Featured
ಮಂಗಳೂರು ಶೈಲಿಯ ಚಿಕನ್ ಸುಕ್ಕಾ ಮಾಡುವುದು ಹೇಗೆ..?
![](https://risingkannada.com/wp-content/uploads/2019/08/chicken-sukka.jpg)
ಚಿಕನ್ ಪ್ರಿಯರಿಗೆ ಸುಕ್ಕ ಅಂದ್ರೆ ಸಖತ್ ಇಷ್ಟ. ಅದರಲ್ಲೂ ಮಂಗಳೂರು ಶೈಲಿಯ ಚಿಕನ್ ಸುಕ್ಕಾ ಅಂತೂ ಸಖತ್ ಇಷ್ಟ ಪಡ್ತಾರೆ. ನಾವ್ ಇವತ್ತು ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋದು ಹೇಗೆ ಅನ್ನೋದನ್ನ ತಿಳಿಸಿಕೊಡ್ತೀವಿ.
ಚಿಕನ್ ಸುಕ್ಕಾಗೆ ಬೇಕಾಗುವ ಸಾಮಗ್ರಿಗಳು
ಕೋಳಿಮಾಂಸ – 1 ಕೆ.ಜಿ, ಈರುಳ್ಳಿ – 1, ಏಲಕ್ಕಿ – 2,
ಉಪ್ಪು -1 ಟೇಬಲ್ ಸ್ಪೂನ್, ಎಣ್ಣೆ -1 ಟೇಬಲ್ ಸ್ಪೂನ್ , ತೆಂಗಿನಕಾಯಿ -1 ದೊಡ್ಡದು
ಮಸಾಲೆ ಮಾಡಿಕೊಳ್ಳುವ ವಿಧಾನ
ದನಿಯಾ – 2 ಚಮಚ, ಜೀರಿಗೆ – ¼ ಚಮಚ, ಸಾಸಿವೆ – ¼ ಚಮಚ, ಕಾಳುಮೆಣಸು – ¼ ಚಮಚ, ಲವಂಗ – 4, ದಾಲ್ಚಿನಿ -1, ಬ್ಯಾಡಗಿ ಮೆಣಸು -10, ಕಾಶ್ಮೀರಿ ಮೆಣಸು – 6, ಅರಿಶಿಣ ಪುಡಿ -1/4ಚಮಚ, ಈರುಳ್ಳಿ -1, ಬೆಳ್ಳುಳ್ಳಿ – 4 ರಿಂದ 5 ಎಸಳು, ಹುಣಸೆಹಣ್ಣು, ಉಪ್ಪು, ಶುಂಠಿ – ರುಚಿಗೆ ತಕ್ಕಷ್ಟು
ಚಿಕನ್ ಸುಕ್ಕಾ ತಯಾರಿಸುವ ವಿಧಾನ
ಮೊದಲು ಎರಡು ಬಗೆಯ ಮೆಣಸನ್ನು ಹುರಿದುಕೊಳ್ಳಿ. ನಂತರ ಅದೇ ಬಾಣಲಿಯಲ್ಲಿ ದನಿಯಾ, ಜೀರಿಗೆ, ಸಾಸಿವೆ, ಕಾಳುಮೆಣಸು, ಏಲಕ್ಕಿ, ದಾಲ್ಚಿನಿ, ಈರುಳ್ಳಿ, ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಹಾಕಿ ಉರಿದಿಕೊಳ್ಳಿ. ಈ ಎಲ್ಲಾ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಜೊತೆಗೆ ಅರಿಶಿಣ ಪುಡಿ ಹಾಗೂ ಉಪ್ಪು, ಹುಣಸೆಹಣ್ಣು ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ನಂತರ ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಉರಿದುಕೊಳ್ಳಿ.
ಇದಾದ್ಮೇಲೆ ಅದಕ್ಕೆ ಕೋಳಿಮಾಂಸ, ಏಲಕ್ಕಿ, ಉಪ್ಪನ್ನು ಸೇರಿಸಿ 10 ನಿಮಿಷ ಬೇಯಿಸಿಕೊಳ್ಳಿ. ಬಳಿಕ ಅದಕ್ಕೆ ರುಬ್ಬಿಕೊಂಡ ಮಿಶ್ರಣ ಸೇರಿಸಿ ಮತ್ತೆ ಸ್ವಲ್ಪ ಬೇಯಿಸಿ. ನಂತರ ಆ ಮಿಶ್ರಣಕ್ಕೆ ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇಷ್ಟೆಲ್ಲಾ ಆದ್ಮೇಲೆ ಮತ್ತೆ 10 ನಿಮಿಷ ಚೆನ್ನಾಗಿ ಕುದಿಸಿ . ಆಗ ನಿಮ್ಮ ಮಂಗಳೂರು ಶೈಲಿಯ ಚಿಕನ್ ಸುಕ್ಕಾ ರೆಡಿ..
ವೀಕೆಂಡ್ನಲ್ಲಿ ಒಮ್ಮೆ ಟ್ರೈ ಮಾಡಿ.. ಟೇಸ್ಟ್ ಮಾಡಿ.. ಎಂಜಾಯ್ ಮಾಡಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?