ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ಆತ್ಮನಿರ್ಭರ ಕರೆ ಮೇಡ್ ಇನ್ ಇಂಡಿಯಾ ಬ್ರಾಂಡ್ಗೆ ಹೊಸ ಭಾಷ್ಯ ಬರೆದಿದೆ. ಈ ಮದ್ರೆ ಸೇನೆಯಲ್ಲೂ ಮೇಡ್ ಇನ್ ಇಂಡಿಯಾ ಸದ್ದು ಮಾಡುತ್ತಿದೆ. ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ ಭಾರತ್ ಹೆಸರಿನ ಡ್ರೋನ್ಗಳನ್ನು ನಿರ್ಮಿಸಿದೆ. ಇದನ್ನು ಭಾರತ-ಚೀನಾ ಗಡಿಬಳಿಯಲ್ಲಿ ಬಳಸಿಕೊಳ್ಳುತ್ತಿದೆ.
ಗಲ್ವಾನ್ ಗಲಾಟೆ ಬಳಿಕ ಭಾರತ-ಚೀನಾ ಗಡಿಯಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ. ಲಡಾಖ್ನ ಪೂರ್ವ ಭಾಗದ ಲೈನ್ ಆಫ್ ಆ್ಯಕ್ಚುವಲ್ ಕಂಡ್ರೋಲ್ (LAC)ನಲ್ಲಿ DRDO ನಿರ್ಮಿಸಿರುವ ಭಾರತ್ ಡ್ರೋನ್ಗಳನ್ನು ಸೇನೆ ಬಳಸಿಕೊಳ್ಳುತ್ತಿದೆ.LAC ಹತ್ತಿರ ಚೀನಾ ಸೇನೆ ಕಿರಿಕಿರಿ ಮಾಡುತ್ತಿರುವುದರಿಂದ ವಿವಾದಿತ ಪ್ರದೇಶಗಳಲ್ಲಿ ನಿಖರವಾದ ಕಣ್ಗಾವಲು ಇಡಲು ಭಾರತೀಯ ಸೇನೆಗೆ ಡ್ರೋನ್ ಗಳ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಭಾರತ್ ಡ್ರೋನ್ಗಳನ್ನು ಸೇನೆ ಬಳಸಿಕೊಳ್ಳುತ್ತಿದೆ.
ಭಾರತ್ ಡ್ರೋನ್ಗಳನ್ನು ವಿಶ್ವದ ಶ್ರೇಷ್ಠ ಡ್ರೋನ್ಗಳ ಪಟ್ಟಿಗೆ ಸೇರಿಸಬಹುದಾಗಿದೆ. ಭಾರತ್ ಡ್ರೋನ್ ಸಣ್ಣ ಹಾಗೂ ಶಕ್ತಿಯುತವಾದ ಡ್ರೋನ್ ಆಗಿದ್ದು ಸ್ಥಳದಲ್ಲಿ ನಿಖರವಾಗಿ ಕಾರ್ಯ ನಿರ್ವಹಿಸಬಲ್ಲದು. ಮಿತ್ರರು ಹಾಗೂ ವೈರಿಗಳನ್ನು ಪತ್ತೆ ಹಚ್ಚಲು ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ಈ ಡ್ರೋನ್ ಕಾರ್ಯ ನಿರ್ವಹಿಸುತ್ತದೆ.
ಈ ಭಾರತ್ ಡ್ರೋನ್ ವಿಶೇಷತೆ ಎಂದರೆ, ಅತ್ಯಂತ ಶೀತ ವಾತಾವರಣದಲ್ಲೂ ಕಾರ್ಯನಿರ್ವಹಿಸುತ್ತದೆ. ರಾತ್ರಿವೇಳೆಯೂ ಕಾರ್ಯಚರಿಸುವ ಸಾಮರ್ಥ್ಯ ಹೊಂದಿದೆ. ದಟ್ಟ ಅರಣ್ಯಗಳಲ್ಲಿ ಅಡಗಿರುವವರನ್ನೂ ಪತ್ತೆ ಮಾಡಬಲ್ಲದು. ಇನ್ನು ರಾಡರ್ ಮೂಲಕವು ಕಂಡುಹಿಡಿಯಲು ಸಾಧ್ಯವಾಗದಂತೆ ಅಭಿವೃದ್ಧಿಪಡಿಸಲಾಗಿದೆ. ಒಟ್ಟಿನಲ್ಲಿ ಮೇಡ್ ಇನ್ ಇಂಡಿಯಾದ ಭಾರತ್ ಡ್ರೋನ್ ಸೇನೆಯ ಕೆಲಸಗಳನ್ನು ಸುಲಭ ಮಾಡಲಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?