Connect with us

Featured

ಸೀಲ್‌ಡೌನ್ ಆಗಿರೋ ಮನೆಯೇ ಟಾರ್ಗೆಟ್ – ಗುಬ್ಬಿಯಲ್ಲಿ ಕಳ್ಳರ ಗೋಲ್‌ಮಾಲ್..!

ರೈಸಿಂಗ್​ ಕನ್ನಡ :

ಪ್ರತಿನಿಧಿ, ಕೆ.ಆರ್ ಬಾಬು, ತುಮಕೂರು :

ಸೀಲ್‌ ಡೌನ್ ಆಗಿ ಬೀಗ ಜಡಿದ ಕೊವೀಡ್-19 ಸೋಂಕಿತರ ಮನೆಗೆ ಕನ್ನ ಹಾಕಿದ ಕಳ್ಳರು ಸುಮಾರು 3 ಲಕ್ಷ ರೂ.ಗಳ ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕೆ.ಜಿ.ಟೆಂಪಲ್ ಗ್ರಾಮದಲ್ಲಿ ನಡೆದಿದೆ.

ಕಳೆದ 14 ದಿನಗಳ ಹಿಂದೆ ಕೆ.ಜಿ.ಟೆಂಪಲ್ ಗ್ರಾಮದಲ್ಲಿ ಮಹಿಳೆಯೊಬ್ಬರು ಕೊರೋನಾ ಸೋಂಕಿತರೆಂದು ಧೃಢಪಟ್ಟ ಹಿನ್ನಲೆಯಲ್ಲಿ ಸೋಂಕಿರು ಸೇರಿದಂತೆ ಮನೆಯ ನಾಲ್ಕು ಮಂದಿ ಸದಸ್ಯರನ್ನು ಕ್ವಾರೆಂಟೈನ್ಗೆ ಒಳಪಡಿಸಲಾಗಿತ್ತು. ತುರ್ತು ಕ್ರಮ ಅನುಸರಿಸಿದ ತಾಲ್ಲೂಕು ಆಡಳಿತ ಸೋಂಕಿರ ಮನೆಗೆ ಸ್ಯಾನಿಟೇಜರ್ ಮಾಡಿ ಮನೆಗೆ ಬಾಗಿಲು ಹಾಕಲಾಯಿತು. ಸುತ್ತಲೂ 100 ಮೀಟರ್ ಸೀಲ್ಡೌನ್ ಪ್ರದೇಶವೆಂದು ಘೋಷಿಸಿ ನಿಷೇಧಿತ ಪ್ರದೇಶ ಎಂದು ಬ್ಯಾನರ್ ಸಹ ಹಾಕಲಾಯಿತು.

Advertisement

ಸಿ.ಎಸ್. ಪುರ ಠಾಣಾ ವ್ಯಾಪ್ತಿಯ ಈ ಗ್ರಾಮಕ್ಕೆ ಬಂದೋಬಸ್ತ್ ಒದಗಿಸಲಾಗಿತ್ತು. ಆದರೆ ಇದೀಗ ಸೋಂಕಿತರ ಮನೆಗೆ ಕನ್ನ ಹಾಕಿರುವುದು ಕ್ವಾರಂಟೈನ್ನಲ್ಲಿರುವ ಮಂದಿಗೆ ಆತಂಕ ತಂದಿದೆ. ಚಿಕಿತ್ಸೆ ಜೊತೆಗೆ ತಮ್ಮ ಮನೆಯ ಭದ್ರತೆ ಚಿಂತೆ ಮಾಡುವಂತಾಗಿದೆ. ಕೊರೋನಾ ವೈರಸ್ ಭೀತಿಯು ಕಳ್ಳರಿಗೆ ಕಾಣದಿರುವುದು ಅಚ್ಚರಿ ಮೂಡಿಸಿದೆ.

ಸದಾ ವಾಹನ ದಟ್ಟಣೆ ಇರುವ ಕೇಶಿಪ್ ರಸ್ತೆ ಬದಿಯ ಮನೆಗೆ ಬೀಗ ಜಡಿದು ಸುತ್ತಲೂ ಬ್ಯಾರಿಕೇಟ್ ಅವಳಡಿಸಿ ಯಾರೊಬ್ಬರೂ ಓಡಾಡದಂತೆ ಮಾಡಲಾಯಿತು. ಆದರೆ 14 ದಿನಗಳ ಕ್ವಾರೆಂಟೈನ್ ಮುಗಿಸಿ ಬಂದ ಸಾವಿತ್ರಮ್ಮ ಅವರ ಕುಟುಂಬಕ್ಕೆ ಶಾಕ್ ಕಾದಿತ್ತು. ಮನೆಯ ಬಾಗಿಲು ಹಾಗೆಯೇ ಹಾಕಿದೆ.

ಆದರೆ ಒಳಭಾಗದಲ್ಲಿ ಮನೆಯ ಬೀರು ಒಡೆದು 80 ಸಾವಿರ ರೂ ನಗದು ಜತೆ ಸುಮಾರು 2 ಲಕ್ಷ ರೂಗಳ ಬಂಗಾರ ಒಡವೆ ದೋಚಲಾಗಿದೆ. ಈ ಘಟನೆ ಇಡೀ ಕುಟುಂಬಕ್ಕೆ ಬಿಗ್ ಶಾಕ್ ನೀಡಿದೆ. ಕೊರೋನಾ ಬಂದಿದ್ದೇ ನಮ್ಮ ಬದುಕಿಗೆ ಬರೆ ಬಿತ್ತು. ಈ ಜತೆಗೆ ಗಾಯದ ಮೇಲೆ ಮತ್ತೆ ಬರೆ ಬಿದ್ದಂತೆ ಈ ಕಳವು ನಡೆದಿದೆ ಎಂದು ಸಾವಿತ್ರಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೊರೋನಾ ಸೊಂಕು ತಗುಲಿದ ತಕ್ಷಣ ಕಾರ್ಯ ಪ್ರವೃತ್ತರಾಗುವ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಎರಡು ವಾರಗಳ ಸೋಂಕಿತರ ಮನೆಯ ಭದ್ರತೆ ವಹಿಸಿಕೊಳ್ಳಬೇಕಿದೆ. ಸೀಲ್ಡೌನ್ ಪ್ರದೇಶದ ಭದ್ರತೆಗೆ ಪೊಲೀಸ್ ಸಿಬ್ಬಂದಿ ಹೊಣೆಯಾಗಬೇಕಿದೆ. ಸೋಂಕಿತರ ಮನೆಗೆ ಕನ್ನ ಹಾಕಲಾಗಿದೆ ಅಂದರೆ ಪೊಲೀಸ್ ವೈಪಲ್ಯ ಕಂಡು ಬಂದಿದೆ. ಮನೆಯ ಪಕ್ಕದ ಖಾಲಿಮನೆಯ ಮೂಲಕ ಕನ್ನ ಹಾಕಿರುವ ರೀತಿ ಯಾರೋ ತಿಳಿದೇ ಈ ಕೃತ್ಯವೆಸಗಿರುವಂತಿದೆ.

ಕ್ವಾರಂಟೈನ್‌ಗೆ ಒಳಪಟ್ಟು ನೋವು ಅನುಭವಿಸಿರುವ ಈ ಕುಟುಂಬಕ್ಕೆ ಮೂರು ಲಕ್ಷ ರೂಪಾಯಿಯ ಕಳ್ಳತನಕ್ಕೆ ಯಾರು ಜವಾಬ್ದಾರರು, 24 ಗಂಟೆ ಭದ್ರತೆ ಕಾಯಬೇಕಾದ ಪೊಲೀಸ್ ಹೊಣೆಯೇ ಅಥವಾ ತಾಲ್ಲೂಕು ಆಡಳಿತ ಜವಾಬ್ದಾರಿ ಹೊರುತ್ತದೆಯೇ ಈ ಜತೆಗೆ ಕೊರೋನಾ ತುರ್ತು ನಿಧಿಯಲ್ಲೇ ಸೋಂಕಿತರ ಕುಟುಂಬಕ್ಕೆ ಆಗಿರುವ ಕಳವು ನಷ್ಟವನ್ನು ಭರಿಸಬೇಕಿದೆ ಎಂದು ಸ್ಥಳೀಯ ಮುಖಂಡ ನಾಗಸಂದ್ರ ವಿಜಯ್ ಕುಮಾರ್​ ಒತ್ತಾಯಿಸಿದರು.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ