Featured
ತುಮಕೂರಿನಲ್ಲಿ ಕೊರೊನಾಗೆ ಮೂರು ಬಲಿ : ಒಂದೇ ದಿನ 78 ಜನರಿಗೆ ಸೋಂಕು
![](https://risingkannada.com/wp-content/uploads/2020/07/tumkuur-corona-2.jpeg)
ರೈಸಿಂಗ್ ಕನ್ನಡ :
ಪ್ರತಿನಿಧಿ, ಕೆ.ಆರ್ ಬಾಬು, ತುಮಕೂರು :
ಕೊರೊನಾ ಆರ್ಭಟಿಸಿದ್ದು ಜಿಲ್ಲೆಯಲ್ಲಿ ಇಂದು ಮೂವರು ಮಂದಿ ಸಾವನಪ್ಪಿದ್ದಾರೆ . ಒಂದೇ ದಿನ 78 ಜನರಿಗೆ ಪಾಸಿಟಿವ್ ಎಂದು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 777ಕ್ಕೆ ಏರಿಕೆಯಾಗಿದೆ.
ತುಮಕೂರು, ಕುಣಿಗಲ್, ಶಿರಾ ತಾಲ್ಲೂಕಿನಲ್ಲಿ ಒಂದೊಂದು ಸಾವು ಸಂಭವಿಸಿದೆ. ಇನ್ನು ಇಂದು 53 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ತುಮಕೂರು ನಗರದಲ್ಲೇ 45 ಜನ ಗುಣಮುಖರಾಗಿದ್ದಾರೆ.
![](https://risingkannada.com/wp-content/uploads/2020/07/tumkur-health-2007.jpg)
ತಿಪಟೂರು 2, ಕೊರಟಗೆರೆ 8, ಕುಣಿಗಲ್ 24, ಮಧುಗಿರಿ 10, ಪಾವಗಡ 10, ಶಿರಾ 6, ತುಮಕೂರು 17, ತುರುವೇಕೆರೆಯಲ್ಲಿ 1 ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿವೆ. ಇವರ ಪೈಕಿ 5 ವರ್ಷದೊಳಗಿನ ನಾಲ್ಕು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟು 26ಕ್ಕೇರಿದ ಕೊರೊನಾ ಸಾವಿನ ಸಂಖ್ಯೆ. 14 ಜನ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 341 ಸಕ್ರಿಯ ಪ್ರಕರಣಗಳಿವೆ.
ತುಮಕೂರು ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಡಿಎಚ್ಒ ನಾಗೇಂದ್ರಪ್ಪ ಮಾಹಿತಿ ನೀಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?