Featured
ನಾಲ್ಕು ಫ್ಲಾಟ್ ಹೊಂದಿದ್ದ ಭಿಕ್ಷುಕಿ ಹತ್ಯೆ – ಒಳ ಉಡುಪಿನಲ್ಲಿ ಸಿಗ್ತು ಚಿನ್ನಾಭರಣ..!
![](https://risingkannada.com/wp-content/uploads/2020/07/fgfdg.jpg)
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಅಚ್ಚರಿಯಾದ್ರೂ ಇದೊಂದು ಸತ್ಯ ಘಟನೆ. ಆ ವೃದ್ಧೆಯ ಹೆಸರು ಸಂಜನಾ ಪಾಟೀಲ್, 70 ವರ್ಷದವರು. ಬದುಕೋಕೆ ಎಲ್ಲವೂ ಅನುಕೂಲವಾಗಿಯೇ ಇತ್ತು. ಆದರೂ ಆಕೆ ಭಿಕ್ಷೆಬೇಡೋದನ್ನ ವೃತ್ತಿಯಾಗಿಸಿಕೊಂಡಿದ್ದರು. ಮುಂಬೈನಲ್ಲಿ ಭಿಕ್ಷೆ ಬೇಡುತ್ತಲೇ 4 ಫ್ಲಾಟ್ಗಳನ್ನು ಖರೀದಿಸಿದ್ದ ಸಂಜನಾ ಈಗ ಕೊಲೆಯಾಗಿದ್ದಾರೆ. ಅದೂ ಯಾರಿಂದಲೂ ಅಲ್ಲ, ತನ್ನ ಸೊಸೆಯಿಂದಲೇ. ಇದಕ್ಕೆಲ್ಲಾ ಕಾರಣ ಆಸ್ತಿ.
ಆಸ್ತಿಗಾಗಿ ಅತ್ತೆ ಮೇಲೆ ಮಗನ ಬ್ಯಾಟ್‌ನಿಂದ ಹಲ್ಲೆ ನಡೆಸಿದ ಸೊಸೆ, ತನ್ನ ಅತ್ತೆ ಕಾಲು ಜಾರಿ ಬಾತ್ರೂಂನಲ್ಲಿ ಬಿದ್ದಿದ್ದಾರೆ ಎಂದು ಸುಳ್ಳು ಹೇಳಿದ್ದಳು. ಆದರೆ, ಗಾಯಗಳನ್ನು ನೋಡಿದ ವೈದ್ಯರಿಗೆ ಇದು ಕೊಲೆ ಪ್ರಯತ್ನ ಎಂಬುದು ಗೊತ್ತಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಭಿಕ್ಷುಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ ನಾಲ್ಕು ಫ್ಲಾಟ್ ಹೊಂದಿದ್ದ ವೃದ್ಧೆ, ಮೂರನ್ನ ಬಾಡಿಗೆಗೆ ಕೊಟ್ಟು, ಒಂದರಲ್ಲಿ ಮಗನ ಜೊತೆ ವಾಸಿಸುತ್ತಿದ್ದರು.
ಅಷ್ಟಕ್ಕೂ ಗಂಡ ತೀರಿಕೊಂಡು ವರ್ಷಗಳೇ ಕಳೆದಿವೆ. ತಮಗೆ ಬಹಳ ವರ್ಷಗಳ ಕಾಲ ಮಕ್ಕಳಿಲ್ಲೇ ಇದ್ದುದ್ದರಿಂದ, ಒಬ್ಬ ಮಗನನ್ನ ದತ್ತು ಪಡೆದಿದ್ದರು. ಎಲ್ಲವೂ ಚೆನ್ನಾಗೇ ಇತ್ತು ಆದ್ರೆ, ಸೊಸೆ ಬಂದ ಮೇಲೆ, ಎಲ್ಲಾ ಆಸ್ತಿಯನ್ನೂ ತನ್ನ ಗಂಡನ ಹೆಸರಿಗೆ ಬರೆಯುವಂತೆ ಹಠ ಮಾಡಿದ್ದಾಳೆ. ಈ ವಿಚಾರವಾಗಿ ಪದೇ ಪದೇ ಜಗಳವೂ ಆಗಿದೆ. ಬಳಿಕ, ಒಂದು ದಿನ ಜಗಳ ವಿಕೋಪಕ್ಕೆ ತಿರುಗಿ ಅತ್ತೆ ಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದಾಳೆ.
ತೀವ್ರ ರಕ್ತಸ್ತ್ರಾವವಾಗೋದನ್ನ ಕಂಡು, ತಾನೇ ಆಸ್ಪತ್ರೆಗೂ ಸೇರಿಸಿದ್ದಾಳೆ. ಆದ್ರೆ, ಮೈ ಮೇಲೆ ತುಂಬಾ ಕಡೆ ಹಲ್ಲೆಯಾಗಿದ್ದರಿಂದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಚಾರಣೆ ವೇಳೆ ಇದು ಕಾಲು ಜಾರಿ ಬಿದ್ದಿರೋದಲ್ಲಾ, ಉದ್ದೇಶಪೂರ್ವಕ ಹತ್ಯೆ ಅನ್ನೋದು ಸಾಭೀತಾಗಿದೆ. ಅಲ್ಲದೇ ಪೋಸ್ಟ್‌ಮಾರ್ಟಮ್ ವೇಳೆ ವೃದ್ಧೆಯ ಒಳ ಉಡುಪಿನಲ್ಲಿ ಚಿನ್ನಾಭರಣವೂ ಸಿಕ್ಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?