Featured
ರಗಡ್ ರಫೇಲ್ ಎಂಟ್ರಿಗೆ ಅಂಬಾಲ ರೆಡಿ- ಆಗಸದಲ್ಲೇ ಇಂಧನ ತುಂಬಿಸುವ ಚಿತ್ರ ವೈರಲ್..!

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ರಫೇಲ್ ಯುದ್ಧವಿಮಾನ ಬುಧವಾರ ಭಾರತದ ವಾಯುಸೇನೆ ಸೇರಿಕೊಳ್ಳಲಿದೆ. ರಫೇಲ್ ಬರ್ತಾ ಇರೋದು ವೈರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ ಅನ್ನುವುದು ಒಂದುಕಡೆಯಾದ್ರೆ, ಆಗಸದಲ್ಲೇ ರಫೇಲ್ಗೆ ಇಂಧನ ತುಂಬಿಸುವ ದೃಶ್ಯ ಎಲ್ಲಾಕಡೆಯೂ ವೈರಲ್ ಆಗಿದೆ. ಫ್ರಾನ್ಸ್ನ ಡಸ್ಸಾಲ್ಟ್ ಏವಿಯೇಶನ್ ಸಂಸ್ಥೆ ನಿರ್ಮಿಸಿರುವ ಅತ್ಯಾಧುನಿಕ ಯುದ್ಧ ವಿಮಾನದ ಮೊದಲ ಕಂತು ಜುಲೈ 29ರಂದು ಭಾರತಕ್ಕೆ ಬಂದು ಇಳಿಯಲಿದೆ.
ಫ್ರಾನ್ಸ್ನ ಮೆರಿಗ್ನಾಕ್ ವಾಯುಸೇನಾ ನೆಲೆಯಿಂದ ಹೊರಟ ಐದು ರಫೇಲ್ ಯುದ್ಧ ವಿಮಾನಗಳು ಸದ್ಯ ಯುಎಇಯ ಅಲ್ ದಫ್ರಾ ವಾಯು ನೆಲೆಯಲ್ಲಿ ತಂಗಿವೆ. ಬುಧವಾರ ಭಾರತೀಯ ವಾಯುಸೇನೆಯ ಅಂಬಾಲಾ ವಾಯು ನೆಲೆಗೆ ಬಂದು ತಲುಪಲಿವೆ. ರಫೇಲ್ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಯುದ್ಧ ವಿಮಾನ. ಫ್ರಾನ್ಸ್ನಿಂದ ಹೊರಟಿರುವ ರಫೇಲ್ ಯುದ್ಧ ವಿಮಾನವೊಂದಕ್ಕೆ ಆಗಸದಲ್ಲೇ ಇಂಧನ ತುಂಬಿಸಲಾಗಿದೆ. ಫ್ರಾನ್ಸ್ನಿಂದ ಭಾರತಕ್ಕೆ ಬರುತ್ತಿರುವ ಐದು ರಫೇಲ್ ಯುದ್ಧ ವಿಮಾನಗಳ ಪೈಕಿ ಒಂದು ವಿಮಾನಕ್ಕೆ ಆಗಸದಲ್ಲದೇ ಇಂಧನ ಪೂರೈಸಲಾಗಿದೆ. ಈ ಚಿತ್ರಗಳು ವೈರಲ್ ಆಗಿವೆ.
Rafale fighter jets being refuelled mid-air on their way to Ambala from France.
Appreciate the support provided by French Air Force for our Rafale journey back home, says Indian Air Force pic.twitter.com/CrqXPdgJwP— ANI (@ANI) July 28, 2020
ರಫೇಲ್ ಯುದ್ಧ ವಿಮಾನಗಳು ಆಗಸದಲ್ಲಿ ಹಾರಾಟ ನಡೆಸುತ್ತಿರುವಾಗಲೇ ಅವುಗಳಿಗೆ ಇಂಧನ ಪೂರೈಕೆ ಮಾಡಬಹುದಾಗಿದೆ. ಹೀಗಾಗಿ ಯುದ್ಧ ವಿಮಾನವೊಂದಕ್ಕೆ ಇಂಧನ ತುಂಬಿಸುವ ಕೆಲಸ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ರಫೇಲ್ ಯುದ್ಧ ವಿಮಾನಗಳಿಗೆ ಫ್ರಾನ್ಸ್ ವಾಯುಸೇನೆಯ ವಿಮಾನಗಳು ಸಾಥ್ ನೀಡಿದ್ದು, ಇಂಧನ ತುಂಬಿಸುವಲ್ಲಿಯೂ ಫ್ರಾನ್ಸ್ ವಾಯಪಡೆ ನೆರವಾಗಿದೆ ಎನ್ನಲಾಗಿದೆ.
You may like
ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗರನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್..?
ರಾಫೆಲ್ ಸೇರ್ಪಡೆಯಿಂದ ಕಠಿಣ ಸಂದೇಶ ರವಾನೆ: ರಕ್ಷಣ ಸಚಿವ ರಾಜನಾಥ್ ಸಿಂಗ್
ಭಾರತೀಯ ವಾಯುಪಡೆಗೆ ರಗಡ್ ರಾಫೆಲ್ ಅಧಿಕೃತ ಸೇರ್ಪಡೆ:ರಾಫೆಲ್ ವಾಯು ವಿಮಾನಗಳಿಗೆ ವಾಟರ್ ಸೆಲ್ಯೂಟ್ ಸ್ವಾಗತ
ಭಾರತದಲ್ಲಿ 34 ಲಕ್ಷ ದಾಟಿದ ಕೊರೊನಾ ಕೇಸ್: 24 ಗಂಟೆಯಲ್ಲಿ 1,021 ಸಾವು
ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಬೇಕು- ಯುಜಿಸಿ ಸುತ್ತೋಲೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್
ಮೈದಾನಕ್ಕಿಳಿದ ರೆಡ್ ಆರ್ಮಿ: ಬ್ಲೂಪ್ರಿಂಟ್ ರೆಡಿ ಮಾಡಿದ ತ್ರಿಮೂರ್ತಿಗಳು…!