Featured
ವರ್ಷಧಾರೆಗೆ 25 ವರ್ಷಗಳ ನಂತರ ತುಂಬಿದ ಕೆರೆ : ಯಾದಗಿರಿಯಲ್ಲಿ ಮೈದುಂಬಿಕೊಂಡ ಲುಂಬಿನಿ ಲೇಕ್..!
![](https://risingkannada.com/wp-content/uploads/2020/07/yadgiri-lumbini-kere.jpg)
ರೈಸಿಂಗ್ ಕನ್ನಡ :
ಯಾದಗಿರಿ:
ಕಳೆದ 25 ವರ್ಷಗಳಿಂದ ಈ ಕೆರೆ ಖಾಲಿ ಖಾಲಿ ಆಗಿತ್ತು. ಪಕ್ಷಿ ಪ್ರಾಣಿಗಳಿಗೆ ಕುಡಿಯೋಕೆ ನೀರು ಸಿಗ್ತಿರಲಿಲ್ಲ. ಕೆರೆ ಯಾವಾಗ ತುಂಬುತೋ, ತುಂಬಿದ ಕೆರೆಯನ್ನ ಯಾವಾಗ ನೋಡ್ತೆವೋ ಅಂತ ಇಲ್ಲಿನ ಜನ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದರು.
ಆದರೆ ಸೋಮವಾರ ಬೆಳಗಾಗದ್ರೋಳಗೆ ಕೆರೆ ತುಂಬಿ ಕಂಗೊಳಿಸುತ್ತಿತ್ತು. ಹೌದು, ನಾವು ನಿಮಗೆ ಹೇಳುತ್ತಿರುವ ಚಿತ್ರಣ ಯಾದಗಿರಿ ನಗರದ ಪ್ರಮುಖ ಸಣ್ಣ ಕೆರೆ ಹಾಗೂ ಲುಂಬಿನಿ ಗಾರ್ಡನ್ ಕೆರೆಯ ಬಗ್ಗೆ . ಯಾದಗಿರಿ ನಗರಕ್ಕೆ ಹೊಂದಿಕೊಂಡಿದ್ದ ಎರಡು ಕೆರೆಗಳಿದ್ದು, ಇದರಲ್ಲಿ ನಗರದ ಮಧ್ಯಭಾಗದಲ್ಲಿ ಸಣ್ಣ ಕೆರೆ ಇದ್ರೆ, ಹೊರವಲಯದಲ್ಲಿ ದೊಡ್ಡ ಕೆರೆಯಿದೆ.
![](https://risingkannada.com/wp-content/uploads/2020/07/yadgiri-pooje-1024x473.jpg)
ಈ ಎರಡು ಕೆರೆಗಳ ತುಂಬಿದರೆ ನಗರದಲ್ಲೆಡೆ ಬೋರ್ ವೇಲ್ ಗಳು ರೀಚಾರ್ಜ್ ಆಗ್ತವೆ. 25 ವರ್ಷಗಳಿಂದ ಸರಿಯಾಗಿ ಮಳೆಯಾಗದ ಪರಿಣಾಮ ಕೆರೆಗಳು ತುಂಬಿರಲಿಲ್ಲ, ಅದ್ರಲ್ಲಿ ಸಣ್ಣ ಕೆರೆ ನವೀಕರಣದ ನಂತರ ಗೇಟ್ ಓಪನ್ ಮಾಡಿದ್ದ ಇತಿಹಾಸವೆ ಇರಲಿಲ್ಲ.
ನಿನ್ನೆ ರಾತ್ರಿಯಿಡಿ ಸುರಿದ ಭಾರೀ ಮಳೆಗೆ ನಗರದ ಲುಂಬಿನ ಗಾರ್ಡನ್ ಕೆರೆ ತುಂಬಿ ತುಳುಕಿದೆ. ಭಾರೀ ಮಳೆ ಹಿನ್ನೆಲೆ ಕೆರೆ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿವೆ.
ಯಾದಗಿರಿ ನಗರಸಭೆ ಅಧಿಕಾರಿಗಳು ಆಗಮಿಸಿ ಕೆರೆಗೆ ಪೂಜೆ ಸಲ್ಲಿಸಿದರು. ನಂತರ ಕೆರೆಯಲ್ಲಿರುವ ಹೆಚ್ಚುವರಿ ನೀರನ್ನು ಗೇಟ್ ಓಪನ್ ಮಾಡಿ ನದಿಗೆ ಹರಿಬಿಟ್ಟರು. ಹಲವು ವರ್ಷಗಳ ನಂತರ ಮತ್ತೆ ಕೆರೆ ತುಂಬಿರುವುದಕ್ಕೆ ನಗರದ ಜನತೆ ಹರ್ಷಗೊಂಡಿದ್ದಾರೆ.
You may like
ಕರ್ನಾಟಕ ಸಾಬೂನು,ಮಾರ್ಜಕ ನಿಯಮಿತ ವತಿಯಿಂದ ನೆರೆ ಸಂತ್ರಸ್ಥರಿಗೆ 60 ಸಾವಿರ ಶುಚಿ ಕಿಟ್ ರವಾನೆ
ಬಳ್ಳಾರಿಯಲ್ಲಿ ಸಿಡಿಲು ಬಡಿದು ಜಾನುವಾರುಗಳ ಸಾವು
ನೀರಿನಲ್ಲಿ ಕೊಚ್ಚಿ ಹೋದ ವೃದ್ಧ: ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರು
ವಿಜಯಪುರದಲ್ಲಿ ಭಾರೀ ಮಳೆ: 10 ಹೆಚ್ಚು ಮನೆ ಕುಸಿತ: ರಾತ್ರಿಯಿಡೀ ಜನರ ಪರದಾಟ
ದಾವಣಗೆರೆಯಲ್ಲಿ ಪ್ರವಾಹ ಭೀತಿ: ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ
ಉಕ್ಕಿ ಹರಿದ ಭೀಮಾ, ಡೋಣಿ ನದಿ: ವಿಜಯಪುರದಲ್ಲಿ ಹಲವು ಗ್ರಾಮಗಳು ಜಲಾವೃತ,ಸಂಪರ್ಕ ಕಡಿತ