Featured
ದಪ್ಪಗಿದ್ದೀರಾ ಹುಷಾರ್..! ಕೊರೊನಾ ನಿಮ್ಮನ್ನ ಸುಮ್ಮನೆ ಬಿಡೋಲ್ಲ..!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಕೊರೊನಾ ನಿಜಕ್ಕೂ ಭಯಾನಕ ಖಾಯಿಲೇನಾ? ಇಲ್ಲ ಹೀಗೆ ಬಂದು ಹಾಗೆ ಹೋಗೋ ಖಾಯಿಲೇನಾ ಅನ್ನೋ ಚರ್ಚೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಲೇ ಇದೆ. ಆದ್ರೆ, ತಜ್ಞರು ಮಾತ್ರ ತಮ್ಮ ತಮ್ಮ ಅಭಿಪ್ರಾಯವನ್ನ ಹೇಳುತ್ತಲೇ ಇದ್ದಾರೆ. ಈ ಬಗ್ಗೆ ವಿಶ್ವಾದ್ಯಂತ ಸಾಕಷ್ಟು ಅಧ್ಯಯನಗಳು ನಡೆಯುತ್ತಲೇ ಇವೆ. ಇಲ್ಲೀವರೆಗೂ ಅಧಿಕೃತವಾಗಿ ಯಾವುದೇ ಔಷಧಿಯನ್ನ ಕೂಡ ಬಿಡುಗಡೆ ಮಾಡಲಾಗಿಲ್ಲ.
ಈ ಮಧ್ಯೆ ಬೆಚ್ಚಿಬೀಳೋ ವರದಿಯೊಂದು ಹೊರಬಿದ್ದಿದೆ. ತಜ್ಞರು ನೀಡಿರೋ ಆ ಬೆಚ್ಚಿಬೀಳಿಸೋ ಮಾಹಿತಿ ಬಗ್ಗೆ ಪ್ರತಿಯೊಬ್ಬರು ಗಮನಹರಿಸಲೇಬೇಕಿದೆ. ಅದ್ರಲ್ಲೂ ದಪ್ಪಗಿರೋರು ಇದನ್ನ ಗಂಭೀರವಾಗಿ ಪರಿಗಣಿಸಲೇಬೇಕು.
ಅಧಿಕ ತೂಕ ಮತ್ತು ಅತಿಯಾದ ಬೊಜ್ಜಿರುವ ವ್ಯಕ್ತಿಗಳಿಗೆ ಈ ವೈರಸ್‌ನಿಂದ ಅಪಾಯ ಹೆಚ್ಚೆಂದು ಈ ಹೊಸ ಅಧ್ಯಯನ ತಿಳಿಸಿದೆ. ಬ್ರಿಟಿಷ್ ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ಸಂಸ್ಥೆಯ ಪಬ್ಲಿಕ್ ಹೆಲ್ತ್ ವಿಭಾಗ ಈ ಅಧ್ಯಯನ ವರದಿಯನ್ನ ಬಿಡುಗಡೆ ಮಾಡಿದೆ.
ಅಧಿಕ ತೂಕ ಇರುವವರಲ್ಲಿ ಹೆಚ್ಚಿನವರಿಗೆ ಐಸಿಯು ಬೇಕು ಅಂತ ವರದಿಯಲ್ಲಿ ಹೇಳಲಾಗಿದೆ. ತೂಕ ಹೆಚ್ಚಾಗಿದ್ದರೇ ಕೊರೊನಾ ವಿರುದ್ಧದ ಹೋರಾಟ ಕಷ್ಟ. 94 ಸೆಂಟಿ ಮೀಟರ್‌ಗೂ ಹೆಚ್ಚು ಸೊಂಟದ ಸುತ್ತಳತೆ ಇರುವ ಪುರುಷರು ಹಾಗೂ 80 ಸೆಂಟಿ ಮೀಟರ್‌ಗೂ ಹೆಚ್ಚು ಸುತ್ತಳತೆ ಇರುವ ಮಹಿಳೆಯರಿಗೆ ಕೊರೊನಾ ಸಮಸ್ಯೆ ಎದುರಾಗಬಹುದು. ಇನ್ನೂ ಇವರಲ್ಲಿ ಉಸಿರಾಟದ ಸಮಸ್ಯೆ ಎದುರಾದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಿನಲ್ಲಿ ದಪ್ಪಗೆ ಇರೋರಿಗೆ ಆರೋಗ್ಯ ಸಮಸ್ಯೆ ಬರೋದು ಸಹಜ. ಅಂತದ್ರಲ್ಲಿ ಕೊರೊನಾದಂತಹ ಮಹಾಮಾರಿಯಿಂದ ದೂರವಿರಬೇಕು ಅಂದ್ರೆ, ತಮ್ಮ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಲೇಬೇಕು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?