Connect with us

Featured

ವರ ಮಹಾಲಕ್ಷ್ಮೀ ಹಬ್ಬ ಆಚರಿಸುವುದು ಹೇಗೆ..? ಪೂಜೆಯ ವಿಧಿ-ವಿಧಾನಗಳೇನು.?

ವರ ಮಹಾಲಕ್ಷ್ಮಿ ಹಬ್ಬ ಆಚರಣೆ ಹೇಗೆ..? ಪೂಜಾ ವಿಧಾನ ಹೇಗಿರಬೇಕು..? ಯಾವ ರೀತಿ ಮಾಡಬೇಕು ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲ್ಲ. ಹಲವು ರೀತಿಯ ಗೊಂದಲ ಇರುತ್ತೆ. ಇವತ್ತು ನಾವು ನಿಮಗೆ ವರ ಮಹಾಲಕ್ಷ್ಮಿ ಪೂಜೆ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನ ತಿಳಿಸ್ತೀವಿ..

ವರಮಹಾಲಕ್ಷ್ಮಿ ಪೂಜೆಗೆ ಏಳು ರೀತಿಯ ಪ್ರಕ್ರಿಯೆಗಳಿವೆ.

  1. ಪೂಜಾ ಸಮಯ
  2. ಪೂಜಾ ಸಿದ್ಧತೆ
  3. ಕಲಶ ಕೂರಿಸುವ ವಿಧಾನ
  4. ನೈವೇಧ್ಯ
  5. ತಟ್ಟೆ ಜೋಡಿಸುವುದು
  6. ತಾಂಬೂಲ
  7. ವಿಸರ್ಜನೆ  
  1. ಪೂಜಾ ಸಮಯ : ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರ ವರಮಹಾಲಕ್ಕೀ ಹಬ್ಬ ಆಚರಿಸುತ್ತೇವೆ. ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮುಗಿಸಬೇಕು. (ಅಂದ್ರೆ, ಬೆಳಗ್ಗೆ 6 ಗಂಟೆಯೊಳಗೆ ಪೂಜೆ ಮುಗಿಸಬೇಕು.) ಹಬ್ಬದ ಹಿಂದಿನ ದಿನವೇ ಕಲಶ ಅಥವಾ ಬಿಂದಿಗೆಗೆ ಸೀರೆ ಹುಡುಸಿರಬೇಕು. ಬಳಿಕ ಪೂಜೆ ದಿನ ಮನೆಯನ್ನ ಸ್ವಚ್ಛ ಮಾಡಿ, ದೇವಿಗೆ ಪೂಜೆ ಮಾಡಬೇಕು. ಯಾವುದೇ ಕಾರಣಕ್ಕೂ ರಾಹುಕಾಲದಲ್ಲಿ ಪೂಜೆ ಮಾಡಬಾರದು.
  2. ಪೂಜಾ ಸಿದ್ಧತೆ : ವರಮಹಾಲಕ್ಷ್ಮೀಯನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕೂರಿಸಬೇಕು. ಮೊದಲಿಗೆ ಮಣೆ ಹಾಕಿ ಅದಕ್ಕೆ ಬಿಳಿ ಬಟ್ಟೆಯನ್ನು ಹಾಸಿ,,ಅದರ ಮೇಲೆ ಬಾಳೆ ಎಲೆಯನ್ನು ಹಾಕಿ ಬಳಿಕ ಅಷ್ಠ ರಂಗೋಲಿ ಬಿಡಿಸಬೇಕು.(ಅಕ್ಕಿಹಿಟ್ಟಿನಿಂದ ಮಾತ್ರ ರಂಗೋಲಿ ಬಿಡಿಸಬೇಕು) ಅದರ ಮೇಲೆ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಕಲಶ ಇಡಬೇಕು.
  3. ಕಲಶ ಕೂರಿಸುವ ವಿಧಾನ : ಬಿಂದಿಗೆಗೆ ನೀರು ತುಂಬಬೇಕು . (ನೀರಿನ ಜೊತೆಗೆ ಅರಿಶಿಣ, ಕುಂಕುಮ , ಅಕ್ಷತೆ ಕಾಳು, ಕೆಂಪು ಹೂವು, ನಾಣ್ಯ ಹಾಕಬೇಕು) ಕಲಶಕ್ಕೆ ಮಾವಿನ ಎಲೆ (ಅಥವಾ) ವಿಲ್ಯದ ಎಲೆ ಇಡಬೇಕು. ಕಲಶಕ್ಕೆ ತೆಂಗಿನಕಾಯಿ ಇಡಬೇಕು. ಆ ತೆಂಗಿನಕಾಯಿಗೆ ಅರಿಶಿನ ಅಚ್ಚಬೇಕು. ತೆಂಗಿನಕಾಯಿಗೆ ಕಣ್ಣು ಕಾಣದ ಹಾಗೆ ನಾರು ತೆಗೆಯಬೇಕು. ನಂತರ ಮುಖವಾಡ ಇಡಬೇಕು. ಅಮ್ಮನಿಗೆ ಗೆಜ್ಜೆ ವಸ್ತ್ರ ಮುಖ್ಯವಾಗಿ ಹಾಕಲೇಬೇಕು. ಲಕ್ಮೀ ಪೂಜೆ ಮಾಡುವ ಮೊದಲಿಗೆ ಗಣೇಶನ ಪೂಜೆ ಮಾಡಬೇಕು. ಗಣೇಶನನ್ನು ಲಕ್ಮೀಯ ಬಲಭಾಗಕ್ಕೆ ಕುರಿಸಬೇಕು. ನಂತರ ಲಕ್ಷ್ಮೀ ಪೂಜೆ ಮಾಡಬೇಕು.
  4. ನೈವೇದ್ಯ : ಲಕ್ಷ್ಮೀಗೆ ಗೋಧಿ ಪಾಯಸ ತುಂಬಾ ಇಷ್ಟ. ಹೋಳಿಗೆ, ಸಜ್ಜಿಗೆ, ಬಾಳೆಹಣ್ಣು ರಸಾವಳಿ, ಹೆಸರುಬೇಳೆ ಪಾಯಸ ಹೀಗೆ, ಯಾವುದಾದರು ಒಂದನ್ನು ಮಾಡಿ ನೈವೇದ್ಯಕ್ಕೆ ಇಡಬೇಕು.
  5. ತಟ್ಟೆ ಜೋಡಿಸುವುದು : ಅಮ್ಮನಿಗೆ 5 ರೀತಿಯ ಫಲಗಳನ್ನು ತಟ್ಟೆಯಲ್ಲಿ ಇಡಲೇಬೇಕು. ಮೊದಲಿಗೆ ದಾಳಿಂಬೆ (ದಾಳಿಂಬೆ ಅಮ್ಮನಿಗೆ ಲಕ್ಷ್ಮೀ ಸ್ವರೂಪ ) ಬಾಳೆಹಣ್ಣು, ಸೇಬು, ಮೊಸಂಬಿ, ಯಾವುದಾದರು 5 ರೀತಿಯ ಹಣ್ಣನ್ನು ದೇವಿಗೆ ಇಡಬೇಕು. ನಂತರ ಒಂದು ತಟ್ಟೆಯಲ್ಲಿ ತಾಂಬೂಲ, ಒಂದು ತಟ್ಟೆಯಲ್ಲಿ ಅರಿಶಿನ ಕುಂಕುಮ, ಅಕ್ಷತೆ ಕಾಳು, ಹೂವು, ಒಂದು ತಟ್ಟೆಯಲ್ಲಿ ಬಳೆಗಳನ್ನು ಜೋಡಿಸಿಕೊಳ್ಳಬೇಕು. ಒಂದು ತಟ್ಟೆಯಲ್ಲಿ ದುಡ್ಡು (ದುಡ್ಡು ಎಷ್ಠೇ ಇಟ್ಟರು ನೀವು ಒಂದು ರೂಪಾಯಿ ನಾಣ್ಯವನ್ನು 32 ರೂಪಾಯಿ ಇಡುವುದನ್ನು ಮರಿಯಬೇಡಿ.) ವ್ರತದ ದಾರವನ್ನು ಮಾಡಿಕೊಳ್ಳಿ. ನಂತರ ದೀಪವನ್ನು ಬೇಸ ಸಂಖ್ಯೆಯಲ್ಲಿ ಹಚ್ಚಬೇಕು. ತಟ್ಟೆಗಳನ್ನು ಬೆಸ ಸಂಖ್ಯೆಯಲ್ಲಿ ದೇವಿಯ ಮುಂದೆ ಇಡಬೇಕು
  6. ತಾಂಬೂಲ : ಅರಿಶಿಣ ಕುಂಕುಮ, ಎಲೆ ಅಡಿಕೆ, 1 ರೂಪಾಯಿ ನಾಣ್ಯ, ಹೂವು, ಬಾಳೆಹಣ್ಣು (ಯಾವುದೇ ಕಾರಣಕ್ಕೂ ಬಾಳೆಹಣ್ಣು ಒಂದು ಕೊಡಬೇಡಿ. ಬಾಳೆಹಣ್ಣು ದಂಪತಿಯ ಸಂಕೇತ) ನಿಮಗೆ ತಕ್ಕಂತೆ ನೀವು ತಾಂಬೂಲ ಕೊಡಬಹುದು.
  7. ವಿಸರ್ಜನೆ : ದೇವರನ್ನು ಕದಲಿಸುವ ಮುನ್ನ ನೀವು ದೇವಿಯ ಮುಂದೆ 10 ನಿಮಿಷ ಕುಳಿತು ನಿಮ್ಮ ಕೋರಿಕೆಗಳನ್ನು ಕೇಳಿಕೊಳ್ಳಬಹುದು. ಲಕ್ಷ್ಮೀಯನ್ನು ಕದಲಿಸುವ ಮುಂಚೆ ದೇವಿಗೆ ಕೆಂಪು ಆರತಿ ಮಾಡಬೇಕು. ನಂತರ ದೇವಿಯ ಬಲಭಾಗದಲ್ಲಿರುವ ಹೂವು ಸ್ವಲ್ಪ ತೆಗೆದು ಕೆಳಗೆ ಹಾಕಿ ನಂತರ ಕದಲಿಸಬೇಕು. (ಯಾವುದೇ ಕಾರಣಕ್ಕೂ ರಾಹುಕಾಲದಲ್ಲಿ ದೇವಿಯನ್ನು ಕದಲಿಸಬಾರದು.) ಕಲಶಕ್ಕೆ ಹಾಕಿದ ನೀರನ್ನು ಗಿಡದ ಮೇಲೆ ಚೆಲ್ಲಾಬೇಕು, ಬೇರೆ ಎಲ್ಲೂ ಚೆಲ್ಲಾಬಾರದು.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ