ಬೆಂಗಳೂರು
ರಾಜ್ಯಗಳನ್ನು ಸಮಾಧಾನ ಪಡಿಸುವ ತಂತ್ರ
![](https://risingkannada.com/wp-content/uploads/2024/03/cm-siddhu.jpg)
Bengalore : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜಾಗೂರಕ ಹೆಜ್ಜೆಗಳನ್ನ ಇಡುತ್ತಿದೆ. ಈಗಾಗಲೇ ಹಲವು ರಾಜ್ಯಗಳಿಗೆ ಪ್ರವಾಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸಾವಿರಾರು ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಮತ್ತೊಂದೆಡೆ ತೆರಿಗೆ ಪಾಲಿನಲ್ಲಿ ರಾಜ್ಯಗಳಿಗೆ ಅನ್ಯಾಯ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಗಳ ಆಕ್ರೋಶ ತಣಿಸಲು, ಕೇಂದ್ರ ಸರ್ಕಾರ ಇದೀಗ ಪ್ರಮುಖ ಹೆಜ್ಜೆ ಇಟ್ಟಿದೆ. ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಹೆಚ್ಚಳ ಮಾಡಿದೆ.
ಹೆಚ್ಚುವರಿಯಾಗಿ 1,42,122 ಕೋಟಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರಗಳಿಗೆ ಸಮಾಜ ಕಲ್ಯಾಣ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕೈಗೊಳ್ಳಲು ಇದ್ರಿಂದ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಣ ಬಿಡುಗಡೆಯೊಂದಿಗೆ ರಾಜ್ಯ ಸರ್ಕಾರಗಳು ಫೆಬ್ರವರಿ ಅಂತ್ಯದ ವೇಳೆಗೆ ಅನ್ವಯವಾಗುವಂತೆ, ಮೂರು ಕಂತುಗಳಲ್ಲಿ ತೆರಿಗೆ ಪಾಲನ್ನು ಪಡೆಯಲಿವೆ.. ಇದ್ರಂತೆ ಕರ್ನಾಟಕಕ್ಕೆ 5183 ಕೋಟಿ ತೆರಿಗೆ ಪಾಲಿನ ಹಣ ಸಿಕ್ಕಿದೆ.
ಉಳಿದಂತೆ ಉತ್ತರ ಪ್ರದೇಶಕ್ಕೆ 25495 ಕೋಟಿ, ಬಿಹಾರಕ್ಕೆ 14295 ಕೋಟಿ, ಮಧ್ಯಪ್ರದೇಶಕ್ಕೆ 11157 ಕೋಟಿ, ಮಹಾರಾಷ್ಟ್ರಕ್ಕೆ 8978 ಕೋಟಿ, ರಾಜಸ್ತಾನಕ್ಕೆ 8564 ಕೋಟಿ ಸಿಗಲಿದೆ. ಈ ವಿಕೇಂದ್ರೀಕರಣವು ಫೆಬ್ರವರಿ 12, 2024 ರಂದು ಈಗಾಗಲೇ ಬಿಡುಗಡೆಯಾದ 72,961 ಕೋಟಿ ರೂಪಾಯಿಗಳ ತೆರಿಗೆ ಹಂಚಿಕೆಗೆ ಹೆಚ್ಚುವರಿಯಾಗಿದೆ. ಇನ್ನು ಫೆಬ್ರವರಿ 2024 ರಲ್ಲಿ ರಾಜ್ಯಗಳು ಮೂರು ಕಂತುಗಳ ತೆರಿಗೆ ಹಂಚಿಕೆಯನ್ನು ಸ್ವೀಕರಿಸಿವೆ.
ನಿನ್ನೆ ತಾನೇ ಕರ್ನಾಟಕ ವಿಧಾನಮಂಡಲ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನ ಬಗ್ಗೆ ಆಗಿರುವ ಅನ್ಯಾಯದ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಇದರ ಬೆನ್ನಲ್ಲೇ ಕೇಂದ್ರದ ಸರ್ಕಾರದಿಂದ ಈ ಮಾಹಿತಿ ಹೊರಬಿದ್ದಿರುವುದು ಸಾಕಷ್ಟು ಕೂತುಹಲಕ್ಕೆ ಕಾರಣವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?