Featured
ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಪುರುಷರ ಜೊತೆಯಲ್ಲೇ ಬರಲಿದೆ ಮಹಿಳಾ ಐಪಿಎಲ್!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಕ್ರಿಕೆಟ್ ಇಲ್ಲದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಅದ್ರಲ್ಲೂ ಐಪಿಎಲ್ ಇಲ್ಲದೇ ಎಲ್ಲರಿಗೂ ಮನರಂಜನೆಯೇ ಇಲ್ಲದಂತಾಗಿದೆ. ಆದ್ರೀಗ ಬಿಸಿಸಿಐ ಬಿಗ್ಬಾಸ್ ಸೌರವ್ ಗಂಗೂಲಿ ಗುಡ್ ನ್ಯೂಸ್ ಒಂದನ್ನ ನೀಡಿದ್ದಾರೆ. ಪುರುಷರ ಐಪಿಎಲ್ ಜೊತೆಯಲ್ಲೇ ಮಹಿಳೆಯರ ಐಪಿಎಲ್ ಅನ್ನ ಕೂಡ ನಡೆಸೋದಾಗಿ ತಿಳಿಸಿದ್ದಾರೆ.
ಈ ಕುರಿತ ಮಾತನಾಡಿದ ಅವರು ಮಹಿಳಾ ಐಪಿಎಲ್ ಅಥವಾ ಅದೇ ರೀತಿಯ ಚಾಲೆಂಜರ್ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧವಾಗಿದೆ ಅನ್ನೋ ಮೂಲಕ, ಭಾರತೀಯ ಕ್ರಿಕೆಟ್ ಲೋಕ ಅಭಿಮಾನಿಗಳನ್ನ ಮತ್ತಷ್ಟು ರಂಜಿಸಲಿದೆ ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ. ಈ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಶೀಘ್ರದಲ್ಲೇ ಮಹಿಳಾ ಐಪಿಎಲ್ ಟೂರ್ನಿಯ ಕುರಿತು ವೇಳಾಪಟ್ಟಿ ಯೋಜಿಸುತ್ತೇವೆ ಎಂದು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಗಂಗೂಲಿ ಹೇಳಿದ್ದಾರೆ.
ಮೂಲಗಳ ಪ್ರಕಾರ ಮಹಿಳಾ ಐಪಿಎಲ್ ಟೂರ್ನಿಯನ್ನು ನವೆಂಬರ್ 1-10 ಅವಧಿಯಲ್ಲಿ ಆಯೋಜಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಮನೆಯಲ್ಲಿರುವ ಆಟಗಾರ್ತಿಯರಿಗೆ ತರಬೇತಿ ಕ್ಯಾಂಪ್ ಆಯೋಜಿಸುವ ಕುರಿತು ಕೂಡ ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ.
ಇದೇ ವೇಳೆ ಭಾರತೀಯ ಕ್ರಿಕೆಟ್ಗೆ ಕೊರೊನಾದಿಂದ ಯಾವುದೇ ರೀತಿ ತೊಂದರೆ ಇಲ್ಲ ಅನ್ನೋದನ್ನ ಮಾತನಾಡುತ್ತಾ, ಭಾರತದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿದ್ದೇವೆ. ಕ್ರಿಕೆಟ್ ಲೋಕದಲ್ಲಿ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಟೂರ್ನಿ ನಡೆಸಿದ್ರೂ ಕೂಡ, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳೋದಾಗಿ ಗಂಗೂಲಿ ಭರವಸೆ ನೀಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?