Featured
PF ಖಾತೆಯಲ್ಲೂ ಹಣ ಖಾಲಿ – ಎಲ್ಲಕ್ಕೂ ಕೊರೊನಾ ಕಾರಣ..! – 30 ಸಾವಿರ ಕೋಟಿ ಏನಾಯ್ತು ಗೊತ್ತಾ?

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :

ಕೊರೊನಾ ಅನ್ನೋ ಜಾಗತಿಕ ಸಮಸ್ಯೆ, ಆರ್ಥಿಕ ಹಿನ್ನಡೆಗೆ ಸಾಕ್ಷಿಯಾಗಿದೆ. ಅದ್ರಲ್ಲೂ ಭಾರತವಂತೂ ಕೊರೊನಾದಿಂದಾಗಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದೆ. ಕೆಲಸ, ಹಣವಿಲ್ಲದೇ ಜನ ಪರದಾಡುತ್ತಿದ್ದಾರೆ. ಕೊರೊನಾದಿಂದಾಗಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾನೆ ಹದಗೆಟ್ಟಿದೆ.
ಇದರಿಂದಾಗಿ ಸಾವಿರಾರು ಕಂಪನಿಗಳು ಮುಚ್ಚುವ ಸ್ಥಿತಿಗೆ ಬಂದುನಿಂತಿವೆ. ಹೀಗಾಗಿ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಜೊತೆಗೆ, ಸಾಕಷ್ಟು ನಷ್ಟದಲ್ಲಿರುವ ಕೆಲವು ಕಂಪನಿಗಳು ತಮ್ಮ ಕೆಲಸಗಾರರಿಗೆ ಅರ್ಧ ವೇತನ ನೀಡುತ್ತಿವೆ. ಇದರಿಂದಾಗಿ ಕಾರ್ಮಿಕರು ತಮ್ಮ ಭವಿಷ್ಯ ನಿಧಿ ಖಾತೆಯಿಂದ ಹಣವನ್ನ ಹಿಂಪಡೆಯಲು ಮುಂದಾಗಿದ್ದು, ಇದರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ದೇಶದಲ್ಲಿ 6 ಕೋಟಿ ನೌಕರರ ಪಿಎಫ್ ಖಾತೆ ಇದ್ದು, ಅದರಲ್ಲಿ ಏಪ್ರಿಲ್ನಿಂದ ಜುಲೈವರೆಗೂ ಸುಮಾರು 80 ಲಕ್ಷ ಉದ್ಯೋಗಿಗಳು ತಾವು ಕೂಡಿಟ್ಟಿದ್ದ ಸಮಾರು 30 ಸಾವಿರ ಕೋಟಿ ಹಣವನ್ನ ಹಿಂತೆಗೆದುಕೊಂಡಿದ್ದಾರೆ. ಕೊರೊನಾ ಸೋಂಕಿನ ಕಾರಣ ನೀಡಿ 30 ಲಕ್ಷ ಉದ್ಯೋಗಿಗಳು 8,000 ಕೋಟಿ ಹಣವನ್ನು ಭವಿಷ್ಯ ನಿಧಿಯಿಂದ ಹಿಂಪಡೆದಿದ್ದರೆ, ವೈದ್ಯಕೀಯ ಕಾರಣ ನೀಡಿ 50 ಲಕ್ಷ ಉದ್ಯೋಗಿಗಳು 22,000 ಕೋಟಿ ಹಣವನ್ನ ಹಿಂತೆಗೆದಿದ್ದಾರೆ ಎಂದು ವರದಿಯಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?