Featured
ತುಮಕೂರಿನಲ್ಲಿ ಕೊರೊನಾಗೆ ಮಹಿಳೆ ಬಲಿ : ಜಿಲ್ಲೆಯಲ್ಲಿ 132 ಮಂದಿ ಹೊಸ ಸೋಂಕಿತರು
ರೈಸಿಂಗ್ ಕನ್ನಡ :
ತುಮಕೂರು:
ಜಿಲ್ಲೆಯಲ್ಲಿ ಇಂದು ಕೂಡ 132 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಡಪಟ್ಟಿದ್ದು, ಸತತ ಎರಡನೇ ದಿನವೂ ಶತಕ ಬಾರಿಸಿದೆ.
ಸೊಂಕಿತರ ಸಂಖ್ಯೆ 1346 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕುವಾರು ಸೋಂಕಿತರ ವಿವರ:
ತುಮಕೂರು 56, ಚಿಕ್ಕನಾಯಕನಹಳ್ಳಿ 4, ಪಾವಗಡ 5, ತಿಪಟೂರು 9, ಮಧುಗಿರಿ 8, ಕೊರಟಗೆರೆ 4, ಕುಣಿಗಲ್ 22, ತುರುವೇಕೆರೆ 13, ಶಿರಾ 5, ಗುಬ್ಬಿ 6, ಸೊಂಕಿತರು ಪತ್ತೆಯಾಗಿದ್ದಾರೆ.
ಇಂದು ಕಂಡು ಬಂದಿರುವ ಸೊಂಕಿತರಲ್ಲಿ 5 ವರ್ಷದ ಒಳಗಿನ 2 ಗಂಡು ಮಕ್ಕಳು ಹಾಗೂ ಕುಣಿಗಲ್ ನಲ್ಲಿ ಓರ್ವ ಗರ್ಭಿಣಿಗೆ ಕೊರೊನಾ ಸೊಂಕು ತಗುಲಿದೆ. ತಿಪಟೂರಿನಲ್ಲಿ ಪೊಲೀಸ್ ಒಬ್ಬರಿಗೆ ಕೊರೊನಾ ಸೊಂಕು ದೃಡಪಟ್ಟಿದೆ. 15 ಜನ ವೃದ್ದರು ಸೇರಿದಂತೆ 85 ಜನ ಪುರುಷರು ಹಾಗೂ 47 ಜನ ಮಹಿಳೆಯರಿಗೆ ಇಂದು ಕೊರೊನಾ ಸೊಂಕು ದೃಡಪಟ್ಟಿದೆ.
ಜಿಲ್ಲೆಯಲ್ಲಿ ಇಂದು 33 ಜನ ಸೋಂಕಿತರು ಗುಣಮುಖರಾಗಿ ಇಂದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಈವರೆಗೆ 636 ಜನರು ಕೊವಿಡ್ ನಿಂದ ಮುಕ್ತಿ ಹೊಂದಿ ಮನೆ ಸೇರಿದ್ದಾರೆ. ಉಳಿದ 667 ಮಂದಿ ಸಕ್ರಿಯ ಸೊಂಕಿತರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಕೊರೊನಾ ಸೋಂಕಿತ ಮಹಿಳೆ ಸಾವು:
ಜಿಲ್ಲೆಯಲ್ಲಿ 60 ವರ್ಷದ ವೃದ್ದ ಮಹಿಳೆಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ತುಮಕೂರು ನಗರದ ಪಾಖಿರ್ ಪಾಳ್ಯದ ಮಹಿಳೆ ಜ್ವರ ಹಾಗೂ ನ್ಯೂಮೋನಿಯಾ ದಿಂದ ಬಳಲುತ್ತಿದ್ದರು. 24 ರಂದು ಜಿಲ್ಲಾಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿಯನ್ನ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. 25 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 43 ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಇನ್ನೂ ಸೊಂಕಿತರ ಪ್ರಥಮ ಹಾಗೂ ದ್ವಿತಿಯ ಸಂಪರ್ಕದಲ್ಲಿದ್ದ 3,088 ಜನರನ್ನ ನಿಗಾವಣೆಯಲ್ಲಿಡಲಾಗಿದ್ದು ಸೊಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?