Featured
ಕಳೆದ 24 ಗಂಟೆಯಲ್ಲಿ 37,724 ಕೊರೊನಾ ಸೋಂಕಿತರು: 648 ಮಂದಿ ಬಲಿ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :

ಕಳೆದ ಒಂದು ದಿನದಲ್ಲಿ ದೇಶಾದ್ಯಂತ 37,724 ಪ್ರಕರಣಗಳು ದಾಖಲಾಗಿದ್ದು ಕೊರೊನಾ ಸೋಂಕಿತರ ಸಂಖ್ಯೆ 11,92,915ಕ್ಕೆ ಏರಿದೆ. ಏಳನೆ ಬಾರಿಗೆ 30 ಸಾವಿರಕ್ಕಿಂತ ಹೆಚ್ಚು ಸೋಂಕಿನ ಸಂಖ್ಯೆ ಹೆಚ್ಚಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಬುಧವಾರ 648 ಮಂದಿ ಸಾವನಪ್ಪುವ ಮೂಲಕ ದೇಶಾದ್ಯಂತ ಸಾವಿನ ಸಂಖ್ಯೆ 28, 732 ಸಂಖ್ಯೆಯಾಗಿದೆ. 4,11,133 ಸಕ್ರಿಯ ಪ್ರಕರಣಗಳಿದ್ದು 7,53,049 ಮಂದಿ ಚೇತರಿಸಿಕೊಂಡಿದ್ದಾರೆ. 
ಅತಿ ಹೆಚ್ಚು ಹಾನಿಯಾಗಿರುವ ನಿನ್ನೆ ಮಹಾರಾಷ್ಟ್ರದಲ್ಲಿ 246, ತಮಿಳುನಾಡು 76, ಆಂಧ್ರಪ್ರದೇಶ 62, ಕರ್ನಾಟಕದಲ್ಲಿ 61, ಉತ್ತರಪ್ರದೇಶ 37,ಪಶ್ಚಿಮ ಬಂಗಾಳ 35, ಗುಜರಾತ್ 34, ದೆಹಲಿ 27, ಮಧ್ಯಪ್ರದೇಶ 18, ಹರ್ಯಾಣ, ಜಮ್ಮು ಕಾಶ್ಮೀರ ಮತ್ತು ರಾಜಸ್ಥಾನದಲ್ಲಿ ತಲಾ 9 ಜನ ಸಾವನಪ್ಪಿದ್ದಾರೆ.
ಇದುವರೆಗೂ ಮಹಾರಾಷ್ಟ್ರದಲ್ಲಿ 12,276, ದೆಹಲಿಯಲ್ಲಿ 3,690, ತಮಿಳುನಾಡು 2,626, ಗುಜರಾತ್ 2,196 ಕರ್ನಾಟಕ 1464, ಉತ್ತರ ಪ್ರದೇಶ 1,229 ಪಶ್ಚಿಮ ಬಂಗಾಳ 1,182, ಆಂಧ್ರಪ್ರದೇಶ 758, ಮಧ್ಯಪ್ರದೇಶ 756 ಮಂದಿ ಪ್ರಾಣಕಳೆದುಕೊಂಡಿದ್ದಾರೆ.
You may like

ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ

ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?

ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!

ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?

ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್

3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?






















