Featured
ಡ್ರಗ್ಸ್ ಮಾಫಿಯಾ: ನಟಿ ಸಂಜನಾ ಗಲ್ರಾನಿಗೆ ಸಿಸಿಬಿ ಪೊಲೀಸರಿಂದ ಡ್ರಿಲ್

ರೈಸಿಂಗ್ ಕನ್ನಡ:
ಬೆಂಗಳೂರು:
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ನಟಿ ಸಂಜನಾ ಗಲ್ರಾನಿಗೆ ಕಳೆದ ಒಂದುವರೆ ಗಂಟೆಯಗಳಿಂದ ಸಿಸಿಬಿ ಪೊಲೀಸರು ಡ್ರಿಲ್ ಮಾಡುತ್ತಿದ್ದಾರೆ.
ಮಂಗಳವಾರ ಬೆಳ್ಳಂ ಬೆಳಗ್ಗೆ ನಟಿ ಸಂಜನಾ ಮನೆ ಮೇಲೆ ದಾಳಿ ಮಾಡಿ ಇಡೀ ಫ್ಲ್ಯಾಟ್ ಅನ್ನ ವಶಕ್ಕೆ ತೆಗೆದುಕೊಂಡಿತ್ತು.
ನಂತರ ಹತ್ತು ಗಂಟೆ ಸುಮಾರಿಗೆ ನಟಿ ಸಂಜನಾ ಗಲ್ರಾನಿ ಅವರನ್ನ ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ತೆಗೆದುಕೊಂಡು ಬರಲಾಯಿತು.
ಡ್ರಗ್ಸ್ ಜಾಲದ ನಂಟಿರುವ ಕುರಿತು ಪೊಲೀಸರು ನಟಿ ಸಂಜನಾ ಅವರ ಹೇಳಿಕೆಯನ್ನ ಪಡೆಯುತ್ತಿದ್ದಾರೆ. ಶೇಕ್ ಫಾಝಿಲ್ ಎಂಬಾತನ ಜೊತೆಗಿನ ನಂಟು ಜೊತೆಗೆ ಈಗಾಗಲ್ಲೇ ಬಂಧಿಸಲ್ಪಟ್ಟಿರುವ ಡ್ರಗ್ಸ್ ಪೆಡ್ಲರ್ಗಳಾದ ರಾಹುಲ್, ವಿರೇನ್ ಖನ್ನಜೊತೆಗಿನ ನಂಟಿನ ಕುರಿತು ಸಿಸಿಬಿ ಪೊಲೀಸರು ವಿಚಾರಿಸುತ್ತಿದ್ದಾರೆ.
ವಿಚಾರಣೆ ನಂತರ ಸಿಸಿಬಿ ಪೊಲೀಸರು ನಟಿ ರಾಗಿಣಿಯನ್ನ ಬಂಧಿಸಿದಂತೆ ನಟಿ ಸಂಜನಾ ಅವರನ್ನ ಬಂಧಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?