Featured
ಆರ್‌ಸಿಬಿಗೆ ಬಂತು ಆನೆ ಬಲ – ಐಪಿಎಲ್‌ಗೆ ರೆಡಿ ಅಂದ್ರು ಎಬಿ ಡಿವಿಲಿಯರ್ಸ್..!
![](https://risingkannada.com/wp-content/uploads/2020/08/Untitled-1.png)
ರೈಸಿಂಗ್ ಕನ್ನಡ :
ಸ್ಪೋರ್ಟ್ಸ್ ಡೆಸ್ಕ್ :
ಕೊರೊನಾ ಸೈಲೆಂಟ್ ಆಗ್ತಿಯೋ ಇಲ್ವೋ ಗೊತ್ತಿಲ್ಲ. ಆದ್ರೆ, ದೇಶಾದ್ಯಂತ ವರುಣಾ ಮಾತ್ರ ಆರ್ಭಟಿಸುತ್ತಲೇ ಇದ್ದಾನೆ. ಇಷ್ಟಕ್ಕೆ ಎಲ್ಲವೂ ಮುಗಿಯೋದಿಲ್ಲ, ಬದಲಾಗಿ ಸೆಪ್ಟೆಂಬರ್ 19 ರಿಂದ ಭಾರತದಲ್ಲಿ ಸುನಾಮಿ ಶುರುವಾಗಲಿದೆ. ಅರೇ ಇದೇನಪ್ಪ, ಸುನಾಮೀನಾ ಅಂತೀರಾ.. ಹೌದು, ಅದೇ ರನ್ ಸುನಾಮಿ, ಕ್ರಿಕೆಟ್ ಸುನಾಮಿ. ಯೆಸ್ ಐಪಿಎಲ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಎಲ್ಲಾ ಫ್ರಾಂಚೈಸಿಗಳು, ತಮ್ಮ ಆಟಗಾರರ ಜೊತೆ ಯುನೈಟೆಡ್ ಅರಬ್‌ಗೆ ಹಾರೋಕೆ ಸಜ್ಜಾಗಿವೆ.
ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಆಡೋಕೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. . ಇಲ್ಲಿ ಯಾರೂ ಬೇಕಾದ್ರೂ ರಾತ್ರೋ ರಾತ್ರಿ ಸ್ಟಾರ್ ಆಗಬಹುದು. ಕೋಟಿ ಕೋಟಿ ಹಣ ಮಾಡಬಹುದು. ಹೀಗಾಗಿ ಐಪಿಎಲ್ ಅಂದ್ರೆ, ಬಹುತೇಕ ಕ್ರಿಕೆಟರ್ಸ್‌ಗೆ ಅಚ್ಚುಮೆಚ್ಚು. ಅದ್ರಲ್ಲೂ ವಿದೇಶಿ ಆಟಗಾರರು, ಈ ಬಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡಲು ಚಾತಕ ಪಕ್ಷಿಯಂತೆ ಕಾಯ್ತಾ ಇರ್ತಾರೆ. ಮುಂದಿನ ತಂಗಳು ಸೆಪ್ರೆಂಬರ್ 19 ರಿಂದ ಯುಎಇನಲ್ಲಿ ನಡೆಯಲಿರುವ ಐಪಿಎಲ್ ಸೀಸನ್ 13ರಲ್ಲಿ ಮಿಂಚಲು ವಿದೇಶಿ ಆಟಗಾರರು ಕಾತರರಾಗಿದ್ದಾರೆ.
![](https://risingkannada.com/wp-content/uploads/2020/08/Untitled.png)
ಮಿಸ್ಟರ್ 360 ಡಿಗ್ರಿ ಖ್ಯಾತಿಯ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿ ಡಿವಿಲಿಯರ್ಸ್ ಕೂಡ ಐಪಿಎಲ್‌ಗಾಗಿ ಕಾಯುತ್ತಿ್ದದಾರೆ. ತಮ್ಮ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರೋ ಎಬಿಡಿ, ರೆಡಿ ಟು ಪ್ಲೇಯ ಐಪಿಎಲ್ 2020 ಎಂದು ಟ್ವೀಟ್ ಮಾಡಿದ್ದಾರೆ.
ಡಿವಿಲಿಯರ್ಸ್‌ರ ಈ ಟ್ವೀಟ್‌ನಿಂದ ಐಪಿಎಲ್‌ನಲ್ಲಿ ಡಿವಿಲಿಯರ್ಸ್ ಆಡೋದು ಪಕ್ಕಾ ಆದಂತಾಗಿದೆ. ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದ ಆಟಗಾರರು ಐಪಿಎಲ್ ಆಡೋದು ಅನುಮಾನ ಅನ್ನೋ ಮಾತುಗಳು ಕೇಳಿ ಬಂದಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?