಲ್ ಆಗಿತ್ತು.
ಮತ್ತೊಂದು ಘಟನೆಯಲ್ಲಿ ವೃದ್ದರೊಬ್ಬರು ತಮ್ಮ ಪತ್ನಿಯ ಹುಟ್ಟುಹಬ್ಬದಂದು ಮನೆಯ ಹೊರಗೆ ಬೋರ್ಡ್ ಹಿಡಿದು ನಿಂತು ಶುಭಾಶಯ ಕೋರಿದ್ದು ಎಲ್ಲರಿಗೂ ಅಚ್ಚರಿ ನೀಡಿತ್ತು. ಇದೀಗ ಇಂಥದ್ದೆ ಹೃದಯ ಸ್ಪರ್ಶಿ ಘಟನೆಯೊಂದು ಅಮೆರಿಕಾದ ಟೆಕ್ಸಾಸ್‌ನಲ್ಲಿ ಜರುಗಿದೆ.
ಕೊರೊನಾ ಸೋಂಕಿಗೆ ಒಳಗಾಗಿದ್ದ ಕಟ್ಟಿಸ್ ಟಾರ್ಫ್ಲಿ (79) ಮತ್ತು ಬೆಟ್ಟಿ ಟಾರ್ಫ್ಲಿ (80)ವೃದ್ದ ದಂಪತಿ ಸುದೀರ್ಘ 53 ವರ್ಷಗಳ ಜೀವನ ನಡೆಸಿ ಕೊನೆಯುಸಿರೆಳೆದಿದ್ದಾರೆ.
ಕಳೆದ ತಿಂಗಳು ಜೂ.9 ರಂದು ಬೆಟ್ಟಿ ಟೆಕ್ಸಾಸ್ ಹೆಲ್ತ್ ಹ್ಯಾರಿಸ್ ಮೆಥೋಡಿಸ್ಟ್ ಹಾಸ್ಪಿಟಲ್ ಪೋರ್ಟ್ ವರ್ತ್ಗೆ ಮೊದಲು ದಾಖಲಾಗಿದ್ದರು.ನಂತರ ಸೋಂಕು ಪತಿ ಕರ್ಟಿಸ್ಗೂ ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾದರು. ಕೆಲವೇ ದಿನಗಳಲ್ಲಿ ಈ ಇಬ್ಬರು ದಂಪತಿ ಆರೋಗ್ಯ ಸುಧಾರಿಸದೇ ಇದ್ದಿದ್ದರಿಂದ, ಇಬ್ಬರೂ ಕೊನೆಯುಸಿರೆಳೆದು, ಸಾವಿನಲ್ಲೂ ಒಂದಾಗಿದ್ದಾರೆ.
ಸಾಯುವ ಮುನ್ನ ಪರಸ್ಪರ ಕೈ ಹಿಡಿದು ಪ್ರಾಣಬಿಟ್ಟರು. ಈ ದಂಪತಿಗಳು 50 ವರ್ಷದ ದಾಂಪತ್ಯ ಜೀವನವನ್ನ ಸಂಭ್ರಮದಿಂದ ಆಚರಿಸಿದ್ದರು. ಬಾಲ್ಯದಲ್ಲಿ ಜೊತೆಯಾಗಿ ಕಳೆದಿದ್ದ ಈ ವೃದ್ಧ ದಂಪತಿಗಳು ಇದೀಗ ಸಾವಿನಲ್ಲೂ ಒಂದಾಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?