Featured
ಕೃಷಿಕನಾದ ಸಲ್ಮಾನ್ ಖಾನ್ – ನಾಟಿ ಮಾಡಿ, ಟ್ರ್ಯಾಕ್ಟರ್ ಓಡಿಸಿದ ಬಾಲಿವುಡ್ ಬಿಗ್‌ಬಾಸ್..!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :

ರೈತರ ವಿಚಾರದಲ್ಲಿ ಟ್ರೋಲ್ ಆಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ರೈತನಾಗಿ ಕೆಸರು ಗದ್ದೆಯಲ್ಲಿ ಕೆಲಸ ಮಾಡುವ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ಲಾಕ್‌ಡೌನ್ ಬಳಿಕ ತಮ್ಮ ಫಾರ್ಮ್‌ಹೌಸ್‌ನಲ್ಲಿ ನೆಲೆಸಿರುವ ಸಲ್ಮಾನ್ ಖಾನ್ ಕೃಷಿ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಭತ್ತ ನಾಟಿ ಮಾಡುವ ಹಾಗು ಮೈಗೆ ಕೆಸರು ಮೆತ್ತಿಕೊಂಡಿರುವ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ಖಾನ್ ಹಂಚಿಕೊಂಡಿದ್ದರು. ಅಲ್ಲದೇ ರೈತರನ್ನ ಗೌರವಿಸುತ್ತೇನೆ ಎಂದು ಬರೆದುಕೊಂಡಿದ್ದರು. ಇದಕ್ಕೆ ಕೆಲವರು ಕೊಂಕು ತೆಗೆದು ಇದು ಕೆಕಲ ಬಿಲ್ಡಪ್, ಬರೀ ನಾಟಕ ಎಂದು ಟೀಕೆ ಮಾಡಿ ಟ್ರೋಲ್ ಮಾಡಿದ್ದರು.
ಟ್ರೋಲ್, ಕಮೆಂಟ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದ ಸಲ್ಲು ಭಾಯ್ ಕೃಷಿ ಚಟುವಟಿಕೆಯನ್ನ ಮುಂದುವರಿಸಿದ್ದಾರೆ. ಈ ಮೂಲಕ ಟೀಕೆ ಮಾಡುವವರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವ ಕೆಲಸ ಮಾಡಿದ್ದಾರೆ. ಭತ್ತದ ಗದ್ದೆಯಲ್ಲಿ ಕೆಲಸ ಮಾಡುವ ವೀಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಅವರ ಈ ಕೆಲಸಕ್ಕೆ ಅಭಿಮಾನಿಗಳು ಮಾತ್ರವಲ್ಲದೆ ಕ್ರೀಡೆ, ರಾಜಕೀಯ, ಸಿನಿಮಾ ರಂಗದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಸರು ಗದ್ದೆಯಲ್ಲಿ ಸಲ್ಮಾನ್ ಖಾನ್ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿದ್ದಾರೆ. ಕೆಸರಿನಲ್ಲಿ ಓಡಾಡುವುದು, ಟ್ರಾಕ್ಟರ್ ಚಕ್ರಗಳು ಕೆಸರಿನಲ್ಲಿ ಸಿಲುಕಿಕೊಂಡರೆ ಹಿಂದಿನಿಂದ ಟ್ರ್ಯಾಕ್ಟರ್ ತಳ್ಳುವುದು, ಕೃಷಿ ಕಾರ್ಮಿಕರ ಜೊತೆ ಭತ್ತದ ಸಸಿ ನಾಟಿ ಮಾಡುವ ಕೆಲಸವನ್ನೂ ಮಾಡಿದ್ದಾರೆ. ಸಾಮಾನ್ಯವಾಗಿ ರೈತರು ಗದ್ದೆಯಲ್ಲಿ ಮಾಡುವಂತ ಎಲ್ಲ ಕೆಲಸಗಳನ್ನೂ ಕಲಿತು ಮಾಡಿರುವ ಸಲ್ಲು, ಈ ಮೂಲುಕ ಟ್ರೋಲ್ ಮಾಡುುವವವರ ಬಾಯಿ ಮುಚ್ಚಿಸಿದ್ದಾರೆ. ರೈತನಾಗಿ ಕೆಲಸ ಮಾಡೋ ಸಲ್ಮಾನ್ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















