Featured
ಬೆಂಗಳೂರಿನ ನಡುರಸ್ತೆಯಲ್ಲೇ ನಟ ಕೋಮಲ್ಗೆ ಥಳಿತ : ಬೆಚ್ಚಿಬಿದ್ದ ಕನ್ನಡ ಚಿತ್ರರಂಗ..!
ಬೆಂಗಳೂರು : ಕಾಮಿಡಿ ನಟ ಕೋಮಲ್ಗೆ ಯಾರೋ ಕಿಡಿಕೇಡಿಗಳು ಬೆಂಗಳೂರಿನ ನಡು ರಸ್ತೆಯಲ್ಲೇ ರಕ್ತ ಬರುವಂತೆ ಥಳಿಸಿದ್ದಾರೆ. ಆದ್ರೆ, ನಟ ಕೋಮಲ್ಗೆ ಥಳಿಸಿದ್ದು ಯಾರು..? ಯಾಕೆ ಹೊಡೆದ್ರು..? ಅನ್ನೋದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಕಿಡಿಗೇಡಿಗಳಿಂದ ಏಟು ತಿಂದ ಕೋಮಲ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆದು, ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಮೇಲಿನ ಹಲ್ಲೆ ಕುರಿತಾಗಿ, ಪೊಲೀಸರಿಗೆ ಹೇಳಿಕೆ ನೀಡಿರೋ ನಟ ಕೋಮಲ್, ನಾನು ಮಕ್ಕಳನ್ನು ಟ್ಯೂಷನ್ಗೆ ಬಿಡಲಿಕ್ಕೆ ಹೋಗ್ತಿದ್ದೆ. ಈ ವೇಳೆ ಏಕಾಏಕಿ ನಾಲ್ಕು ಜನ ನನ್ನ ಕಾರನ್ನು ಅಡ್ಡಗಟ್ಟಿದ್ರು. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ರು. ಈ ವೇಳೆ, ಸ್ಥಳೀಯರು ನನ್ನ ರಕ್ಷಣೆಗೆ ನಿಂತ್ರು. ಹಲ್ಲೆ ಮಾಡಿದ ವ್ಯಕ್ತಿಗಳ ಬಗ್ಗೆ ಮಾಹಿತಿ ಇಲ್ಲ ಎಂದು ಮಲ್ಲೇಶ್ವರಂ ಪೊಲೀಸರಿಗೆ ದೂರಿನಲ್ಲಿ ಹೇಳಿದ್ದಾರೆ.
ನಟ ಕೋಮಲ್ ಮೇಲೆ ಹಲ್ಲೆ ನಡೆಸಿರೋ ಕಿಡಿಗೇಡಿಗಳನ್ನ ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು, ತನಿಖೆ ನಡೆಸಿದ್ದಾರೆ.
ನಟ ಕೋಮಲ್ ಮೇಲೆ ಹಲ್ಲೆ ಆಗಿರೋ ವಿಚಾರ ತಿಳಿಯುತ್ತಿದ್ದಂತೆ, ನಟ ಹಾಗೂ ಕೋಮಲ್ ಅಣ್ಣ ಜಗ್ಗೇಶ್ ಕೂಡ ಆಸ್ಪತ್ರೆಗೆ ಬಂದ್ರು. ಅಲ್ಲಿಂದ ಪೊಲೀಸ್ ಸ್ಟೇಷನ್ಗೆ ಬಂದು ದೂರು ನೀಡಿದ್ರು. ಈ ವೇಳೆ ಮಾತ್ನಾಡಿದ ಜಗ್ಗೇಶ್, ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಬಳಿ ಘಟನೆ ನಡೆದಿದೆ. ಕೋಮಲ್ ಮೇಲೆ ಹಲ್ಲೆ ಮಾಡಿರೋ ನಾಲ್ಕು ಜನ ಕುಡಿದಿದ್ರು. ಈ ರೀತಿಯ ಘಟನೆ ಬೆಂಗಳೂರಿನಲ್ಲಿ ಆಗಿರೋದು ಭಯ ಹುಟ್ಟಿಸಿದೆ. ಕುಡಿದು, ಗಾಂಜಾ ಸೇವಿಸಿ, ಹಗಲು ಹೊತ್ತಿನಲ್ಲೇ ಬೆಂಗಳೂರಲ್ಲಿ ಈ ರೀತಿ ನಡೆದ್ರೆ ಏನು ಅರ್ಥ ಅಂತ ಜಗ್ಗೇಶ್ ಪ್ರಶ್ನೆ ಮಾಡಿದ್ರು.
ಚಿತ್ರರಂಗದವರೇ ಕೋಮಲ್ ಮೇಲೆ ಹಲ್ಲೆ ಮಾಡಿಸಿದ್ರಾ..?
ವಿನಾಃ ಕಾರಣ ಕೋಮಲ್ ಮೇಲೆ ಹಲ್ಲೆ ಮಾಡಿದ್ದು ಯಾರು ಅನ್ನೋದರ ಬಗ್ಗೆ ಹಲವು ಸಂಶಯಗಳು ಕಾಡ್ತಿವೆ. ನಟ ಜಗ್ಗೇಶ್ ಮಾತನ್ನು ಗಮನಿಸಿದ್ರೆ, ಚಿತ್ರರಂಗದವರೇ ಈ ಕೃತ್ಯ ಮಾಡಿಸಿದ್ರಾ ಎನ್ನಲಾಗ್ತಿದೆ. ನಂಗೆ ಗೊತ್ತಾಗುತ್ತೆ ಯಾರು ಏನ್ ಮಾಡ್ತಿದ್ದಾರೆ ಅಂತ ಜಗ್ಗೇಶ್ ಹೇಳಿದ್ದು ಯಾಕೆ ಅನ್ನೋ ಪ್ರಶ್ನೆ ಕಾಡುತ್ತೆ. ಇದರ ಜೊತೆ ಇಂಡಸ್ಟ್ರಿಯವರು ಮಾಡಿದ್ರೆ ಖಂಡಿತಾ ನಾನು ಅವರನ್ನ ಬಿಡಲ್ಲ. ನಾನೂ ಕೂಡ ಮೂವತ್ತು ವರ್ಷದಿಂದ ಸಿನಿಮಾದಲ್ಲೇ ಇದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?