Featured
ಏನಾಗಿದೆ ಕಲಾವಿದರಿಗೆ..? ಮತ್ತೊಬ್ಬ ನಟ ಆತ್ಮಹತ್ಯೆಗೆ ಶರಣು
![](https://risingkannada.com/wp-content/uploads/2020/07/ashutoshsuicide-1596077370.jpg)
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಬಣ್ಣದ ಲೋಕಕ್ಕೆ ಏನಾಗಿದೆ ಅನ್ನೋದೆ ತಿಳಿಯುತ್ತಿಲ್ಲ. ಕೊರೊನಾದಿಂದಾಗಿ ಕೆಲಸವಿಲ್ಲದೆ ಕಲಾವಿದರು ಖಿನ್ನತೆಗೆ ಒಳಗಾಗುತಿದ್ದಾರೆ. ಅಷ್ಟೇ ಆದ್ರೆ ಪರ್ವಾಗಿಲ್ಲ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ತೆರೆ ಮೇಲೆ ನಾಲ್ಕು ಜನರಿಗೆ ರೋಲ್‌ಮಾಡೆಲ್ ಆಗೋ ಕಲಾವಿದರೆ ಆತ್ಮಹತ್ಯೆಗೆ ಶರಣಾಗುತ್ತಿರೋದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ.
ಬಾಲಿವುಡ್‌ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಇನ್ನೂ ಮಾಸೇ ಇಲ್ಲ. ಸ್ಯಾಂಡಲ್‌ವುಡ್‌ನ ಹೊಸ ಚಿಗುರು ಸುಶೀಲ್ ಗೌಡ ಕೂಡ ಆತ್ಮಹತ್ಯೆಗೆ ಶರಣಾಗಿದ್ರು. ಇವೆಲ್ಲಾ ಇನ್ನೂ ಅಭಿಮಾನಿಗಳನ್ನ ಕಾಡುತ್ತಲೇ ಇವೆ. ಅದಾಗಲೇ, ಮತ್ತೊಬ್ಬ ನಟ ಆತಹತ್ಯೆಗೆ ಶರಣಾಗಿದ್ದಾನೆ. ಮರಾಠಿ ಸಿನಿಮಾ ರಂಗದ ನಟ ಅಶುತೋಷ್ ಭಾಕ್ರೆ ಸಾವಿಗೆ ಶರಣಾಗಿದ್ದಾರೆ. ಮರಾಠವಾಡ ಪ್ರಾಂತ್ಯದ ನಾಂದೇಡ್ ಪಟ್ಟದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬುಧವಾರ ಮಧ್ಯಾಹ್ನ 32 ವರ್ಷದ ಅಶುತೋಷ್ ಅವರ ಶವ ನಾಂದೇಡ್‌ನ ಗಣೇಶನಗರದ ಫ್ಲಾಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಟಿ ಮಯೂರಿ ದೇಶ್‌ಮುಕ್ ಇವರ ಪತ್ನಿಯಾಗಿದ್ದಾರೆ. “ಭಾಕರ್” ಹಾಗೂ “ಇಚಾರ್ ಥರ್ಲಾ ಪಕ್ಕ” ಅನ್ನೋ ಮರಾಠಿ ಚಿತ್ರಗಳಲ್ಲಿ ಅಶುತೋಷ್ ನಟಿಸಿದ್ದರು.
ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಅವರು ಕಳೆದ ಕೆಲ ದಿನಗಳಿಂದ ಖಿನ್ನತೆಯಿಂದ ಬಳಳುತ್ತಿದ್ದರು ಎನ್ನಲಾಗಿದೆ. ನಾಂದೇಡ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?