Featured
ಚೀನಾ-ಅಮೆರಿಕ ಜಗಳ, ಭಾರತಕ್ಕೆ ಲಾಭ – ರಘುರಾಮ್ ರಾಜನ್..!
![](https://risingkannada.com/wp-content/uploads/2020/07/raghu.jpg)
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಚೀನಾ ಮತ್ತು ಅಮೆರಿಕ ನಡುವಿನ ಕಿತ್ತಾಟದಿಂದ ಭಾರತಕ್ಕೆ ಲಾಭವಾಗಲಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಇದ್ರೊಂದಿಗೆ, ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬ ಗಾದೆಮಾತು ನಿಜವಾದಂತಾಗಲಿದೆ.
ಅಮೆರಿಕದ ಪಾನ್ ಐಐಟಿ ಆಯೋಜಿಸಿದ್ದ ವರ್ಚುವಲ್ ಕಾನ್ಫರೆನ್ಸ್‌ನಲ್ಲಿ ‘ಕೊರೊನೋತ್ತರ ಕಾಲದಲ್ಲಿ ಜಾಗತಿಕ ಆರ್ಥಿಕತೆ’ ಕುರಿತು ರಘುರಾಮ್ ರಾಜನ್ ಮಾತನಾಡಿದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದೆ. ಅಮೆರಿಕ ಮತ್ತು ಚೀನಾ ನಡುವಿನ ಬಿಕ್ಕಟ್ಟು ದಿನೇದಿನೆ ಬಿಗಾಡಾಯಿಸುತ್ತಲೇ ಇದೆ. ಇದರಿಂದ ಜಾಗತಿಕ ಮಾರುಕಟ್ಟೆಯೇ ದುರ್ಬಲಗೊಳ್ಳುತ್ತಿದೆ.
ಪರಿಣಾಮ ಭಾರತ ಮತ್ತು ಬ್ರೆಜಿಲ್‌ನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನುಕೂಲವಾಗಲಿದೆ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ. ಅಲ್ಲದೆ, ಭಾರತದ ಆರ್ಥಿಕತೆಯಲ್ಲಿ ಗಂಭೀರವಾಗಿ ನಷ್ಟ ಅನುಭವಿಸಿರುವ ಕಂಪನಿಗಳೂ ಇವೆ. ಕೊರೊನೋತ್ತರ ಸಂದರ್ಭದಲ್ಲಿ ಇಂತಹ ಕಂಪನಿಗಳ ರಿಪೇರಿ ಕೆಲಸ ಆಗಬೇಕಿದೆ ಎಂದು ತಿಳಿಸಿದ್ದಾರೆ.
ಅಮೆರಿಕದಲ್ಲಿ ಹಲವಾರು ಕಂಪನಿಗಳು ಮುಂಬರುವ ದಿನಗಳಲ್ಲಿ ದಿವಾಳಿಯಾಗುವ ಸಾಧ್ಯತೆಗಳಿವೆ. ಇದು ಯೂರೋಪ್‌ನಲ್ಲೂ ಸಂಭವಿಸಬಹು. ಈ ನಿಟ್ಟಿನಲ್ಲಿ ಆರ್ಥಿಕತೆಯನ್ನು ಬಲಪಡಿಸಲು ರಿಪೇರಿ ಕಾರ್ಯ ಮಾಡಬೇಕಿದೆ. ಸಂಪನ್ಮೂಲಗಳ ಹಂಚಿಕೆ ಮಾಡಬೇಕಿದೆ. ಬಂಡವಾಳದ ಸ್ವರೂಪವನ್ನೇ ಬದಲಿಸಬೇಕಿದೆ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?