Featured
ಸ್ಪೀಕರ್ ಪಕ್ಷತೀತರಾಗಿರಬೇಕು : ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯದ ಧ್ವನಿಯನ್ನ ಹತ್ತಿಕಲು ಸಾಧ್ಯವಿಲ್ಲ: ಸುಪ್ರೀಮ್ ಕೋರ್ಟ್
![](https://risingkannada.com/wp-content/uploads/2020/07/supreme-court_reuters.jpg)
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ಭಿನ್ನಾಭಿಪ್ರಾಯದ ಧ್ವನಿಯನ್ನ ಹತ್ತಿಕಲು ಪ್ರಜಾಪ್ರಭುತ್ವದಲ್ಲಿ ಜಾಗವಿಲ್ಲ. ಸ್ಪೀಕರ್ ಪಕ್ಷತೀತವಾಗಿರಬೇಕು. ನೀವು ಯಾಕೆ ಈ ಪ್ರಕರಣವನ್ನ ನ್ಯಾಯಾಲಯಕ್ಕೆ ತಂದಿದ್ದೀರಿ ಎಂದು ಸುಪ್ರೀಮ್ ಕೋರ್ಟ್ ರಾಜಸ್ಥಾನ ಸ್ಪೀಕರ್ ಸಿ.ಪಿ.ಜೋಶಿ ಅವರನ್ನ ಪ್ರಶ್ನೆ ಮಾಡಿದೆ.
ಪಕ್ಷದ ವಿರುದ್ಧ ಬಂಡಾಯವೆದ್ದ ಸಚಿನ್ ಪೈಲೆಟ್ ಮತ್ತು 18 ಶಾಸಕರನ್ನ ಸ್ಪೀಕರ್ ಅನರ್ಹಗೊಳಿಸಿದ್ದರು. ತಮ್ಮ ಅನರ್ಹತೆ ಪ್ರಶ್ನಿಸಿ ಸಚಿನ್ ಪೈಲೆಟ್ ಮತ್ತು ಇತರೆ ಶಾಸಕರು ರಾಜಸ್ಥಾನ ಹೈ ಕೋರ್ಟ್ ಮೊರೆ ಹೋಗಿದ್ದರು.
![](https://risingkannada.com/wp-content/uploads/2020/07/c.p-joshi-speaker-1-1024x639.jpg)
ಇದನ್ನ ಪ್ರಶ್ನಸಿದ ಸ್ಪೀಕರ್ ಜೋಷಿ, ಅನರ್ಹತೆ ರಾಜಸ್ಥಾನ ಹೈಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಮ್ ಮೋರೆ ಹೋಗಿದ್ದರು. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ಘನ ನ್ಯಾಯಾಲಯ, ಭಿನ್ನಾಭಿಪ್ರಾಯ ತಡೆಯಲು ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ ಎಂದು ಹೇಳಿ ರಾಜಸ್ಥಾನ ಹೈಕೋರ್ಟ್ ವಿಚಾರಣೆಯನ್ನ ತಡೆಯಲು ನಿರಾಕರಿಸಿತು.
ತುರ್ತು ವಿಚಾರಣೆಯನ್ನ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ರಾಜಕೀಯ ಬೆಳವಣಿಗೆ ಏನೆ ನಡೆದರೂ ಸಭಾಧ್ಯಕ್ಷರು ತಟಸ್ಥರಾಗಿರಬೇಕು. ಈ ವಿಚಾರವನ್ನ ನ್ಯಾಯಾಲಯಕ್ಕೆ ತಂದಿದ್ದೀರಿ ? ಇನ್ನು ಒಂದು ದಿನ ಕಳೆದರೆ ತೀರ್ಪು ಬರುತ್ತದಲ್ಲವೇ ಎಂದು ಪ್ರಶ್ನೆ ಮಾಡಿ ಪ್ರಕರಣವನ್ನ ಸೋಮವಾರಕ್ಕೆ ಮುಂದೂಡಿತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?