Featured
ಫ್ರೆಂಚ್ ಬಿರಿಯಾನಿ ರೆಡಿ – ರುಚಿ ನೋಡಲು ಒಂದು ವಾರ ಕಾಯಿರಿ..!
ರೈಸಿಂಗ್ ಕನ್ನಡ :
ಸಿನಿಮಾ ಡೆಸ್ಕ್ :
ಬಹು ನಿರೀಕ್ಷಿತ ಕನ್ನಡದ ಫ್ರೆಂಚ್ ಬಿರಿಯಾನಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ ಎ ತಲ್ವಾರ್ ನಿರ್ಮಾಣದ ಈ ಚಿತ್ರಕ್ಕೆ ಪನ್ನಾಗಭರಣರವರ ನಿರ್ದೇಶನವಿದ್ದು, ಡ್ಯಾನಿಶ್ ಸೇಠ್, ಸಾಲ್ ಯೂಸುಫ್ ಪ್ರಮುಖ ಪಾತ್ರದಲ್ಲಿದ್ದಾರೆ.
ಫ್ರೆಂಚ್ ಬಿರಿಯಾನಿ ಚಿತ್ರ ಇದೇ ಜುಲೈ 24 ರಂದು ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ಬಿಡುಗಡೆಯಾಗಲಿದೆ.
ಡ್ರಾಮಾ, ಆ್ಯಕ್ಷನ್ ಮತ್ತು ಕಾಮಿಡಿ ಒಳಗೊಂಡಿರುವ ಈ ಚಿತ್ರದಲ್ಲಿ ಡ್ಯಾನಿಶ್ ಸೇಠ್, ಬೆಂಗಳೂರಿನ ಆಟೋ ರಿಕ್ಷಾ ಚಾಲಕ ಆಸ್ಗರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡುವ ಸೈಮನ್ ಪಾತ್ರದಲ್ಲಿ ಸಾಲ್ ಯೂಸುಫ್ ಅಭಿನಯಿಸಿದ್ದಾರೆ. ಕಳೆದುಹೋದ ಸಮಾರನ್ನ ಹುಡುಕುವಾಗ ಸೈಮನ್ ಮತ್ತು ಆಸ್ಗರ್ ಎರಡೂ ಪಾತ್ರಗಳು ಪರಿಚಯವಾಗಲಿದ್ದು, ನಂತರದ ಬೆಳವಣಿಗೆಗಳು ಕುತೂಹಲ ಮೂಡಿಸಲಿದೆ. ಫ್ರೆಂಚ್ ಬಿರಿಯಾನಿ ಚಿತ್ರ ಜುಲೈ 24 ರಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ 200 ಕ್ಕೂ ಹೆಚ್ಚು ದೇಶಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.
ಫ್ರೆಂಚ್ ಬಿರಿಯಾನಿ ಚಿತ್ರ ಬಿಡುಗಡೆ ಬಗ್ಗೆ ಬಹಳ ಕುತೂಹಲದಿಂದ್ದೇವೆ. ನಮ್ಮ ವೀಕ್ಷಕರಿಗೆ ಆಕ್ಷನ್ ಪ್ಯಾಕ್ಡ್ ಕಾಮಿಡಿ ಥ್ರಿಲ್ಲರ್ ನೀಡಲು ನಾವು ಈ ಚಿತ್ರದಲ್ಲಿ ಪ್ರಯತ್ನಿಸಿದ್ದೇವೆ. ಡ್ಯಾನಿಶ್ ಸೇಠ್ ಮತ್ತು ಸಾಲ್ ಯೂಸುಫ್ ಪಾತ್ರಗಳು ಬಹಳ ಚೆನ್ನಾಗಿ ಮೂಡಿಬಂದಿದ್ದು, ಆ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಅಮೆಜಾನ್ ಪ್ರೈಮ್ ಮೂಲಕ ಫ್ರೆಂಚ್ ಬಿರಿಯಾನಿ ಏಕಕಾಲದಲ್ಲಿ 200 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗ್ತಿರೋದು ಸಹ ಸಂತಸದ ವಿಚಾರ
– ಪನ್ನಗಾಭರಣ, ನಿರ್ದೇಶಕ
ಸಿನಿಮಾ ಒಂದು ಮನರಂಜನೆ. ಪಿಆರ್‌ಕೆ ಪ್ರೊಡಕ್ಷನ್ ನಲ್ಲಿ ನಾವು ವೀಕ್ಷಕರನ್ನು ಮನರಂಜಿಸುವ ಸಿನಿಮಾಗಳನ್ನ ನೀಡುತ್ತಾ ಬಂದಿದ್ದೇವೆ. ಉತ್ತಮ ನಿರೂಪಣೆ ಮತ್ತು ಹಾಸ್ಯದ ಮೂಲಕ ಪ್ರೇಕ್ಷಕರನ್ನ ನಗಿಸಲು ಸಾಧ್ಯವಾದರೆ ಅದೇ ಗೆಲುವು. ಫ್ರೆಂಚ್ ಬಿರಿಯಾನಿ ಕನ್ನಡದ ಉತ್ತಮ ಮನರಂಜನಾ ಚಿತ್ರಗಳಲ್ಲಿ ಒಂದಾಗಲಿದೆ
- ಅಶ್ವಿನಿ ಪುನೀತ್ ರಾಜ್‌ಕುಮಾರ್, ನಿರ್ಮಾಪಕಿ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?