Featured
ಭಾರತ, ಅಮೆರಿಕಾ ವಿಮಾನಗಳ ಎಂಟ್ರಿಗೆ ಇಲ್ಲ ಪರ್ಮಿಷನ್- 31 ದೇಶಗಳಿಗೆ ಕುವೈತ್ ಬ್ಯಾನ್..!

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಕೊರೊನಾ ಮಹಾಮಾರಿಗೆ ವಿಶ್ವದ ಎಲ್ಲಾ ದೇಶಗಳು ಕಂಗಾಲಾಗಿ ಹೋಗಿವೆ. ಈ ಮಧ್ಯೆ ಕೊರೊನಾ ಹೆಚ್ಚಿರುವ ದೇಶಗಳ ನಾಗರೀಕರ ಪ್ರಯಾಣ ದುಸ್ಥರವಾಗುತ್ತಿದೆ. ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ ಸೋಂಕಿತರು ಹೆಚ್ಚಿರುವ ದೇಶಗಳಿಂದ ಒಳಬರುವ ವಿಮಾನಗಳಿಗೆ ನಿರ್ಬಂಧ ಹೇರಿದೆ. ಈಗ ಕುವೈತ್ ಕೂಡ ತನ್ನ ವಿಮಾನ ನಿಲ್ದಾಣದ ಒಳಗೆ ಬರುವ 31 ದೇಶಗಳ ವಿಮಾನಗಳಿಗೆ ನಿಷೇಧಿಸಿದೆ.
ಕೊವಿಡ್19 ಲಾಕ್ಡೌನ್ ಬಳಿಕ ಗಲ್ಫ್ ರಾಷ್ಟ್ರಗಳಲ್ಲಿ ವಾಣಿಜ್ಯ ವಿಮಾನಯಾನ ಆರಂಭವಾಗಿದೆ. ಕಳೆದ 5 ತಿಂಗಳ ಬಳಿಕ ವಿಮಾನಯಾನ ಆರಂಭವಾದರೂ ಸಾಕಷ್ಟು ನಿರ್ಬಂಧ ವಿಧಿಸಲಾಗಿದೆ. ಕುವೈತ್ನಲ್ಲಿ ಭಾರತ ಸೇರಿದಂತೆ 31 ದೇಶಗಳ ವಾಣಿಜ್ಯ ವಿಮಾನಗಳ ಎಂಟ್ರಿಯನ್ನು ಆರೋಗ್ಯ ಇಲಾಖೆಯ ಸಲಹೆಯ ಮೇರೆಗೆ ಸರ್ಕಾರ ನಿಷೇಧಿಸಿದೆ. ಉಳಿದ ದೇಶಗಳ ವಿಮಾನಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೂ ಸಾಕಷ್ಟು ನಿಯಮಗಳನ್ನು ಪಾಲಿಸಬೇಕಿದೆ.

ಕುವೈತ್ ಭಾರತ, ಚೀನಾ, ಬ್ರೆಜಿಲ್, ಸ್ಪೇನ್, ಶ್ರೀಲಂಕಾ, ಅಮೆರಿಕ, ಸಿಂಗಪೂರ, ಆಫ್ರಿಕಾ ಖಂಡದ ರಾಷ್ಟ್ರಗಳ ವಿಮಾನಗಳನ್ನು ನಿಷೇಧಿಸಿದೆ. ಕೊರೊನಾ ಬಿಕ್ಕಟ್ಟು ಕಡಿಮೆ ಆಗುವ ತನಕ ಈ ಕ್ರಮ ಚಾಲ್ತಿಯಲ್ಲಿರುತ್ತದೆ ಎಂದು ಕುವೈತ್ ಸಿವಿಲ್ ಏವಿಯೇಷನ್ ತಿಳಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?