Featured
ಚಿಕಿತ್ಸೆ ಸಿಗದೆ ಮತ್ತೊಂದು ಕಂದಮ್ಮ ಬಲಿ..? – ಏನಾಗಿದೆ ವೈದ್ಯರಿಗೆ..?
ರೈಸಿಂಗ್ ಕನ್ನಡ :
ರಾಮನಗರ :
ಇತ್ತೀಚೆಗಷ್ಟೇ ಬೆಂಗಳೂರನಲ್ಲಿ ಚಿಕಿತ್ಸೆ ಸಿಗದೆ ಮಗುವೊಂದು ಕೊನೆಯುಸಿರೆಳೆದಿತ್ತು. ಈ ಘಟನೆ ಇನ್ನೂ ಮಾಸುವ ಮೊದಲೇ ಚನ್ನಪಟ್ಟಣದಲ್ಲೂ ಇಂತದ್ದೊಂದು ಘಟನೆ ಜರುಗಿದೆ. ಚನ್ನಪಟ್ಟಣದ ಪೇಟೆಚೇರಿ ನಿವಾಸಿ ಪ್ರದೀಪ್ ಅವರ 7 ತಿಂಗಳ ಪುತ್ರಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ.
ಮಗುಗೆ ಸೋಮವಾರ ಬೆಳಗ್ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರಂತೆ, ಅಲ್ಲಿ ಮಕ್ಕಳ ವೈದ್ಯರು ಇಲ್ಲದ ಕಾರಣ ಬೇರೆಕಡೆಗೆ ಕರೆದುಕೊಂಡು ಹೋಗಿ ಅಂದಿದ್ದಾರೆ, ನಗರದ ಖ್ಯಾತ ಮಕ್ಕಳ ತಜ್ಞರ ಬಳಿ ಕರೆದುಕೊಂಡು ಹೋದಾಗ, ಅಲ್ಲೂ ಕೂಡ ಸ್ಥಿತಿ ಗಂಭೀರವಾಗಿದೆ, ಬೇರೆಕಡೆ ಕರೆದುಕೊಂಡು ಹೋಗಿ ಅಂದಿದ್ದಾರಂತೆ, ಅಲ್ಲಿಂದ ನಗರದ ಬಿ.ಜಿ.ಲಿಂಗೇಗೌಡ ಆಸ್ಪತ್ರೆಗೆ ಕರೆ ತಂದಿದ್ದಾರೆ ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಮಗು ಸಾವನ್ನಪ್ಪಿದೆ ಅಂತಾ ತಿಳಿಸಿದ್ದಾರೆ.
ನಂತ್ರ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿಯೂ ಮಗು ಸಾವನ್ನಪ್ಪಿದೆ ಅಂತಾ ಹೇಳಿದ್ದಾರೆ. ಮಗುವಿನ ಚಿಕಿತ್ಸೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಕೊನೆಗೂ ಮಗುವನ್ನ ಪೋಷಕರು ಕಳೆದುಕೊಂಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?