Featured
ವರುಣನ ಆರ್ಭಟಕ್ಕೆ ಕಲಬುರಗಿ ತತ್ತರ: ಜಮೀನಿಗೆ ನುಗ್ಗಿದ ನೀರು ರೈತರು ಕಂಗಾಲು
![](https://risingkannada.com/wp-content/uploads/2020/07/kalburgi-phooto-2.jpg)
ರೈಸಿಂಗ್ಕನ್ನಡ:
ಕಲಬುರ್ಗಿ:
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ವರ್ಷಧಾರೆ. ವರುಣನ ಆರ್ಭಟಕ್ಕೆ ಕಲಬುರಗಿ ಜನ ತತ್ತರಿಸಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಕಲಬುರಗಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು,ಜಿಲ್ಲೆಯ ಭಾಗಶಃ ಕೆರೆ ಕಟ್ಟೆಗಳು ತುಂಬಿಹರಿಯುತ್ತಿದೆ.
ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ರೈತರ ಜಮೀನುಗಳೆಲ್ಲಾ ನೀರಿನಲ್ಲಿ ಕೊಚ್ಚಿಹೋಗಿದೆ.ಮತ್ತೊಂದು ಕಡೆ ನಗರದ ಕೆಲ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿವೆ.
![](https://risingkannada.com/wp-content/uploads/2020/07/kalburgi-phoot-1.jpg)
ಇತ್ತ ಚಿಂಚಿಳ್ಳಿ ತಾಲೂಕಿನಲ್ಲಿರುವ ಮುಲ್ಲಾಮಾರಿ ಜಲಾಶಯದಿಂದ ನೀರು ಹರಿ ಬಿಟ್ಟಿದ್ದು ನದಿ ಪಾತ್ರದ ರೈತರ ಜಮೀನಿಗೆ ನೀರು ನುಗ್ಗಿದ್ದು, ಹೊಲಗದ್ದೆಗಳು ಕೆರೆಯಂತಾಗಿ ಮಾರ್ಪಟ್ಟಿವೆ.
ಒಂದು ಕಡೆ ಕೊರೊನಾ ಹೊಡೆತಕ್ಕೆ ತತ್ತರಿಸಿರೋ ಕಲಬುರಗಿ ಜನತೆಗೆ ವರುಣನ ಅಬ್ಬರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯ ಕಲಬುರಗಿಯಲ್ಲಿ ಇನ್ನು ಮಂಜುಮುಸುಕಿದ ವಾತಾವರಣವಿದ್ದು, ಮತ್ತೆ ಗುರುವಾರ ಧಾರಕಾರ ಮಳೆ ಸುರಿಯುವ ಸಾಧ್ಯತೆ ಇದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?