Featured
ಅನ್ಲಾಕ್ 3 ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ: ಆ.5ರಿಂದ ಜಿಮ್,ಯೋಗ ಕೇಂದ್ರ ಓಪನ್: ರಾತ್ರಿ ಸಂಚಾರಕ್ಕಿದ್ದ ನಿರ್ಬಂಧ ತೆರೆವು
ರೈಸಿಂಗ್ ಕನ್ನಡ :
ಬೆಂಗಳೂರು:
ಹೆಮ್ಮಾರಿ ಕೊರೊನ ನಿಯಂತ್ರಿಸಲು ದೇಶಾದ್ಯಂತ ವಿಧಿಸಲಾಗಿರುವ ಲಾಕ್ಡೌನ್ ಸಡಿಲಿಕೆಯ
ಅನ್ಲಾಕ್ 3 ಮಾರ್ಗಸೂಚಿಗಳನ್ನ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ.
ಆಗಸ್ಟ್ 5ರಿಂದ ಅನ್ಲಾಕ್ 3 ಆರಂಭವಾಗಲಿದ್ದು ಇನ್ನು ಮುಂದೆ ರಾತ್ರಿ ಪಾಳೆಯದಲ್ಲಿ ಕರ್ಫ್ಯೂ ಇರುವುದಿಲ್ಲ. ಜನರ ಸಂಚಾರಕ್ಕಿದ್ದ ನಿರ್ಬಂಧವನ್ನ ತೆರೆವುಗೊಳಿಸಲಾಗಿದೆ. ಆ.5ರಿಂದ ಯೋಗ ಕೇಂದ್ರಗಳು ಮತ್ತು ಜಿಮ್ಗಳನ್ನ ತೆರೆಯಲು ಅನುಮತಿ ಸಿಗಲಿದೆ.
ಇದರ ಜೊತೆಗೆ ಆ.15ರಂದು ದೇಶದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳನ್ನ ಅಂತರ ಕಾಯ್ದುಕೊಂಡು ಆಚರಿಸಬಹುದಾಗಿದೆ. ಮಾಸ್ಕ್ ಧರಿಸುವುದು ಮತ್ತು ಆರೋಗ್ಯ ಸಂಬಂಧ ನಿಯಮಗಳನ್ನ ಪಾಲಿಸಲೇಬೇಕೆಂದು ಗೃಹ ಸಚಿವಾಲಯ ಹೇಳಿದೆ.
ಆದರೆ ಶಾಲೆ, ಕಾಲೇಜು, ತರಬೇತಿ ಸಂಸ್ಥೆಗಳು ಆಗಸ್ಟ್ 31ರವರೆಗೆ ಮುಚ್ಚಲಾಗಿದೆ. ಸಾಮಾಜಿಕ, ರಾಜಕೀಯ,ಕ್ರೀಡೆ, ಮನರಂಜನೆ, ಶೈಕ್ಷಣಿಕ,ಸಾಂಸ್ಕೃತಿಕ ಧಾರ್ಮಿಕ ಸಮಾರಂಭಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ.
ಸಿನಿಮಾ, ಮೆಟ್ರೊ ಮತ್ತು ಪಾರ್ಕ್, ಈಜುಕೊಳ , ರಂಗ ಮಂದಿರ ಬಾರ್ ಹಾಗೂ ಅಡಿಟೋರಿಯಂಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?