Featured
ಪೆಟ್ರೋಲ್ ಬಾಂಬ್ ಸ್ಫೋಟದಿಂದ ಪಾರಾದ ಹೀರೋ ರಿಷಬ್ ಶೆಟ್ಟಿ..! ಆಗಿದ್ದೇನು.?
ರೈಸಿಂಗ್ ಕನ್ನಡ :
ಸ್ಯಾಂಡಲ್ವುಡ್ ಖ್ಯಾತ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಹೀರೋ’ ಇದೇ ವಾರ ಬಿಡುಗಡೆ ಆಗ್ತಿದೆ. ಈಗಾಗಲೇ ಫಸ್ಟ್ ಲುಕ್ ಹಾಗೂ ಟ್ರೇಲರ್ನಿಂದಲೇ ಸಾಕಷ್ಟು ಗಮನ ಸೆಳೆದಿರೋ ಹೀರೋ, ಸಿನಿಮಾದ ಭಯಾನಕ ಸುದ್ದಿಯೊಂದು ರಿವೀಲ್ ಆಗಿದೆ.
ಯೆಸ್, ಟ್ರೇಲರ್ನಲ್ಲಿ ಪೆಟ್ರೋಲ್ ಬಾಂಬ್ ಬಳಿಸಿರೋ ದೃಶ್ಯ ಬಳಸಲಾಗಿತ್ತು. ಈ ದೃಶ್ಯ ನೋಡಿದ ಸಿನಿಪ್ರೇಕ್ಷಕರು ಸೂಪರ್ ಅಂದಿದ್ರು. ಅಷ್ಟರ ಮಟ್ಟಿಗೆ ಈ ದೃಶ್ಯ ನೋಡುಗರ ಗಮನ ಸೆಳೆದಿತ್ತು. ಆದ್ರೆ, ಈ ದೃಶ್ಯದ ಚಿತ್ರೀಕರಣ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಸುತ್ತಮುತ್ತ ನಡೆಯುತ್ತಿರುವಾಗ ಬೆಂಕಿ ಅವಘಡ ಸಂಭವಸಿತ್ತು. ಚಿತ್ರೀಕರಣಕ್ಕಾಗಿ ಪೆಟ್ರೋಲ್ ಬಾಂಬ್ ಸಿಡಿಸುವ ವೇಳೆ ಈ ಬೆಂಕಿ ತಗುಲಿದ್ದು, ರಿಷಬ್ ಶೆಟ್ಟಿ ತಲೆ ಕೂದಲು ಸುಟ್ಟು, ಬೆನ್ನಿಗೆ ಗಾಯವಾಗಿದೆ. ಅದೃಷ್ಟವಶಾತ್ ರಿಷಬ್ ಶೆಟ್ಟಿ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಕೊಂಚ ಯಾಮಾರಿದ್ರೂ ರಿಷಬ್ ಪ್ರಾಣಕ್ಕೆ ಕಂಟಕವಿತ್ತು.
ಹೀರೋ ಟ್ರೇಲರ್ನಲ್ಲಿಯೇ ಒಂದಿಷ್ಟು ಫನ್ನಿ ಎಲಿಮೆಂಟ್ಗಳನ್ನ ಎಳೆ ಎಳೆಯಾಗಿ ತೋರಿಸಿದ್ದು, ಹೇರ್ಸ್ಟೈಲಿಶ್ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡ್ರೆ, ಹೀರೋಯಿನ್ ಗಾನವಿ ಲಕ್ಷ್ಮಣ್ ನಟಿಸಿದ್ದಾರೆ. ಹೀರೋ ಎದುರು ಖಡಕ್ ವಿಲನ್ ಆಗಿ ಪ್ರಮೋದ್ ಶೆಟ್ಟಿ ಮಿಂಚಿದ್ದಾರೆ. ಹಳ್ಳಿಯ ವಾತಾವರಣದಲ್ಲಿ, ಸುಂದರ ತಾಣಗಳಲ್ಲಿ ಈ ಸಿನಿಮಾವನ್ನ ಚಿತ್ರೀಕರಿಸಿದ್ದು, ಟ್ರೇಲರ್ನಲ್ಲಿಯೇ ಸಿನಿಮಾದ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ರಿಲೀಸ್ಗೂ ಮುನ್ನವೇ ಸಾಕಷ್ಟು ಸದ್ದು ಮಾಡಿರೋ ಹೀರೋ ಸಿನಿಮಾಕ್ಕೆ, ಭರತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ನಾಲ್ಕು ಹಾಡಗಳಿದ್ದು, ಇದಕ್ಕೆ ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ರಿಷಬ್ ಫಿಲಂ ಬ್ಯಾನರ್ನಲ್ಲಿ ಹೀರೋ ಸಿನಿಮಾ ಮೂಡಿಬಂದಿದ್ದು, ಇದೇ ಮಾರ್ಚ್ 5ಕ್ಕೆ ರಾಜ್ಯದ್ಯಾಂತ ಥಿಯೇಟರ್ಗಳಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಆಲ್ ದಿ ಬೆಸ್ಟ್ ಹೀರೋ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?