Featured
ರಾಜಸ್ಥಾನ ರಾಜಕೀಯದಲ್ಲಿ ಟ್ವಿಸ್ಟ್- ಗೆಹ್ಲೋಟ್ ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆ ಆರೋಪ- ಸಿಬಿಐ ತನಿಖೆಗೆ ಬಿಜೆಪಿ ಪಟ್ಟು
![](https://risingkannada.com/wp-content/uploads/2020/07/SAMBIT-PATRA.jpg)
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ರಾಜಸ್ಥಾನ ರಾಜಕೀಯದಲ್ಲಿ ಯಾರು ಗೆಲ್ತಾರೋ ಗೊತ್ತಿಲ್ಲ. ಅತ್ತ ಕಾಂಗ್ರೆಸ್ನಿಂದ ಉಚ್ಛಟನೆಗೊಂಡಿರುವ ಸಚಿನ್ ಪೈಲಟ್ ಮತ್ತು ಸಹವರ್ತಿಗಳು ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಬೀಳಿಸಬೇಕು ಅನ್ನೋ ಶಪಥ ಮಾಡಿದ್ದಾರೆ. ಇತ್ತ ಕೋರ್ಟ್ನಲ್ಲೂ ಅನರ್ಹತೆ ಬಗ್ಗೆ ಕೇಸ್ ನಡೆಯುತ್ತಿದೆ. ಈ ಮಧ್ಯೆ ರಾಜಸ್ಥಾನದ ರಾಜಕೀಯಕ್ಕೆ ಹೊಸ ತಿರುವು ಸಿಕ್ಕಿದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಫೋನ್ ಕದ್ದಾಲಿಕೆ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರಕ್ಕೆ ಸಂಬಂಧಿಸಿದಂತೆ ಆಡಿಯೋ ಕ್ಲಿಪ್ ಬಹಿರಂಗವಾಗುತ್ತಿದ್ದಂತೆಯೇ ಬಿಜೆಪಿ, ಸರ್ಕಾರದ ವಿರುದ್ಧ ದೂರವಾಣಿ ಕದ್ದಾಲಿಕೆ ಆರೋಪ ಮಾಡಿದೆ. ರಾಜಸ್ಥಾನದ ಮುಖ್ಯಮಂತ್ರಿಗಳು ಮತ್ತು ಇತರೆ ನಾಯಕರು ಇದು ಬಿಜೆಪಿ ನಾಯಕರದ್ದೇ ಅಂತ ಬಹಿರಂಗವಾಗಿಯೇ ಹೇಳುತ್ತಿದೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಹಾಗೂ ರಾಜಸ್ಥಾನದ ಕಾಂಗ್ರೆಸ್ ಶಾಸಕರ ವಿರುದ್ಧ ದಾಖಲಾಗಿರುವ FIRನಲ್ಲಿ ಕೂಡ ಆಡಿಯೋವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ನಮೂದಿಸಲಾಗಿದೆ. ಹೀಗಾಗಿ ಸರ್ಕಾರ ಫೋನ್ ಟ್ಯಾಪಿಂಗ್ನಲ್ಲಿ ತೊಡಗಿದೆ ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಆರೋಪಿಸಿದ್ದಾರೆ.
ಪೈಲಟ್ ಮತ್ತು ಗೆಹ್ಲೋಟ್ ಫೈಟ್ ಆರಂಭವಾದ ಬೆನ್ನಲ್ಲೇ ಕಾಂಗ್ರೆಸ್ ಬಿಜೆಪಿ ಸರ್ಕಾರ ಉರುಳಿಸಲು ಷಡ್ಯಂತ್ರ ಮಾಡುತ್ತಿದೆ ಅನ್ನುವ ಆಡಿಯೋವನ್ನು ಬಿಡುಗಡೆಮಾಡಿತ್ತು. ಹೀಗಾಗಿ ರಾಜಸ್ಥಾನ ಸರ್ಕಾರ ಫೋನ್ ಟ್ಯಾಪಿಂಗ್ ಮಾಡಿದೆಯಾ..? ಅದಕ್ಕೆ ಪ್ರಮಾಣಿಕೃತ ವಿಧಾನ ಅನುಸರಿಸಿದೆಯಾ ಅನ್ನುವ ಪ್ರಶ್ನೆಯನ್ನು ಬಿಜೆಪಿ ಕೇಳಿದೆ. ಅಷ್ಟೇ ಅಲ್ಲ ಈ ಫೋನ್ ಟ್ಯಾಪಿಂಗ್ ಬಗ್ಗೆ ಸಮಗ್ರವಾಗಿ ಸಿಬಿಐ ತನಿಖೆ ಮಾಡಬೇಕು ಎಂದು ಆಗ್ರಹಿಸಿದೆ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರ ಪ್ರವಾಸದ ವಿವರ ಏಪ್ರಿಲ್ 16, 2024
50 ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ: ಚಿಕ್ಕಬಳ್ಳಾಪುರ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್
ನಿರ್ಧರಿಸಿದೆ ದೊಡ್ಡಬಳ್ಳಾಪುರ ಮತ್ತೊಮ್ಮೆ ಮೋದಿ ಸರ್ಕಾರ
ಬಿಜೆಪಿ ಗೆದ್ರೆ ದೇಶವೇ ಇರಲ್ಲ: ಮಗನ ವಿರುದ್ಧ ತಿರುಗಿಬಿದ್ದ ಅಪ್ಪ.!
ಮಠಗಳಿಗೆ ಭೇಟಿ ನೀಡಿ ಪೂಜ್ಯರ ಆಶೀರ್ವಾದ ಪಡೆದ ಡಾ.ಕೆ.ಸುಧಾಕರ್
ಇನ್ನೂ ನಾಲ್ಲೇ ದಿನದಲ್ಲಿ ಮ್ಯಾಜಿಕ್ ಆಗುತ್ತೆ ನೋಡ್ತಾರಿ ಎಂದ ವಿಜಯೇಂದ್ರ