Featured
ತುಂಗೆ ಕೋಪಕ್ಕೆ ಶಿವಮೊಗ್ಗೆ ತತ್ತರ : 30 ವರ್ಷಗಳಲ್ಲೇ ಭೀಕರ ಮಳೆ-ಪ್ರವಾಹ
ಶಿವಮೊಗ್ಗ : ಮಲೆನಾಡಿನಲ್ಲಿ ಮಳೆ ಅಬ್ಬರ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಭಾರೀ ಮಳೆಯಿಂದ ತುಂಗೆ ನದಿ ತುಂಬಿ ಹರಿಯುತ್ತಿದ್ದೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಅದರಲ್ಲೂ ಶಿವಮೊಗ್ಗ ನಗರಕ್ಕೇ ತುಂಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶಿವಮೊಗ್ಗ ನಗರದ ವಿದ್ಯಾನಗರ, ವಂದನಾ ಟಾಕೀಸ್, ಮಂಜುನಾಥ್ ಟಾಕೀಸ್, ಸಿದ್ದಯ್ಯ ರಸ್ತೆಯ ಕುಂಬಾರಗುಂಡಿ, ಜಗದಾಂಬಾ ಏರಿಯಾ, ನ್ಯೂ ಮಂಡ್ಲಿ, ಜೆಪಿಎನ್ ಕಾಲೇಜ್ ಭಾಗ ಸೇರಿದಂತೆ ಹಲವು ಭಾಗಗಳು ಜಲಾವೃತವಾಗಿವೆ.
ಇಷ್ಟೇ ಅಲ್ಲದೆ, ಅಶ್ವಥನಗರ, ಕೃಷಿ ನಗರ, ಡಾಲಸರ್್ ಕಾಲೋನಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿರೋ ಹಿನ್ನೆಲೆಯಲ್ಲಿ ಪ್ರವಾಹ ಸಂತ್ರಸ್ತರ ಕೇಂದ್ರ ಸ್ಥಾಪನೆಯಾಗಿದ್ದು, ಜನರನ್ನ ಸ್ಥಳಾಂತರ ಮಾಡಲಾಗಿದೆ. ಬಹುತೇಕ ಹಳೇ ಶಿವಮೊಗ್ಗೆ ಪೂತರ್ಿ ನೀರಿನಿಂದ ಆವೃತ್ತವಾಗಿದೆ.
ತುಂಗಾ ನದಿಯ ಹಳೇ ಸೇತುವೆ ಬಿರುಕು..!
ಮಳೆಯ ಅಬ್ಬರಕ್ಕೆ ತುಂಗಾ ನದಿಗೆ ಶಿವಮೊಗ್ಗೆಯಲ್ಲಿ ಕಟ್ಟಲಾಗಿದ್ದ ಹಳೇ ಸೇತುವೆ ಬಿರುಕು ಬಿಟ್ಟಿದೆ. ಭದ್ರಾವತಿ-ಶಿವಮೊಗ್ಗ ಸಂಪಕರ್ಿಸುವ ಈ ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಅಲ್ಲದೆ, ಪ್ರವಾಹ ಸ್ಥಿತಿ ತಗ್ಗುವವರೆಗೆ ಹೊಸ ಸೇತುವೆ ಮೇಲೂ ವಾಹನಗಳ ಸಂಚಾರವನ್ನ ಕೆಲ ಕಾಲ ಸ್ಥಗಿತ ಮಾಡಲಾಗಿತ್ತು.
ತುಂಗೆ ಅಬ್ಬರಕ್ಕೆ ಶಿವಮೊಗ್ಗ ನಗರವಷ್ಟೇ ಅಲ್ಲದೆ, ತುಂಗಾ ನದಿ ಪಾತ್ರದಲ್ಲಿರೋ ಗ್ರಾಮಗಳಿಗೂ ನೀರು ನುಗ್ಗಿದ್ದು, ಜನ ಪರದಾಡುವಂತಾಗಿದೆ. ಸ್ಥಳೀಯರು ಹೇಳುವ ಪ್ರಕಾರ 1982ರಲ್ಲಿ ಈ ಮಟ್ಟಕ್ಕೆ ಮಳೆಯಾಗಿ, ಪ್ರವಾಹ ಉಂಟಾಗಿತ್ತು. ಅಂದ್ರೆ, ಸುಮಾರು 37 ವರ್ಷಗಳ ಬಳಿಕ ಇಷ್ಟೊಂದು ಮಳೆ ಆಗ್ತಿದ್ದು, ಭೀಕರ ಪ್ರವಾಹ ತಲೆದೋರಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?