Featured
ಒಂದೇ ದಿನ ದಾಖಲೆ 48,294 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 12ಲಕ್ಷಕ್ಕೆ ಏರಿಕೆ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 48,294 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಸೋಂಕಿಗೆ ತುತ್ತಾದವರ ಸಂಖ್ಯೆ 12 ಲಕ್ಷ ದಾಟಿದೆ. ಒಂದೇ ದಿನದಲ್ಲಿ 699 ಮಂದಿ ಸಾವನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 29,396ಕ್ಕೆ ತಲುಪಿದೆ.
ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಬುಧವಾರ ದಾಖಲೆ ಪ್ರಮಾಣದಲ್ಲಿ ಸೋಂಕು ಹೆಚ್ಚಾಗಿದೆ. ಇದುವರೆಗೂ 7,79,057 ಮಂದಿ ಬಿಡುಗಡೆಯಾಗಿದ್ದಾರೆ.
ಅತಿ ಹೆಚ್ಚು ಕೊರೊನಾಕ್ಕೆ ತುತ್ತಾಗಿರುವ ಮಹಾರಾಷ್ಟ್ರದಲ್ಲಿ 10,576 ಪ್ರಕರಣಗಳು ಪತ್ತೆಯಾಗಿ 280 ಜನ ಉಸಿರು ಬಿಟ್ಟಿದ್ದಾರೆ. ರಾಜ್ಯವೊಂದರಲ್ಲಿ ಒಂದೇ ದಿನ ಹತ್ತು ಸಾವಿರ ಸೋಂಕು ತಗಲಿದ್ದು ಇದೇ ಮೊದಲು.ಕರ್ನಾಟಕದಲ್ಲಿ 3376607 ಪ್ರಕರಣಗಳು ದಾಖಲಾಗಿವೆ.
ವಿಪರ್ಯಾಸ ಎಂದರೆ ಭಾರತದ 5 ರಾಜ್ಯಗಳಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕು ಹರಡಿದೆ. ಒಂದೇ ದಿನ ಆಂಧ್ರದಲ್ಲಿ 6045 ಸೋಂಕು ತಗುಲಿದ್ದು 65 ಮಂದಿ ಸಾವನಪ್ಪಿದ್ದಾರೆ. ತಮಿಳುನಾಡಲ್ಲಿ 5845 ಮಂದಿಗೆ ಸೋಂಕಿಗೆ ಗುರಿಯಾಗಿದ್ದು 74 ಮಂದಿ ಸಾವನಪ್ಪಿದ್ದಾರೆ. ಕರ್ನಾಟಕದಲ್ಲಿ 4764 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?