ರೈಸಿಂಗ್ ಕನ್ನಡ:
ಬೆಂಗಳೂರು:
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ದಂಪತಿಗಳಾದ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ.
ಡ್ರಗ್ಸ್ ದಂಧೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಸ್ಟಾರ್ ನಟ-ನಟಿಯರು ಡ್ರಗ್ಸ್ ಜಾಲದ ನಂಟು ಇರುವುದು ಬಹಿರಂಗವಾಗುತ್ತಿದೆ.ಮಂಗಳವಾರ ಸಿಸಿಬಿ ಪೊಲೀಸರು ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇಗೆ ನೊಟೀಸ್ ಜಾರಿ ಮಾಡಿ ಬುಧವಾರ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಜೊತೆಗೆ ವ್ಯಾಟ್ಸಪ್ ಮೂಲಕವೂ ಪೊಲೀಸರು ಖುದ್ದು ಹಾಜರಾಗುವಂತೆ ಸಂದೇಶ ಕಳುಹಿಸಿದ್ದರು.
ಈ ಸಂಬಂಧ ಸ್ಟಾರ್ ದಂಪತಿಗಳು ಬೆಂಗಳೂರಿನಲ್ಲಿ ಇಲ್ಲ ವಿಚಾರಣೆಗ ಬರುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ನಟಿ ಐಂದ್ರಿತಾ ರೇ ತಮ್ಮ ಟ್ವೀಟರ್ ಖಾತೆಯಲ್ಲಿ ಎಲ್ಲಯೂ ಹೋಗಿಲ್ಲ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಟ್ವೀಟರ್ನಲ್ಲಿ ಸ್ಪಷ್ಟನೆ ಕೊಟ್ಟಿದ್ದರು.
ಇದೀಗ 11 ಗಂಟೆಗೆ ಹತ್ತು ನಿಮಿಷಕ್ಕೆ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಬೆಂಗಳೂರಿನ ಸಿಸಿಬಿ ಕಚೇರಿಗೆ ಆಗಮಿಸಿದರು.ಮೊದಲಿಗೆ ನಟಿ ಐಂದ್ರಿತಾ ರೇ ಅವರ ವಿಚಾರಣೆ ಆರಂಭವಾಗಿದ್ದು ನಂತರ ನಟ ದಿಗಂತ್ ಅವರ ವಿಚಾರಣೆ ನಡೆಯಲಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?