Featured
ದೇಶಾದ್ಯಂತ ಮಹಾಮಾರಿ ಕೊರೊನಾ ‘ಮಹಾ’ಸ್ಪೋಟ : 24 ಗಂಟೆಯಲ್ಲಿ 38,902 ಹೊಸ ಪ್ರಕರಣ

ರೈಸಿಂಗ್ ಕನ್ನಡ:
ವೆಬ್ ಡೆಸ್ಕ್ :
ಕಳೆದ 24 ಗಂಟೆಯಲ್ಲಿ 38,902 ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗಿ ಆತಂಕ ಸೃಷ್ಟಿಸಿದೆ. ದೇಶಾದ್ಯಂತ 543 ಮಂದಿ ಸಾವಿಗೀಡಾಗಿದ್ದಾರೆ.
ಸದ್ಯ ದೇಶದಲ್ಲಿ ಒಟ್ಟು 10,77,618 ಕೋವಿಡ್ ಪ್ರಕರಣಗಳಿದ್ದು3,73,379 ಪ್ರಕರಣಗಳು ಸಕ್ರಿಯವಾಗಿವೆ. ಇದರಲ್ಲಿ 6,77,423 ಮಂದಿ ಸೋಂಕಿನಿಂದ ಸುಧಾರಿಸಿಕೊಂಡಿದ್ದಾರೆ. 26,816 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಜುಲೈ 18ರವರೆಗೂ 1,37, 91, 869 ಮಂದಿಯ ಮೇಲೆ ಪರೀಕ್ಷೆ ನಡೆಸಿರುವುದಾಗಿ ಐಸಿಎಂಆರ್ ಹೇಳಿದೆ.
ಅತಿ ಹೆಚ್ಚು ಸೋಂಕಿಗೆ ತುತ್ತಾಗಿರುವ ಮಹಾರಾಷ್ಟ್ರದಲ್ಲಿ 3,00,937 ಸೋಂಕು ತಗುಲಿದ್ದು 11, 596 ಮಂದಿ ಸಾವನಪ್ಪಿದ್ದಾರೆ. ಇನ್ನು 1,23,678 ಸಕ್ರಿಯ ಪ್ರಕರಣಗಳಿದ್ದು 1,65,663 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿಯಲ್ಲಿ 16, 711 ಪ್ರಕರಣಗಳಿದ್ದು 1,01,274 ಜನ ಚೇತರಿಸಿಕೊಂಡಿದ್ದಾರೆ. ಒಟ್ಟು 1,21, 582 ಲಕ್ಷ ಮಂದಿಗೆ ಸೋಂಕು ಪ್ರಕರಣಗಳು ದಾಖಲಾಗಿವೆ.
ರಾಷ್ಟ್ರರಾಜಧಾನಿಯಲ್ಲಿ ಒಟ್ಟು 3,597 ಮಂದಿ ಸಾವನಪ್ಪಿದ್ದಾರೆ. ತಮಿಳುನಾಡಿನಲ್ಲಿ 49,455 ಸಕ್ರಿಯ ಪ್ರಕರಣಗಳಿದ್ದವು. 1,13,856 ಜನ ಗುಣಮುಖರಾಗಿದ್ದಾರೆ. 1,65, 714 ಪ್ರಕರಣಗಳ ಪೈಕಿ 2,403 ಜನ ಸಾವನಪ್ಪಿದ್ದಾರೆ.
You may like

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ

ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!

ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್

ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ

ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ

ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?






















