Connect with us

Featured

ಅರಸು ನಿರ್ದೇಶಕರ ಹೊಸ ಪ್ರೇಮಕಥೆ ತೆರೆಗೆ ಬರಲು ರೆಡಿ….ಜುಲೈ 14ಕ್ಕೆ ‘ಅಪರೂಪ’ ಸಿನಿಮಾ ಬಿಡುಗಡೆ

ರೈಸಿಂಗ್ ಕನ್ನಡ :- ಅರಸು, ಆಕಾಶ್‌, ಅಜಿತ್‌, ಅತಿರಥ, ಅಭಯ್‌ ಸೇರಿದಂತೆ ಹಲವರು ವಿಭಿನ್ನ ಹಾಗೂ ವಿಶಿಷ್ಟ ಪ್ರೇಮಕಥೆಗಳ ನಿರ್ದೇಶಿಸಿ ಸೈ‌ ಎನಿಸಿಕೊಂಡಿರುವ ಮಹೇಶ್ ಬಾಬು ಸಾರಥ್ಯದ ಅಪರೂಪ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜುಲೈ 14ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರ್ತಿದೆ. ಅಪರೂಪ ಸಿನಿಮಾ ಮೂಲಕ ಸುಘೋಷ್‌ ಮತ್ತು ಹೃತಿಕಾ ಕನ್ನಡ ಸಿನಿಮಾ ಲೋಕಕ್ಕೆ ನಾಯಕ ಹಾಗೂ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಹೊಸ ರೀತಿಯ ಪ್ರೇಮಕಥೆಯಾಗಿರುವ ಅಪರೂಪ ಸಿನಿಮಾದಲ್ಲಿ ನಾಯಕ ನಾಯಕಿಯ ನಡುವೆ ಬರುವ ಅಹಂ ವಿಲನ್‌ ಆಗುತ್ತದೆ. ಅದರಿಂದ ಏನೇನು ತೊಂದರೆ ಉಂಟಾಗುತ್ತದೆ ಅನ್ನೋದು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಾಯಕ ಸುಘೋಷ್ ಮೂಲತಃ ಮಂಡ್ಯದವರು. ಚಿಕ್ಕಂದಿನಿಂದಲೇ ಸಿನಿಮಾ‌ ಕನಸು ಕಟ್ಟಿಕೊಂಡವರು. ಮಹೇಶ್ ನಿರ್ದೇಶನದ ಅತಿರಥ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರ ನಟನೆ ನೋಡಿ ಅಪರೂಪ ಸಿನಿಮಾಗೆ ನಾಯಕರನಾಗಿ ನಟಿಸುವ ಅವಕಾಶ ನೀಡಿದ್ದಾರೆ. ನೃತ್ಯದಲ್ಲಿಯೂ ಪರಿಣಿತರಾಗಿರುವ ಸುಘೋಷ್, ಕಷ್ಟಕರವಾದ ಸ್ಟೆಪ್ಸ್ ಗಳನ್ನು ಸರಾಗವಾಗಿ ಮಾಡಬಲ್ಲರು. ಅವರು ಹೆಜ್ಜೆ ಹಾಕಿರುವ ‘ಲವ್ ಗೆ ನೋ ನೋ’ ಎಂಬ ಹಾಡು ಈಗಾಗಲೇ ಸಖತ್ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಕಿ ಹೃತಿಕಾ ತೆಲುಗಿನ ಖ್ಯಾತ ನಟಿ ಅಮನಿ ಸಹೋದರನ ಪುತ್ರಿ. ವಿಷ್ಣುವರ್ಧನ್ ನಟನೆಯ ಅಪ್ಪಾಜಿ ಚಿತ್ರದಲ್ಲಿ ಅಮನಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

ಅಶೋಕ್ , ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್ , ದಿನೇಶ್ ಮಂಗಳೂರು, ವಿಜಯ್ ಚೆಂಡೂರು, ಕಡ್ಡಿಪುಡಿ‌ ಚಂದ್ರು, ಮೋಹನ್ ಜುನೇಜಾ ಅಪರೂಪ ಸಿನಿಮಾದ ಭಾಗವಾಗಿದ್ದಾರೆ. ಪ್ರಜ್ವಲ್‌ ಪೈ ಸಂಗೀತ ಹಾಡುಗಳಿಗೆ ಅರ್ಮನ್ ಮಲ್ಲಿಕ್, ಅನಿರುದ್ಧ್ ಶಾಸ್ತ್ರೀ, ಸಂಗೀತ ರವೀಂದ್ರನಾಥ್, ಪ್ರಜ್ವಲ್ ಪೈ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಹಾಡಿಗೆ ಧ್ವನಿಯಾಗಿರುವುದು ವಿಶೇಷ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕಾಶ್ಮೀರದಲ್ಲಿ ಶೂಟಿಂಗ್ ನಡೆಸಲಾಗಿದ್ದು, ಸೂರ್ಯಕಾಂತ್‌ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ತಯಾರಾಗಿರುವ ಅಪರೂಪ ಸಿನಿಮಾವನ್ನು ಕೆಆರ್ ಜಿ ಸ್ಟುಡಿಯೋಸ್ ರಾಜ್ಯಾದ್ಯಂತ ವಿತರಣೆ ಮಾಡಲಿದೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ