Featured
ಬೃಹತ್ ನಕ್ಷತ್ರ ಕಣ್ಮರೆ! ಬ್ರಹ್ಮಾಂಡವೆಲ್ಲಾ ಹುಡುಕುತ್ತಿರೋ ವಿಜ್ಞಾನಿಗಳು..!
![](https://risingkannada.com/wp-content/uploads/2020/07/OIPBB1QPCDS.jpg)
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಒಂದು ದಶಕಕ್ಕೂ ಅಧಿಕ ಸಮಯದಿಂದ ಅಧ್ಯಯನ ಮಾಡುತ್ತಿದ್ದ ಬೃಹತ್ ನಕ್ಷತ್ರವೊಂದು ಏಕಾಏಕಿ ಮಾಯವಾಗಿದೆ. ತನ್ನ ಜೀವಿತಾವಧಿಯ ಕೊನೆಯ ಹಂತದಲ್ಲಿದ್ದ ಬೃಹತ್ ನಕ್ಷತ್ರವೊಂದರ ಚಟುವಟಿಕೆಯನ್ನ ಖಗೋಳ ಶಾಸ್ತ್ರಜ್ಞರು ನಿರಂತರವಾಗಿ ಗಮನಿಸುತ್ತಿದ್ದರು. 2001 ರಿಂದ 2011ರ ಅವಧಿಯಲ್ಲಿ ಭಾರೀ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಈ ನಕ್ಷತ್ರ, 2019ರಲ್ಲಿ ಏಕಾಏಕಿ ಮಾಯವಾಗಿದೆ.
ಐರ್ಲೆಂಡ್ ರಾಜಧಾನಿ ಡಬ್ಲಿನ್‌ನಲ್ಲಿರುವ ಟ್ರಿನಿಟಿ ಕಾಲೇಜಿನ ಖಗೋಳಶಾಸ್ತ್ರಜ್ಞ ಆ್ಯಂಡ್ರ್ಯೂ ಆ್ಯಲನ್ ಈ ಕುರಿತು ಮಾತನಾಡಿದ್ದಾರೆ. ಭೂಮಿಯಿಂದ ಸುಮಾರು 75 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿರುವ PHL293B ಎಂಬ ಗ್ಯಾಲಕ್ಸಿಯಲ್ಲಿರುವ ನಕ್ಷತ್ರವೊಂದು ಏಕಾಏಕಿ ಮಾಯವಾಗಿದೆ ಎಂದಿದ್ದಾರೆ.
![](https://risingkannada.com/wp-content/uploads/2020/07/OIPVKAFXDHN-1024x1024.jpg)
ಸಾಮಾನ್ಯವಾಗಿ ಅಳಿನ ಅಂಚಿನಲ್ಲಿರುವ ನಕ್ಷತ್ರಗಳು, ಸೂಪರ್‌ನೋವಾ ಅಂದ್ರೆ ಮಹಾ ವಿಸ್ಫೋಟದೊಂದಿಗೆ ಬ್ಲ್ಯಾಕ್ ಹೋಲ್‌ಗಳಾಗಿ ಪರಿವರ್ತನೆ ಹೊಂದುತ್ತವೆ. ಆಗ ನಕ್ಷತ್ರ ಪ್ರಕಾಶಿಸುವುದಿಲ್ಲ. ಇದರೊಂದಿಗೆ ನಕ್ಷತ್ರ ಅಧಿಕೃತವಾಗಿ ಅವಸಾನಹೊಂದಿದೆ ಎಂದು ಹೇಳಲಾಗುತ್ತೆ.
ಆದರೆ ಒಂದು ದಶಕಕ್ಕೂ ಹೆಚ್ಚುಕಾಲ ಈ ನಕ್ಷತ್ರದ ಅಧ್ಯಯನ ನಡೆಸಿದ್ದ ಖಗೋಳ ವಿಜ್ಞಾನಿಗಳಿಗೆ, ಈ ನಕ್ಷತ್ರ ಸೂಪರ್‌ನೋವಾ ಹಂತವನ್ನು ತಲುಪಿದ ಯಾವುದೇ ಸುಳಿವೂ ಸಿಗದೆ. ಏಕಾಏಕಿ ನಾಪತ್ತೆಯಾಗಿದೆ.
ನಮ್ಮ ಸೂರ್ಯನ ಸುಮಾರು 2.5 ರಿಂದ 3.5 ಮಿಲಯನ್ ಪಟ್ಟು ಹೆಚ್ಚು ಪ್ರಕಾಶಮಾನವಾದ ಈ ನಕ್ಷತ್ರ ಏಕಾಏಕಿ ಮಾಯವಾಗಲು ಕಾರಣ ಏನೆಂಬುದು ಇನ್ನೂ ತಿಳಿದಿಲ್ಲ ಎಂದು ಆ್ಯಂಡ್ರ್ಯೂ ಆ್ಯಲನ್ ಹೇಳಿದ್ದಾರೆ. ಅಲದೇ ಖಗೋಳ ವಿಜ್ಞಾನದಲ್ಲೇ ಇದು ಹೊಸ ಸವಾಲಾಗಿದ್ದು, ಈ ಕುರಿತು ಅಧ್ಯಯನ ನಡೆಸುತ್ತಿರೋದಾಗಿ ತಿಳಿಸಿದ್ದಾರೆ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?