Connect with us

Featured

ಫ್ರೆಂಚ್ ಬಿರಿಯಾನಿ ಸವಿಯೋಕೆ ಕಾತರರಾಗಿದ್ದಾರೆ ವಿರಾಟ್ ಕೊಹ್ಲಿ! – ರೈಸಿಂಗ್ ಕನ್ನಡದ ಜೊತೆ ಡ್ಯಾನಿಷ್ ಮಾತು…

ರೈಸಿಂಗ್ ಕನ್ನಡ :

ಸಂದರ್ಶನ : ಯೋಗೇಶ್, ಡೆಪ್ಯೂಟಿ ಎಡಿಟರ್

Advertisement

ರೈಸಿಂಗ್ ಕನ್ನಡ : ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ನಿಮ್ಮ ಚಿತ್ರ. ಹೇಗನ್ನಿಸುತ್ತಿದೆ?

ಡ್ಯಾನಿಷ್ ಸೇಠ್ : ತುಂಬಾ ಖುಷಿಯಾಗ್ತಿದೆ. ಹತ್ತು ವರ್ಷದ ಮೊದಲು ಒಂದು ಕಂಪೆನಿಯಲ್ಲಿ ಕೆಲಸ ಮಾಡುವಾಗ, ಈವೆಂಟ್ ಒಂದಕ್ಕೆ ಪುನೀತ್ ಅಣ್ಣ ಬಂದಿದ್ದರು. ಆದ್ರೆ ಮಾತಾಡೋ ಅವಕಾಶ ಸಿಕ್ಕಿರಲಿಲ್ಲ. ಆದ್ರೆ, ಹತ್ತು ವರ್ಷದ ಬಳಿಕ ಅವರ ಬ್ಯಾನರ್‌ ಮೂವಿಯಲ್ಲೇ ಅಭಿನಯಿಸುತ್ತಿದ್ದೇನೆ. ನಿಜಕ್ಕೂ ತುಂಬಾ ಖುಷಿಯಾಗಿದೆ. ನಿರ್ದೇಶಕ ಪನ್ನಗ ಭರಣ ಇದಕ್ಕೆ ಕಾರಣ. ನಾವು ಕಥೆ ಸಮೇತ ಹೋದಾಗ, ಪುನೀತ್ ಅಣ್ಣ ಸಂತೋಷದಿಂದ ಒಪ್ಪಿಕೊಂಡರು.

ರೈಸಿಂಗ್ ಕನ್ನಡ : ಮಾಯಾಬಜಾರ್, ಕವಲುದಾರಿ, ಲಾ ನಂತಹ ಚಿತ್ರಗಳು ಈ ಬ್ಯಾನರ್‌ನಿಂದ ಬಂದಿವೆ. ಈಗ ಫ್ರೆಂಚ್ ಬಿರಿಯಾನಿ ನಿರೀಕ್ಷೆ ಹೆಚ್ಚಾಗಿದೆ. ಹೇಗನ್ನಿಸುತ್ತಿದೆ?

ಡ್ಯಾನಿಷ್ ಸೇಠ್ : ತುಂಬಾ ಖುಷಿಯಾಗುತ್ತಿದೆ. ಪುನೀತ್ ಅಣ್ಮ ಕಥೆ ಮತ್ತು ಕ್ರಿಯಾಶೀಲತೆಗೆ ಬೆಲೆ ಕೊಡ್ತಾರೆ. ಅವರ ಬ್ಯಾನರ್‌ನಲ್ಲಿ ಬಂದಿರೋ ಯಾವ ಚಿತ್ರಗಳಲ್ಲೂ ದೊಡ್ಡ ದೊಡ್ಡ ಸ್ಟಾರ್‌ಗಳಿಲ್ಲ. ನಮ್ಮಂತ ಹೊಸ ಪ್ರತಿಭೆಗಳನ್ನ ಗುರುತಿಸೋ ಕೆಲ್ಸ ಅವರಿಂದ ಆಗುತ್ತಿದೆ. ನಮ್ಮ ಕಥೆ ಮತ್ತು ಕಾನ್ಸಪ್ಟೆ ಅವರಿಗೆ ಖುಷಿ ಆಗುತ್ತಿದ್ದಂತೆ ಓಕೆ ಅಂದು ಬಿಟ್ರು. ನಾವು ತುಂಬಾ ಸಂತಸ ಪಟ್ಟೆವು.

ರೈಸಿಂಗ್ ಕನ್ನಡ : ಫ್ರೆಂಚ್ ಬಿರಿಯಾನಿ…, ಇದ್ರಲ್ಲಿ ಪ್ರೇಕ್ಷಕರು ಖುಷಿ ಖುಷಿಯಾಗಿ ಸವಿಯೋಕೆ ಇರುವಂತಹ ಇಂಗ್ರೀಡಿಯಂಟ್ಸ್ ಏನು..?

ಡ್ಯಾನಿಷ್ ಸೇಠ್ : ಇದ್ರಲ್ಲಿ ಯಾವುದೋ ಒಂದು ಇಂಗ್ರೀಡಿಯಂಟ್ ಅಂತ ಹೇಳೋಕೆ ಇಷ್ಟ ಪಡೋಲ್ಲ. ಶಿವಾಜಿ ನಗರದ ಸ್ಥಳೀಯ ಭಾಷೆ ಇದರಲ್ಲಿನ ಮೊದಲ ರುಚಿ, ನಂತರದಲ್ಲಿ ರಂಗಾಯಣ ರಘು ಸರ್ ಅವರ ಕಾಮಿಡಿ ಇದೆ. ಫ್ರೆಂಚ್ ವ್ಯಕ್ತಿಯ ಕಾಮಿಡಿ ಇದೆ. ಆಟೋ ಡ್ರೈವರ್‌ ಆಗಿ ನಾನು ನನ್ನದೆ ಶೈಲಿಯಲ್ಲಿ ಮಾತನಾಡಲು ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಹೀಗೆ ಸಾಕಷ್ಟು ವಿಶೇಷತೆಗಳಿವೆ.

ರೈಸಿಂಗ್ ಕನ್ನಡ : ಈಗಾಗಲೇ ರಿಲೀಸ್ ಆಗಿರೋ ಸಾಂಗ್‌ಗಳು ಫ್ರೆಂಚ್ ಬಿರಿಯಾನಿ ಚಿತ್ರದ ಕ್ಯೂರಿಯಾಸಿಟಿಯನ್ನ ಮತ್ತಷ್ಟು ಹೆಚ್ಚಿಸಿವೆ. ಸಾಂಗ್ಸ್ ಬಗ್ಗೆ ಏನಂತೀರಾ..?

ಡ್ಯಾನಿಷ್ ಸೇಠ್ : ನಮ ನಮ ನಮಸ್ತೆ, ಏನಿದು ಅವಸ್ಥೆ ಅನ್ನೋ ಸಾಂಗ್‌ನಲ್ಲಿ ಬೆಂಗಳೂರು ಬದುಕಿನ ಚಿತ್ರಣ ಇದೆ. ಸ್ಯಾಂಡಲ್‌ವುಡ್ ದಿಗ್ಗಜರನ್ನ ನೆನಪಿಸಿಕೊಳ್ಳಲಾಗಿದೆ. ಬೆಂಗಳೂರನ ಎಲ್ಲಾ ವರ್ಗದ ಜನರ ಜೀವನವಿದೆ. ಏನ್ ಸ್ವಾಮಿ ಅನ್ನೋ ಹಾಡು ಕೂಡ ರಿಲೀಸ್ ಆಗಿದೆ. ಇದನ್ನ ಪುನೀತ್ ಅಣ್ಣ ಹಾಡಿದ್ದಾರೆ. ಅದ್ರಲ್ಲೂ ಕನ್ನಡದ ಬಗ್ಗೆ ತಿಳಿಸಲಾಗಿದೆ. ನಿಜಕ್ಕೂ ನನ್ನ ಬದುಕಿನಲ್ಲಿ ಈ ಚಿತ್ರ ತುಂಬಾನೆ ವಿಶೇಷತೆಗಳನ್ನ ನೀಡಲಿದೆ.

Advertisement

ರೈಸಿಂಗ್ ಕನ್ನಡ : ನಿಜಕ್ಕೂ ಫ್ರೆಂಚ್ ವ್ಯಕ್ತಿಗೆ ನೀವು ಬಿರಿಯಾನಿ ತಿನ್ನಿಸ್ತೀರೋ ಇಲ್ಲಾ, ಕುಷ್ಕಾ ಕೊಟ್ಟು ಕಳಿಸ್ತೀರೋ…?

ಡ್ಯಾನಿಷ್ ಸೇಠ್ : ಹ… ಹ… ಹ.. ಇಲ್ಲಾ ಅದನ್ನ ನೀವು ಸಿನಿಮಾದಲ್ಲೇ ನೋಡಬೇಕು. ನಿಜ ಹೇಳಬೇಕು ಅಂದ್ರೆ, ಆ ಪಾತ್ರವನ್ನ ಮಾಡಿರೋ ವ್ಯಕ್ತಿ ಕೂಡ ನನಗೆ ತುಂಬಾನೆ ವರ್ಷದಿಂದ ಪರಿಚಯ ಇರುವವರಾಗಿದ್ದಾರೆ. ಈ ಪಾತ್ರಕ್ಕೆ ಅವರನ್ನ ಆಯ್ಕೆ ಮಾಡಿದಾಗ ಕೂಡ ತುಂಬಾನೆ ಖುಷಿಯಿಂದ ಒಪ್ಪಿಕೊಂಡ್ರು. ಅದ್ರಲ್ಲೂ ಶಿವಾಜಿ ನಗರದಂತಹ ಪ್ರದೇಶದಲ್ಲಿ ಶೂಟಿಂಗ್ ಮಾಡಿದಾಗ ಅವರು ಅಭಿನಯಿಸಿದ ರೀತಿ ತುಂಬಾನೆ ವಿಭಿನ್ನವಾಗಿತ್ತು. ಎಲ್ಲರು ಆ ಕ್ಷಣಗಳನ್ನ ಎಂಜಾಯ್ ಮಾಡಿದ್ದೀವಿ.

ರೈಸಿಂಗ್ ಕನ್ನಡ : ಓಟಿಟಿ ಪ್ಲಾಟ್‌ಫಾರ್ಮ್ ಅನ್ನೋದು ಡ್ಯಾನಿಶ್‌ಗೆ ಹೊಸತೇನಲ್ಲ. ಯಾಕಂದ್ರೆ ಅವರು ಜನರ ಮನಸ್ಸಿಗೆ ಹತ್ತಿರವಾಗಿದ್ದೇ ಸೋಶಿಯಲ್ ಮೀಡಿಯಾ ಮೂಲಕ. ಈ ಚಿತ್ರ ಓಟಿಟಿಯಲ್ಲಿ ರಿಲೀಸ್ ಆಗ್ತಿದೆ ಏನಂತೀರಾ..?

ಡ್ಯಾನಿಷ್ ಸೇಠ್ : ನಿಜ, ಏಕಕಾಲಕ್ಕೆ 200 ದೇಶಗಳಲ್ಲಿ ಚಿತ್ರ ತೆರೆಕಾಣುತ್ತೆ. ಇದಕ್ಕಿಂತ ಖುಷಿ ವಿಷ್ಯ ಇನ್ನೇನಿದೆ. ಹಂಬಲ್‌ ಪೊಲಿಟೀಷಿಯನ್ ನೋಗರಾಜ್‌ ಚಿತ್ರ, ಅಮೇಜಾನ್‌ನಲ್ಲಿ ಬಂದ ಮೊದಲ ಕನ್ನಡ ಚಿತ್ರ. ಹಾಗಾಗಿ ಓಟಿಟಿ ಪ್ಲಾಟ್‌ಫಾರ್ಮ್‌ನ ಪ್ರತೀ ಹಂತದ ಪರಿಶ್ರಮವೂ ನನಗೆ ಗೊತ್ತಿದೆ. ಅಲ್ಲದೇ ನಾನು ಜನರಿಗೆ ಪರಿಚಿತವಾಗಿರೋದೆ ಸೋಶಿಯಲ್ ಮೀಡಿಯಾ ಮೂಲಕ, ಹೀಗಾಗಿ ನಿರೀಕ್ಷೆ ಇದೆ. ನನ್ನಂತ ಸಾಮಾನ್ಯ ಕಲಾವಿದನನ್ನ ಜನ ಹರಸುತ್ತಾರೆ ಅನ್ನೋ ವಿಶ್ವಾಸ ಇದೆ.

ರೈಸಿಂಗ್ ಕನ್ನಡ : ನಿಮ್ಮ ಮೊದಲ ಚಿತ್ರಕ್ಕೆ ವಿರಾಟ್ ಕೊಹ್ಲಿ ವಿಡಿಯೋ ಮೆಸೇಜ್ ಕಳುಹಿಸಿ ಶುಭ ಹಾರೈಸಿದ್ದರು. ಫ್ರೆಂಚ್ ಬಿರಿಯಾನಿ ಬಗ್ಗೆ ಅವರಿಗೇನಾದ್ರೂ ಗೊತ್ತಿದ್ಯಾ?

ಡ್ಯಾನಿಷ್ ಸೇಠ್ : ಹಾ ನಿಜ. ಈ ಚಿತ್ರದ ಟ್ರೇಲರ್‌ ಅನ್ನ ಕೂಡ ಅವರಿಗೆ ಕಳುಹಿಸಿದ್ದೆ. ಸಮ್‌ ಥಿಂಗ್ ಡಿಫ್ರೆಂಟ್ ಅಂತ ರಿಪ್ಲೇ ಮಾಡಿದ್ರೂ. ರಿಲೀಸ್ ಡೇಟ್ ಕೇಳಿಕೊಂಡು ಮೆಸೇಜ್ ಮಾಡಿದ್ರು. ಅಲ್ಲದೇ ಜುಲೈ 24ಕ್ಕೆ ಚಿತ್ರ ವೀಕ್ಷಿಸೋದಾಗಿ ಕೂಡ ತಿಳಿಸಿದ್ದಾರೆ.

ಒಟ್ಟಿನಲ್ಲಿ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಅಭಿಮಾನಿಗಳನ್ನ ರಂಜಿಸುತ್ತಿರೋ ಡ್ಯಾನಿಷ್ ಸೇಠ್‌ಗೆ ಫ್ರೆಂಚ್‌ ಬಿರಿಯಾನ್ ಯಶಸ್ಸು ತಂದುಕೊಡಲಿ ಅಂತ ಆಶಿಸೋಣ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ